ಧಾರವಾಡ: ಇಲ್ಲಿನ ಕಾಸ್ಮಸ್ ಕ್ಲಬ್ನ 2025- 26 ಮತ್ತು 2026- 2027ನೇ ಸಾಲಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ನಿತಿನ ಟಗರಪೂರ, ಗೌರವ ಕಾರ್ಯದಶಿರ್ ಅಶೋಕ ಹಿರೇಮಠ, ಜಂಟಿ ಕಾರ್ಯದಶಿರ್ ಎಸ್.ಬಿ. ಕಿತ್ತೂರ, ಖಜಾಂಚಿ ವಿಜಯ ಸುಣಗಾರ ಅವಿರೋಧವಾಗಿ ಆಯ್ಕೆಯಾದರು. ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಎಚ್.ಎಫ್. ಹೆಬ್ಬಾಳ, ಆಡಳಿತ ಮಂಡಳಿಗೆ ಎಂ.ಎಸ್. ಹಾಲಭಾವಿ, ಎ.ಸಿ. ಪುರದ, ಅಜ್ಜಯ್ಯ ಗುಡ್ಡದಮಠ, ಸಿ.ಎಚ್. ಜೋಗಿಹಳ್ಳಿ, ಎಸ್.ಎಂ. ರುದ್ರಸ್ವಾಮಿ, ಪರಮೇಶ್ವರ ತೇಗೂರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.