ಲೋಕಾಯುಕ್ತ ದಾಳಿ 
ರಾಜ್ಯ

ಎಂಟು ಅಧಿಕಾರಿಗಳ ಬಳಿ 35.65 ಕೋಟಿ ರೂ. ಮೌಲ್ಯದ ಆಸ್ತಿ! ಕೃಷಿ ಜಮೀನು, ಕೆ.ಜಿ.ಗಟ್ಟಲೆ ಚಿನ್ನ, ಬೆಳ್ಳಿ ಪತ್ತೆ

ಪ್ರಮುಖ ಮುಖ್ಯಾಂಶಗಳು

  • ಎಂಟು ಅಧಿಕಾರಿಗಳ ಬಳಿ 35.65 ಕೋಟಿ ರೂ. ಮೌಲ್ಯದ ಆಸ್ತಿ
  • ಕೃಷಿ ಜಮೀನು, ಕೆ.ಜಿ.ಗಟ್ಟಲೆ ಚಿನ್ನ, ಬೆಳ್ಳಿ ಪತ್ತೆ
  • ವಿವಿಧ ಜಿಲ್ಲೆಗಳಲ್ಲಿ 42 ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಗುರುವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬರೋಬ್ಬರಿ 35.65 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.ಬೆಂಗಳೂರು ನಗರದ 3 ಕಡೆ, ಮಂಡ್ಯ, ಮೈಸೂರು, ಗದಗ, ವಿಜಯಪುರ, ಯಾದಗಿರಿ ಸೇರಿ ಒಟ್ಟು 8 ಜಿಲ್ಲೆಗಳ 42 ದಾಳಿ ನಡೆದಿದೆ.

ಯಾರ ಬಳಿ ಎಷ್ಟು ಆಸ್ತಿ?

