Elderly woman raped and murdered 
ರಾಜ್ಯ

ಅತ್ಯಚಾರವೆಸಗಿ ವೃದ್ಧೆಯ ಕೊಲೆ

ಕೋಲಾರ: ತಾಲೂಕಿನ ವೇಮಗಲ್​ ಪೊಲೀಸ್​ ಠಾಣಾ ವ್ಯಾಪ್ತಿಯ ಚಾಕರಸನಹಳ್ಳಿಯಲ್ಲಿ ವೃದ್ಧೆಯ ಮೇಲೆ ಅತ್ಯಚಾರವೆಸಗಿ ಕೊಲೆ ಮಾಡಲಾಗಿದೆ. ನಾರಾಯಣಮ್ಮ (70) ಕೊಲೆಯಾದರು.
ಎಂದಿನಂತೆ ಹಸುಗಳಿಗೆ ಮೇವು ಕಟಾವು ಮಾಡಿಕೊಂಡು ಬರಲು ತೋಟದ ಕಡೆ ಹೋಗುತ್ತಿದ್ದಾಗ ಕಾಮುಕರು ಹೊಂಚು ಹಾಕಿಕೊಂಡು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಟನಾ ಸ್ಥಳಕ್ಕೆ ಶ್ವಾನದಳ ಸಿಬ್ಬಂದಿ, ವೇಮಗಲ್​ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.