Elderly man dies of snakebite
ಮುಳಬಾಗಿಲು: ಅಂಗೊಂಡಹಳ್ಳಿಯಲ್ಲಿ ಬುಧವಾರ ರಾತ್ರಿ ಹಸುಗಳಿಗೆ ಮೇವು ಹಾಕುವ ವೇಳೆ ನಾಗರಹಾವು ಕಚ್ಚಿ ವೆಂಕಟೇಶಪ್ಪ (80) ಎಂಬುವರು ಮೃತಪಟ್ಟಿದ್ದಾರೆ.
ಹಾವು ಕಚ್ಚಿದ ಸ್ವಲ್ಪ ಕ್ಷಣದ ನಂತರ ಕುಸಿದು ಬಿದ್ದ ಇವರನ್ನು ಮನೆಯವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಅಸುನೀಗಿದ್ದಾರೆ. ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.