ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ಗುರು ಪಾದಪೂಜೆ ಕಾರ್ಯಕ್ರಮವನ್ನು ಶ್ರೀ ಸೋಮಶೇಖರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಬಸವಲಿಂಗ ಶಿವಾಚಾರ್ಯ, ಶ್ರೀ ಶಿವಶಂಕರ ಶಿವಾಚಾರ್ಯ, ನಾಗರಾಜ ಭಂಕಲಗಿ ಇತರರಿದ್ದರು. 
ರಾಜ್ಯ

ಗುರು ಪಾದಪೂಜೆಯಿಂದ ಅಹಂಕಾರ ದೂರ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿ
  • ಚಿತ್ತಾಪುರದಲ್ಲಿ ಶ್ರಾವಣ ಕಾರ್ಯಕ್ರಮ
ಚಿತ್ತಾಪುರ: ಪಾದಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳನ್ನು ನಿಷ್ಠೆಯಿಂದ ಮಾಡಿದರೆ ಮನುಷ್ಯನಲ್ಲಿ ಅಹಂಕಾರ ತೊಲಗಿ ಸದ್ಗುಣ, ಸಂಸ್ಕಾರ ಪ್ರಾಪ್ತಿಯಾಗುತ್ತದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿದರು.
ಶ್ರೀ ಶಿವಶಂಕರ ಮಠದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೈರಾಗ್ಯ ನಿಧಿ ಶ್ರೀ ಅಕ್ಕಮಹಾದೇವಿ ಅಕ್ಕನ ಬಳಗ ಹಾಗೂ ಶ್ರೀ ಋಗ್ವದ ವೈದಿಕ ಪುರೋಹಿತರ ಟ್ರಸ್ಟ್​ನಿಂದ ಶ್ರಾವಣ ಮಾಸ ನಿಮಿತ್ತ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಗುರುಪಾದ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸತಿಯಲ್ಲಿ ಗುರುವಿಗೆ ಅಪಾರ ಗೌರವವಿದೆ ಎಂದರು.
ಗುರು&ಶಿಷ್ಯರ ಸಂಬಂಧ ಪವಿತ್ರವಾದದ್ದು, ತಂದೆ&ತಾಯಿ, ಮಠಾಧೀಶರು, ಗುರುಗಳ ಪಾದಪೂಜೆಯಿಂದ ಉತ್ತಮ ಸಂಸ್ಕಾರ, ಜ್ಞಾನ ಲಭಿಸುತ್ತದೆ. ಶಾಂತಿ, ನೆಮ್ಮದಿಯಿಂದ ಬದುಕು ನಡೆಸಬಹುದು. ಸೆ.11ರವರೆಗೆ ನಿತ್ಯ ಸಂಜೆ 5.30ಕ್ಕೆ ಗುರುಪಾದ ಪೂಜೆ ನಡೆಯಲಿದೆ. ಪ್ರತಿಯೊಬ್ಬರು ಪೂಜೆಯಲ್ಲಿ ಪಾಲ್ಗೊಂಡು ಪುನೀತರಾಗಬೇಕು ಎಂದು ಕರೆ ನೀಡಿದರು.
ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ ಮಾತನಾಡಿದರು. ತೆಲಂಗಾಣ ಕೌಳಸ ಗ್ರಾಮ ಹಿರೇಮಠದ ಒಡೆಯ ಶ್ರೀ ಬಸವಲಿಂಗ ಶಿವಾಚಾರ್ಯರು ಸಾನ್ನಿಧ್ಯ, ಚಿತ್ತಾಪುರ&ಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು.
ಅಕ್ಕನ ಬಳಗದ ಅಧ್ಯೆ ವೆಂಕಟಮ್ಮ ಪಾಲಪ್​, ಪ್ರಮುಖರಾದ ಮಲ್ಲಣ್ಣ ಮಾಸ್ತರ್​ ಮುಡಬೂಳ, ಬಸವರಾಜ ಪಾಟೀಲ್​ ಬೆಳಗುಂಪಾ, ಆನಂದ ಪಾಟೀಲ್​ ನರಬೋಳಿ, ಶಿವಶರಣಪ್ಪ ರೇಷ್ಮಿ, ಬಸವರಾಜ ಹೂಗಾರ, ಚಂದ್ರಶೇಖರ ಉಟಗುರ, ಕೋಟೇಶ್ವರ ರೇಷ್ಮಿ, ಬಸವರಾಜ ಸಂಕನೂರ, ಅಶೋಕ ನಿಪ್ಪಾಣಿ, ಬಸವರಾಜ ಕಾಳಗಿ, ಅನಿಲ ವಡ್ಡಡಗಿ, ನಾಗರಾಜ ಹೂಗಾರ, ಸೋಮಶೇಖರ ಯದಲಾಪುರ, ನಾಗರೆಡ್ಡಿ ಗೋಪಶೇನ್​, ಮಹೇಶ ಬಟಗೇರಿ, ಸಂತೋಷ ಹಾವೇರಿ, ಸುವನರೆಡ್ಡಿ ಪೋತರೆಡ್ಡಿ, ರವೀಂದ್ರ ಗೊಬ್ಬುರ ಇತರರಿದ್ದರು.
ಶಿವಶರಣಯ್ಯಸ್ವಾಮಿ ಪುರದಯ್ಯನಮಠ, ಕರಬಸಯ್ಯ ಶಾಸಿ, ಶಿವುಕುಮಾರ ಹಿರೇಮಠ, ಮಂಜುನಾಥಸ್ವಾಮಿ ಹಿರೇಮಠ ಮಂತ್ರ ಪಠಣ ಮಾಡಿದರು.