ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟಿ$ಯ ದೇಹಾಂಗದಾನ ಜಾಗೃತಿ ಸಮಿತಿ ಟ್ರಸ್ಟ್ ತಾಲೂಕು ಅಧ್ಯಕ್ಷ ಬಸವರಾಜ ಬೊಮ್ಮನಳ್ಳಿ ಅವರನ್ನು ಸನ್ಮಾನಿಸಲಾಯಿತು. ಶಿವಾನಂದ ಹೂಗಾರ, ಪ್ರಿಯಾಂಕಾ ಬೊಮ್ಮನಳ್ಳಿ, ರಾಚಪ್ಪ ಬೊಮ್ಮನಳ್ಳಿ, ಮಹಾದೇವ ಇದ್ದರು.
ಚಿತ್ತಾಪುರ: ಮರಣದ ನಂತರ ವ್ಯಕ್ತಿಯ ಅಂಗಾಂಗ ದಾನ ಮಾಡುವುದರಿಂದ ಎಂಟು ಜನರ ಜೀವ ಉಳಿಸಬಹುದಾಗಿದೆ ಎಂದು ದೇಹಾಂಗದಾನ ಜಾಗೃತಿ ಸಮಿತಿ ಟ್ರಸ್ಟ್ ಅಧ್ಯಕ್ಷ ಶಿವಾನಂದ ಹೂಗಾರ ಹೇಳಿದರು. ಎಕ್ಸಲೆಂಟ್ ಕಿರಿಯ, ಹಿರಿಯ ಮತ್ತು ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ಟ್ರಸ್ಟ್, ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀಗುರು ಬಸವ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಭಾರತೀಯ ಅಂಗಾಂಗ ದಾನ ದಿನ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಟ್ರಸ್ಟ್ ತಾಲೂಕು ಅಧ್ಯಕ್ಷ ಬಸವರಾಜ ಬೊಮ್ಮನಳ್ಳಿ ಅವರನ್ನು ಸತ್ಕರಿಸಲಾಯಿತು. ಉದ್ಯಮಿ ರಾಚಪ್ಪ ಬೊಮ್ಮನಹಳ್ಳಿ, ಮುಖ್ಯಗುರು ಪ್ರಿಯಾಂಕಾ ಬೊಮ್ಮನಳ್ಳಿ, ಪ್ರಮುಖರಾದ ಮಹಾದೇವ, ಅಶ್ವಿನಿ, ವಸಂತ, ಸಾಧನ ಶಿಲ್ಪಿ, ಸುಜಾತಾ, ಅಂಕಿತಾ, ಮಮತಾ, ಆಫ್ರೀನ್, ಸಲೀಂ, ದೇವರಾಜ, ಪ್ರಶಾಂತ, ಸುನೀತಾ, ಸುಮಾ, ಸಬೇರಾ, ಅನ್ನಪೂರ್ಣ, ನಾಗರಾಜ ಇತರರಿದ್ದರು.