Man Kills Blind Wife Hangs Himself Bangalore
- ಕಣ್ಣು ಕಾಣದ, ಕಿವಿ ಕೇಳದ ಪತ್ನಿ ಕೊಂದು ಆತ್ಮಹತ್ಯೆಗೆ ಶರಣಾದ ವೃದ್ಧ
- ಹೃದಯಸಂಬಂಧಿ ಕಾಯಿಲೆಗೆ ಬೇಸತ್ತಿದ್ದ ಪತಿ
- ಮಗನಿಗೆ ಹೊರೆಯಾಗೋದು ಬೇಡ ಎಂದು ನಿರ್ಧರಿಸಿ ಆತ್ಮಹತ್ಯೆಗೆ ಶರಣು
ಬೆಂಗಳೂರು: 85 ವರ್ಷದ ವೃದ್ಧರೊಬ್ಬರು ಕಣ್ಣು ಕಾಣದ, ಕಿವಿಯೂ ಕೇಳದ 77 ವರ್ಷದ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು, ತಾವು ಆತ್ಮಹತ್ಯೆಗೆ ಶರಣಾದ ಘಟನೆ ಸಂಪಿಗೆಹಳ್ಳಿಯ ಚೊಕ್ಕನಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ಮೂಲತಃ ಬಿಹಾರದ ಶಿವನಂದನ್ ಪ್ರಸಾದ್ (85) ಮತ್ತು ಸುಮಿತ್ರಾ ದೇವಿ (77) ಎಂದು ಗುರುತಿಸಲಾಗಿದೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
ನಡೆದ ಘಟನೆ ಏನು?
ಸೋಮವಾರ ರಾತ್ರಿ ಊಟ ಮಾಡಿದ ನಂದನ್ ಪ್ರಸಾದ್ ಹಾಗೂ ಸುಮಿತ್ರಾ ದೇವಿ ಬಳಿಕ ತಮ್ಮ ಕೊಠಡಿಗೆ ಸಮಿತ್ರಾದೇವಿ- ನಂದನ್ ಪ್ರಸಾದ್ ಕೊಂಡಿರುವ ಹೋಗಿದ್ದಾರೆ. ಮಲಗಿದ್ದನ್ನು ಎಲ್ಲರೂ ಖಾತರಿಪಡಿಸಿ ನಂದನ್, ಮಧ್ಯರಾತ್ರಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಕೊಠಡಿಯ ಕಿಟಕಿಗೆ ಬಟ್ಟೆಯಿಂದ ನೇಣು ಹಾಕಿ ಕೊಂಡಿದ್ದಾರೆ.
ಜೂನ್ 22ರಂದು ಬೆಳಗ್ಗೆ ಎಷ್ಟು ಹೊತ್ತಾದರೂ ಬಾಗಿಲು ತೆಗೆದಿಲ್ಲ. ಇದರಿಂದ ಅನುಮಾನಗೊಂಡ ಮಗ, ಬಾಗಿಲು ತಳ್ಳಿ ಒಳಗೆ ನುಗ್ಗಿದಾಗ ಇಬ್ಬರೂ ಶವವಾಗಿ ಕಂಡಿದ್ದಾರೆ. ಕೂಡಲೇ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದ್ದಾರೆ.
ದೂರಿನ ಮೇರೆಗೆ ಅಪಾರ್ಟ್ಮೆಂಟ್ಗೆ ಬಂದ ಪೊಲೀಸರು ಸ್ಥಳ ಪರಿಶೀಲನೆ ಮಾಡಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 'ನಮ್ಮ ತಂದೆ-ತಾಯಿಯವರ ಸಾವಿನ ಬಗ್ಗೆ ಯಾವುದೇ ಅನುಮಾನವಿಲ್ಲವೆಂದು' ಪೊಲೀಸರ ಬಳಿ ಮೃತರ ಮಗ, ಹೇಳಿಕೆ ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಯಿಲೆಯಿಂದ ಬಳಲುತ್ತಿದ್ದ ಪತಿ ಹಾಗೂ ಪತ್ನಿ
ಆತ್ಮಹತ್ಯೆಗೆ ಶರಣಾದ ನಂದನ್ ಪ್ರಸಾದ್ ಹಲವು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಮಿತ್ರಾ ದೇವಿಗೆ ಸಂಪೂರ್ಣವಾಗಿ ಕಣ್ಣುಗಳು ಕಾಣಿಸುತ್ತಿರಲಿಲ್ಲ, ಕಿವಿಯೂ ಕೇಳಿಸುತ್ತಿರಲಿಲ್ಲ. ಇದೇ ಕಾರಣಕ್ಕೆ ಮೊದಲು ಪತ್ನಿಯನ್ನು ಕೊಲೆ ಮಾಡಿರುವ ನಂದನ್ ಪ್ರಸಾದ್ ಕೊನೆಗೆ ತಾವೂ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಗನ ಕುಟುಂಬದ ಜೊತೆ ದಂಪತಿ ವಾಸವಿದ್ದರು. ಮೋಹನ್, ಆಸ್ಸಾಂ ವಾಯುದಳದಲ್ಲಿ 38 ವರ್ಷ ಸೇವೆ ಸಲ್ಲಿಸಿ 2025ರ ಜನವರಿ 31ರಂದು ವಯೋ ನಿವೃತ್ತಿ ಹೊಂದಿದ್ದರು. ಬಳಿಕ ಬೆಂಗಳೂರಿಗೆ ಬಂದು ಸಂಪಿಗೆಹಳ್ಳಿ ಸಮೀಪದ ಚೊಕ್ಕನಹಳ್ಳಿಯಲ್ಲಿರುವ ಅಪಾರ್ಟ್ ಮೆಂಟ್‌ನಲ್ಲಿ ವಾಸವಾಗಿದ್ದರು. ಹತ್ತಿರದ ಖಾಸಗಿ ಕಾಲೇಜಿನಲ್ಲಿ ಮೋಹನ್, ಸೆಕ್ಯೂರಿಟಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಮಗನಿಗೆ ಹೊರೆಯಾಗಬಾರದು ಎಂದು ಭಾವಿಸಿರುವ ನಂದನ್ ಪ್ರಸಾದ್ ಇಂತಹ ತೀರ್ಮಾನ ಕೈಗೊಂಡಿರಬಹುದು ಎನ್ನಲಾಗಿದೆ, (ಏಜೆನ್ಸೀಸ್).