  • ಆಸಿಫ್ ಇಕ್ಬಾಲ್ ಖಲೀಲ್ ಸಹಾಯಕ ಕಾರ್ಯಪಾಲಕ ಅಭಿಯಂತರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಮೈಸೂರು, ನಾಲ್ಕು ಸ್ಥಳಗಳಲ್ಲಿ 5.80 ಕೋಟಿ ರೂ. ಮೌಲ್ಯದ 5 ನಿವೇಶನ, 7 ವಾಸದ ಮನೆ, 38 ಗುಂಟೆ ಕೃಷಿ ಜಮೀನು, 2.78 ಕೋಟಿ ರೂ.ಬೆಲೆಯ ಸ್ಥಿರಾಸ್ತಿ, 22.50 ಲಕ್ಷ ರೂ.ಬೆಲೆಯ ಚಿನ್ನಾಭರಣ, ವಾಹನಗಳು ಸೇರಿ ಒಟ್ಟು 8,81,31,851 ರೂ. ಆಸ್ತಿ ಪತ್ತೆ.
  • ವಸಂತ ವಾಲಪ್ಪ ನಾಯ್ಕ್​ ಮುಖ್ಯ ಅಭಿಯಂತರರು, ಕೆ-ಶಿಪ್ ಲೋಕೋಪಯೋಗಿ ಇಲಾಖೆ ಬೆಂಗಳೂರು: ಹತ್ತು ಸ್ಥಳಗಳಲ್ಲಿ 5.65 ಕೋಟಿ ರೂ.ಮೌಲ್ಯದ 4 ನಿವೇಶನ, 7 ವಾಸದ ಮನೆ, 22.20 ಎಕರೆ ಕೃಷಿ ಜಮೀನು, 75 ಲಕ್ಷ ನಗದು, 12.25 ಲಕ್ಷ ಬೆಲೆಯ ಚಿನ್ನಾಭರಣ, 34.25 ಲಕ್ಷ ರೂ.ಮೌಲ್ಯದ ಕಾರುಗಳು, 27.49 ಲಕ್ಷ ರೂ. ಬೆಲೆಯ ನಿಶ್ಚಿತ ಠೇವಣಿ ಸೇರಿ ಒಟ್ಟು -ಠಿ; 4,44,00,212 ದೊರಕಿದೆ.
  • ಪ್ರಕಾಶ್ ಈರಪ್ಪ ಗೋಡ್ಬೊಲೆ, ಕಿರಿಯ ಅಭಿಯಂತರರು, ಕೆ.ಬಿಜೆ.ಎನ್.ಎಲ್ ಇಂಡಿ ತಾಲೂಕು, ವಿಜಯಪುರ: 3.15 ಕೋಟಿ ರೂ.ಮೌಲ್ಯದ 2 ವಾಸದ ಮನೆ, 1 ಶಾಲಾ ಕಟ್ಟಡ, ಚಿನ್ನಾಭರಣ, ಕಾರು, ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು 4.60,97,500 ಕೋಟಿ ರೂ. ಆಸ್ತಿ ಪತ್ತೆ.
  • ಎಂ.ಕೆ.ಸುರಕೋಡ್, ಹಿಂದುಳಿದ ವರ್ಗಗಳ ಕಲ್ಯಾ ಇಲಾಖೆ ತಾಲೂಕು ಶಿರಹಟ್ಟಿ, ಗದಗ: 1.38 ಕೋಟಿ ರೂ.ಮೌಲ್ಯದ 6 ನಿವೇಶನ, 1 ವಾಸದ ಮನೆ, 29 ಎಕರೆ ಕೃಷಿ ಜಮೀನು ಹಾಗೂ 25.26 ಬೆಲೆಯ ಚಿನ್ನಾಭರಣ, 31.40 ಲಕ್ಷ ರೂ. ಮೌಲ್ಯದ ವಾಹನ ಸೇರಿ ಒಟ್ಟು -ಠಿ; 3.15 ಕೋಟಿ ಮೌಲ್ಯದ ಚಿನ್ನಾಭರಣ, ಸೇರಿ ಒಟ್ಟು -ಠಿ; 2,12,33,566 ಆಸ್ತಿ ಪತ್ತೆ.
  • ಎನ್.ಸತೀಶ್ ಸಹಾಯಕ ಕಾರ್ಯಪಾಲಕ ಅಭಿಯಂತರ ಲೋಕೋಪಯೋಗಿ ಇಲಾಖೆ ಉಪ ವಿಭಾಗ ಮಂಡ್ಯ: 2.19 ಕೋಟಿ ರೂ.ಮೌಲ್ಯದ 3 ನಿವೇಶನ, 2 ವಾಸದ ಮನೆ, 6 ಎಕರೆ ಕೃಷಿ ಜಮೀನು, 2.26 ಕೋಟಿ ರೂ.ಮೌಲ್ಯದ ಚಿನ್ನಾಭರಣ, 6.70 ಲಕ್ಷ ನಗದು, ಐಷಾರಾಮಿ ವಾಹನಗಳು ಸೇರಿ ಒಟ್ಟು 4,46,58,976 ರೂ.ಆಸ್ತಿ ಜಪ್ತಿ.
  • ಡಾ.ಎಚ್.ಸಿ.ಇಂದ್ರೇಶ್, ಸಹ ಪ್ರಾಧ್ಯಾಪಕ ಪಶು ವೈದ್ಯಕೀಯ ಕಾಲೇಜು, ಹೆಬ್ಬಾಳ: ಆರು ಸ್ಥಳಗಳಲ್ಲಿ 2.20 ಕೋಟಿ ರೂ.ಮೌಲ್ಯದ 10 ನಿವೇಶನ, 2 ವಾಸದ ಮನೆ ಹಾಗೂ 1.25 ಲಕ್ಷ ನಗದು, 11.95 ಲಕ್ಷ ಬೆಲೆಯ ಚಿನ್ನಾಭರಣ,18.90 ಲಕ್ಷ ಮೌಲ್ಯದ ವಾಹನ ಸೇರಿ ಒಟ್ಟು 2,53,04,600 ರೂ. ಆಸ್ತಿ ಪತ್ತೆ.
  • ವೀರೇಶ್ ರುದ್ರಯ್ಯ ಹಿರೇಮಠ, ಎಲೆಕ್ಟ್ರಿಕ್ ಇನ್​ಸ್ಪೆಕ್ಟರ್ ಇಂಧನ ಇಲಾಖೆ ಯಾದಗಿರಿ: ಮೂರು ಸ್ಥಳಗಳಲ್ಲಿ 1.9 ಕೋಟಿ ರೂ.ಮೌಲ್ಯದ 5 ನಿವೇಶನ, 2 ವಾಸದ ಮನೆ, 8.34 ಕೃಷಿ ಜಮೀನು ಹಾಗೂ 14.77 ಲಕ್ಷ ಮೌಲ್ಯದ ಚಿನ್ನಾಭರಣ, 20.16 ಲಕ್ಷ ರೂ.ವಾಹನಗಳು ಸೇರಿ ಒಟ್ಟು 1,54,53,192 ಸಂಪತ್ತು ಪತ್ತೆ.
  • ಆರ್.ಶಶಿಧರ್ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ, ಸಿಂಗನಾಯಕನಳ್ಳಿ ರೈತ ಸೇವಾ ಸಹಕಾರ ಸಂಘ, ಯಲಹಂಕ ತಾಲೂಕು ಬೆಂಗಳೂರು: ಐದು ಸ್ಥಳಗಳಲ್ಲಿ 4.25 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ, 4 ನಿವೇಶನ, 2 ವಾಸದ ಮನೆ, 2 ಎಕರೆ ಕೃಷಿ ಜಮೀನು ಹಾಗೂ 1.35 ಲಕ್ಷ ನಗದು, 29.74 ಲಕ್ಷ ಬೆಲೆಯ ಚಿನ್ನಾಭರಣ, 42. 25 ಲಕ್ಷ ಮೌಲ್ಯದ ಐಷಾರಾಮಿ ಕಾರುಗಳು, 17.25 ಬ್ಯಾಂಕ್ ಠೇವಣಿ ಸೇರಿ 5,15,86,000 ರೂ. ಮೌಲ್ಯದ ಸಂಪತ್ತು.

4 ಗಂಟೆ ಸತಾಯಿಸಿದ ಅಧಿಕಾರಿ

ಹಾಸನ ಮಹಾನಗರ ಪಾಲಿಕೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಎಇಇ) ಎಂ.ಸಿ. ಸತ್ಯನಾರಾಯಣ ಅವರು 4 ಗಂಟೆ ನಿವಾಸದ ಬಾಗಿಲು ತೆರೆಯದೆ ಸತಾಯಿಸಿ, ಕೊನೆಗೆ ಬಾಗಿಲು ತೆಗೆದಿದ್ದಾರೆ.