Elderly woman murdered for asking for loan repayment
ಚಿಂತಾಮಣಿ: ಶ್ರೀನಿವಾಪುರ ತಾಲೂಕಿನ ಲ್ಮಪುರದಲ್ಲಿ ವೃದ್ಧೆಯನ್ನು ಕೊಂದು ಚಿಂತಾಮಣಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಶವ ಎಸೆದು ಹೋಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ರಾಯಲ್ಪಾಡು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಲ್ಮಪುರದ ರೆಡ್ಡಮ್ಮ (70) ಕೊಲೆಯಾಗಿದ್ದು, ಚಿಂತಾಮಣಿ ತಾಲೂಕಿನ ರಾಮಪುರ ನಿವಾಸಿಗಳಾದ ತಿಮ್ಮಪ್ಪ (33), ಮುನಿರಾಜು (32) ಬಂಧಿತರು. ಕೊಟ್ಟ ಸಾಲ ವಾಪಸ್ ಕೇಳಿದ್ದೇ ವೃದ್ಧೆಯ ಕೊಲೆಗೆ ಕಾರಣ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
"
ಬಯಲಾಗಿದ್ದೇಗೆ?
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಆವಲದೊಡ್ಡಿ ಗ್ರಾಮದಲ್ಲಿ ರೆಡ್ಡಮ್ಮ ಅವರ ಪುತ್ರ, ಪುತ್ರಿ ವಾಸವಿದ್ದು, ತಾಯಿಗೆ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಹಾಗಾಗಿ ರೆಡ್ಡಮ್ಮ ಪುತ್ರ ಶಿವಾರೆಡ್ಡಿ ಗ್ರಾಮಕ್ಕೆ ಬಂದು ನೋಡಿದಾಗ ತಾಯಿ ಕಾಣೆಯಾಗಿರುವುದು ಬೆಳಕಿಗೆ ಬಂದಿತ್ತು. ನಂತರ ಮೇ 29ರಂದು ರಾಯಲ್ಪಾಡು ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ವೃದ್ಧೆ ಮತ್ತು ತಿಮ್ಮಪ್ಪನ ಮೊಬೈಲ್ ಕರೆಗಳ ವಿವರ ಹಾಗೂ ಇನ್ನಿತರ ಸಾಕ್ಷ$್ಯ ಸಂಗ್ರಹಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ.
ಪ್ರಕರಣವೇನು?: ರೆಡ್ಡಮ್ಮಅವರ ಮನೆಗೆ ತಿಮ್ಮಪ್ಪ ಗಾರೆ ಕೆಲಸಕ್ಕೆ ಬರುತ್ತಿದ್ದ. ನಂತರ ನಂಬಿಕೆ ಮೇಲೆ ತಿಮ್ಮಪ್ಪನಿಗೆ ರೆಡ್ಡಮ್ಮ ಸಾಲ ನೀಡಿದ್ದರು. ಆದರೆ, ಇತ್ತೀಚೆಗೆ ಸಾಲದ ಹಣ ವಾಪಸ್ ಕೇಳಿದಾಗ ಕೊಡದೇ ತಿಮ್ಮಪ್ಪ ಮನೆಯನ್ನು ತಾತ್ಕಾಲಿಕವಾಗಿ ತಿರುಪತಿಗೆ ಸ್ಥಳಾಂತರ ಮಾಡಿದ್ದ.
ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಶವ ಬಿಸಾಡಿರುವ ಸ್ಥಳವನ್ನು ಪೊಲೀಸರು ಪರಿಶೀಲಿಸಿದರು. ಮೇ 17ರಂದು ರೆಡ್ಡಮ್ಮ ಕುಟುಂಬ ಸದಸ್ಯರೊಂದಿಗೆ ಮನೆ ದೇವರಾದ ಚಿಂತಾಮಣಿ ತಾಲೂಕಿನ ಮಿಂಡಿಗಲ್ ಚೌಡೇಶ್ವರಿ ದೇಗುಲಕ್ಕೆ ಬಂದಿದ್ದರು. ನಂತರ ತಾನು ವಾಸವಿರುವ ಮನೆಗೆ ತೆರಳುತ್ತಿದ್ದಾಗ ತಿಮ್ಮಪ್ಪ ಎದುರಿಗೆ ಸಿಕ್ಕಿದ್ದಾನೆ. ಆಗ ಸಾಲ ವಾಪಸ್ ಕೊಡುವಂತೆ ರೆಡ್ಡಮ್ಮ ಒತ್ತಾಯಿಸಿದ್ದಾರೆ. ಆಮೇಲೆ ಹಣ ನೀಡುತ್ತೇನೆ ಎಂದು ವೃದ್ಧೆಯನ್ನು ಕರೆಸಿಕೊಂಡು ತಿಮ್ಮಪ್ಪ ಹಾಗೂ ಸಹೋದರ ಮುನಿರಾಜು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಆಕೆಯ ಮೈ ಮೇಲಿದ್ದ ಚಿನ್ನದ ಸರ ಹಾಗೂ ಮೊಬೈಲ್ ಕಿತ್ತುಕೊಂಡಿದ್ದಾರೆ. ಸಾಕ್ಷ$್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಮೇ 18ರಂದು ರಾತ್ರಿ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದರು.