ರಾಜ್ಯ

ಏಕಂಬಾ ಇಂಜಿನಿಯರ್​ ಭಾಗಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಉಡಾವಣೆ ತಂತ್ರಜ್ಞರ ತಂಡದಲ್ಲಿ ತಾಂತ್ರಿಕ ಕೌಶಲ ಪ್ರದರ್ಶಿಸಿದ ನರಸಿಂಗ ಶಿಂಧೆ
  • ರಾಕೆಟ್​ ವಿಕ್ರಮ್​-1 ಯಶಸ್ಸಿನಲ್ಲಿ
ಔರಾದ್​: ಶ್ರೀಹರಿಕೋಟಾದಿಂದ ಯಶಸ್ವಿ ಉಡಾವಣೆ ಕಂಡಿರುವ ಭಾರತದ ಮೊದಲ ಖಾಸಗಿ ಸ್ಕೆರೂಟ್​ ಸಂಸ್ಥೆ ರಾಕೆಟ್​ ವಿಕ್ರಮ್​&1 ತಂತ್ರಜ್ಞರ ತಂಡದಲ್ಲಿ ಪ್ರಮುಖ ಕಾರ್ಯನಿರ್ವಹಿಸುವ ಮೂಲಕ ಗಡಿ ಭಾಗದ ಎಕಂಬಾ ಗ್ರಾಮ ಮೂಲದ ಇಂಜಿನಿಯರ್​ ನರಸಿಂಗ ಮಾಧವರಾವ ಶಿಂಧೆ ಗಮನಸೆಳೆದಿದ್ದಾರೆ.
ಸ್ವಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ, ಬೀದರ್​ ಗುರುನಾನಕ ದೇವ್​ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಮೆಕಾನಿಕಲ್​ ಇಂಜಿನಿಯರಿಂಗ್​ ಪದವಿ ಮುಗಿಸಿದ ಬಳಿಕ 2020ರಿಂದ 2023ರವರೆಗೆ ಡಿಆರ್​ಡಿಒದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದರು. ನಂತರ ಸ್ಕೆರೂಟ್​ ಏರೋಸ್ಪೇಸ್​ ಖಾಸಗಿ ಸಂಸ್ಥೆಯಲ್ಲಿ ಕ್ಯಾಡ್​ ಆ್ಯಂಡ್​ ಕಾನ್ಫಿಗರೇಶನ್​ ವಿಭಾಗದಲ್ಲಿ ರಚನಾತ್ಮಕ ಇಂಜಿನಿಯರ್​ ಆಗಿ ಸೇವೆ ಸಲ್ಲಿಸುವ ಮೂಲಕ ವಿಕ್ರಮ್​-&1 ತಂಡದ ಸದಸ್ಯರಾಗಿ ರಾಕೆಟ್​ ಇಂಜಿನ್​ ಪರೀಕ್ಷೆ, ವಿನ್ಯಾಸ ಮತ್ತು ಅಭಿವೃದ್ಧಿ ಹಂತದಲ್ಲಿ ತಾಂತ್ರಿಕ ಕೌಶಲ ಪ್ರದರ್ಶಿಸಿ ದೇಶ ಹೆಮ್ಮೆ ಪಡುವಂಥ ಕಾರ್ಯದಲ್ಲಿ ಭಾಗಿಯಾಗಿ ನಾಡಿಗೆ ಕೀರ್ತಿ ತಂದಿದ್ದಾರೆ.
ಈ ರಾಕೆಟ್​ ನಿಮಾರ್ಣದಲ್ಲಿ ಶ್ರಮಿಸಿದ ಪ್ರತಿಯೊಬ್ಬ ಇಂಜಿನಿಯರ್​, ತಂತ್ರಜ್ಞ ಹಾಗೂ ತಂಡದ ಸದಸ್ಯರ ಸಹಿಗಳನ್ನು ರಾಕೆಟ್​ನ ಮೇಲೆ ಮುದ್ರಿಸಿ ವಿಶೇಷ ಗೌರವ ಸಲ್ಲಿಸಲಾಗಿದೆ.
"

ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಅತ್ಯಂತ ಮಹತ್ವದ ಮೈಲಿಗಲ್ಲು ಎನಿಸಿರುವ ವಿಕ್ರಮ್​&-1 ರಾಕೆಟ್​ನ "ಮಿಷನ್​ ಆಗಮನ್​' ಉಡಾವಣೆ ತಂಡದಲ್ಲಿ ನಮ್ಮ ಶಾಲೆ ವಿದ್ಯಾರ್ಥಿ ನರಸಿಂಗ ಸದಸ್ಯನಾಗಿ ಕಾರ್ಯನಿರ್ವಹಿಸಿರುವುದು ಹೆಮ್ಮೆ ಮತ್ತು ಅಭಿಮಾನದ ವಿಷಯ.

— > ಚಂದ್ರಕಾಂತ ಕಾಳೆಕರ್​ ವಿಜ್ಞಾನ ಶಿಕ್ಷಕ, ಎಕಂಬಾ
"

ಪರಿಸರ ಕಾಳಜಿ ಹೊಂದಿರುವ ಈ ಮಿಷನ್​, ಭೂಮಿಯ ಕಕ್ಷೆಯಲ್ಲಿ ದಟ್ಟಣೆಯಾಗುತ್ತಿರುವ ಬಾಹ್ಯಾಕಾಶ ಕಸವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಕಾರ್ಯ ಮಾಡಲಿದೆ. ಇಂತಹ ಮಹಾನ್​ ಕಾರ್ಯದಲ್ಲಿ ನಮ್ಮ ತಾಲೂಕಿನ ಹುಡುಗ ಭಾಗಿಯಾಗಿರುವುದು ಅತೀವ ಖುಷಿ ತಂದಿದೆ.

— > ಜಗನ್ನಾಥ ಮೂಲಗೆ ಕಸಾಪ ಮಾಜಿ ತಾಲೂಕು ಅಧ್ಯಕ್ಷ