ಚಿನ್ನಾಭರಣಕ್ಕಾಗಿ ಶೋಭಾ ಹತ್ಯೆ
ನೆಲಮಂಗಲ : ನಗರದ ಪೇಟೆಬೀದಿಯ ಸರ್ಕಾರಿ ಶಾಲೆ ಮುಂಭಾಗ ಚಿನ್ನಾಭರಣಕ್ಕಾಗಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಅಸ್ವಸ್ಥ ಪತಿಯ ಎದುರಿನಲ್ಲೇ ವೃದ್ದೆಯನ್ನು ಭೀಕರ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ನಗರಪೇಟೆ ಬೀದಿ ನಿವಾಸಿ ಶೋಭಾ(70) ಮೃತ ವೃದ್ಧೆ. ರಂಗನಾಥ್ ಹಾಗೂ ಶೋಭಾ ದಂಪತಿಗೆ ಮಕ್ಕಳಿಲ್ಲ. ಇಬ್ಬರೇ ವಾಸವಾಗಿದ್ದರು. ಫೆ. 18ರಂದು ಸಂಜೆ 4 ಗಂಟೆಗೆ ವೃದ್ಧೆ ಪೇಟೆಗೆ ತೆರಳಿಸಂಜೆ 4&30ರ ವೇಳೆಯಲ್ಲಿ ಮನೆಗೆ ಮರಳಿದಾಗ ದುಷ್ಕರ್ಮಿಗಳು ಮನೆಗೆ ನುಗ್ಗಿ ಆಕೆಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಸಿದು ಮಾರಕಾಸ್ತ್ರಗಳಿಂದ ಕುತ್ತಿಗೆ ಹಾಗೂ ತಲೆ ಭಾಗಕ್ಕೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ವೃದ್ಧನ ಮುಂದೆಯೇ ಹತ್ಯೆ: ಅನೇಕ ವರ್ಷಗಳಿಂದ ಮಾನಸಿಕ ಹಾಗೂ ದೈಹಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಪತಿ ರಂಗನಾಥ ಅವರಿಗೆ ನಿತ್ಯ ಸ್ಥಳಿಯ ವೈದ್ಯರು ಮನೆಗೆ ಆಗಮಿಸಿ ಥೆರಪಿ ಹಾಗೂ ಕೆಲ ಚಿಕಿತ್ಸೆ ನೀಡುತ್ತಿದ್ದರು. ಮನೆಯಲ್ಲಿ ವೃದ್ಧ ದಂಪತಿ ಇದ್ದ ವೇಳೆ ವೃದ್ದನ ಮುಂದೆಯೇ ವೃದ್ದೆಯನ್ನು ಭೀಕರ ಹತ್ಯೆ ಮಾಡಿದ್ದು ಬೆಳಕಿಗೆ ಬಂದಿದೆ.
ಟನೆಯ ಮಾಹಿತಿ ಪಡೆದ ಗ್ರಾಮಾಂತರ ಜಿಲ್ಲಾ ಅಪಾರ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜು, ಡಿವೈಎಸ್ಪಿ ಜಗದೀಶ್, ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಭರತ್ಗೌಡ ಸೇರಿ ಪೊಲೀಸ್ ಸಿಬ್ಬಂದಿ ಸ್ಥಳ ಪರಿಶೀಲಿದ್ದಾರೆ.
ಬಳಿಕ ಶ್ವಾನದಳ ಸ್ಥಳದಲ್ಲಿ ಪರೀಶೀಲಿಸಿದ್ದು, ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ದಾಖಲಿಸಿಕೊಂಡು ನಗರ ಪೊಲೀಸ್ ಠಾಣೆ ಆರಕ್ಷಕ ನಿರೀಕ್ಷಕ ಭರತ್ಗೌಡ ನೇತೃತ್ವದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿಶೇಷ ತಂಡ ರಚಿಸಿದ್ದು ದುಷ್ಕರ್ಮಿಗಳಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.