Elderly man killed in accident
ಚಿಂತಾಮಣಿ: ಚೊಕ್ಕರೆಡ್ಡಿಹಳ್ಳಿ ಸಮೀಪ ಸೋಮವಾರ ಸಂಜೆ 2 ಬೈಕ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದು, ಯುವಕ ಗಂಭೀರ ಗಾಯಗೊಂಡಿದ್ದಾನೆ.
ಚೊಕ್ಕರೆಡ್ಡಿಹಳ್ಳಿ ನಿವಾಸಿ ನಾಗರಾಜ್ (65) ಮೃತ. ಅಂಬಾಜಿದುರ್ಗ ಹೋಬಳಿಯ ಉಲ್ಲಪ್ಪನಹಳ್ಳಿ ನಿವಾಸಿ ಜಗದೀಶ್ (22) ಗಾಯಗೊಂಡಿದ್ದು, ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಂತಾಮಣಿ ಗ್ರಾಮಾಂತರ ಸ್ಥಳ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.