Elderly woman dies without treatment 
ರಾಜ್ಯ

ಚಿಕಿತ್ಸೆ ಫಲಿಸದೆ ಮೃತಪಟ್ಟ ವೃದ್ಧೆ

ಚಿಂತಾಮಣಿ: ನಗರದ 25ನೇ ವಾರ್ಡ್​ನ ಕೆಜಿಎನ್​ ಬಡಾವಣೆಯಲ್ಲಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಗಾಯಗೊಂಡಿದ್ದ ಲಕ್ಷಿದೇವಮ್ಮ (62) ಸೋಮವಾರ ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದು, ಮಂಗಳವಾರ ಅಂತ್ಯ ಸಂಸ್ಕಾರ ನೆರವೇರಿತು.
ತೀವ್ರ ಸುಟ್ಟ ಗಾಯಗಳಾಗಿದ್ದ ವೃದ್ಧೆಯನ್ನು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ತಾಯಿಯನ್ನು ಬಲಿ ಪಡೆದ ಪುತ್ರನ ಪ್ರೇಮ: ಬೆಂಕಿ ಪ್ರಕರಣಕ್ಕೆ ಪುತ್ರನ ಪ್ರೇಮವೇ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ.
ಮೃತಳ ಗಂಡ ರಾಧಾಕೃಷ್ಣಪ್ಪ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ನಮ್ಮ ಪುತ್ರ ಪುರುಷೋತ್ತಮ್​ 10 ತಿಂಗಳ ಹಿಂದೆ ಕೋಲಾರ ತಾಲೂಕಿನ ಮೂಡಲಚಿಂತಹಳ್ಳಿಯ ಯುವತಿಯನ್ನು ಪ್ರೀತಿಸಿ ಕರೆದುಕೊಂಡು ಹೋಗಿದ್ದ. ಈ ವಿಚಾರವಾಗಿ ರಾಜಿ ಮಾಡಿ ಯುವತಿಯನ್ನು ಪಾಲಕರ ಜತೆಯಲ್ಲಿ ಕಳುಹಿಸಿದ್ದೆವು. ಆದರೆ, ಪುನ ಇಬ್ಬರು ಪರಾರಿಯಾಗಿದ್ದು, ಈ ವಿಚಾರವಾಗಿ ಯುವತಿ ಅಣ್ಣಂದಿರು ಆಗಾಗ ಮನೆಯ ಬಳಿ ಬಂದು ಗಲಾಟೆ ಮಾಡುತ್ತಿದ್ದರು.
ಮಾ.20ರಂದು ರಾತ್ರಿ 10ಕ್ಕೆ ಬಂದು ಗಲಾಟೆ ಮಾಡಿ, ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು. ಪುನ@ ರಾತ್ರಿ 11ಕ್ಕೆ ನನ್ನ ಹೆಂಡತಿಯ ಬಟ್ಟೆಗಳಿಗೆ ಬೆಂಕಿ ತಗುಲಿ ಕಿರುಚಾಡುತ್ತಿದ್ದಳು. ಹೊರಗೆ ಬಂದಾಗ ನಮ್ಮ ಮನೆಯ ಬಳಿಯಿಂದ ಇಬ್ಬರು ಹೋಗುತ್ತಿದ್ದು, ಯಾರು ಎಂದು ಗುರುತು ಸಿಕ್ಕಿಲ್ಲ. ಯುವತಿಯ ಅಣ್ಣಂದಿರ ಮೇಲೆ ಅನುಮಾನವಿದೆ ಎಂದು ಲಕ್ಷಿ$್ಮದೇವಮ್ಮ ಪತಿ ರಾಧಾಕೃಷ್ಣಪ್ಪ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ನಗರಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಮಾಹಿತಿ ಇದೆ. ಬಂಧನ ಮತ್ತು ವಿಚಾರಣೆಯ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ಬಹಿರಂಗಗೊಳಿಸಿಲ್ಲ.