Efforts to strengthen Sanatan Dharma
ಕೊರಟಗೆರೆ: ಆದಿ ಶಂಕರಾಚಾರ್ಯರ ಅದ್ವೆ$$ೃತ ತತ್ವವು ಭಾರತೀಯ ಸಂಸತಿ ಮತ್ತು ಸನಾತನ ಧರ್ಮದ ಪುನರುತ್ಥಾನಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ವಿಪ್ರ ಸಂಘದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಆದಿ ಶಂಕರಾಚಾರ್ಯ ಜಯಂತಿಯಲ್ಲಿ ಮಾತನಾಡಿ, ಶಂಕರಾಚಾರ್ಯರು ಅತಿ ಚಿಕ್ಕ ವಯಸ್ಸಿನಲ್ಲಿಯೇ ವೇದ, ಉಪನಿಷತ್, ಧರ್ಮಶಾಸ್ತ್ರ ಮತ್ತು ಪುರಾಣಗಳ ಆಳವಾದ ಅಧ್ಯಯನ ಮಾಡಿ ಅದ್ವೆ$$ೃತ ಸಿದ್ಧಾಂತವನ್ನು ಜಗತ್ತಿಗೆ ಪರಿಚಯಿಸಿದರು ಎಂದರು.
ಪೊಲೀಸ್ ವೃತ್ತ ನಿರೀಕ್ಷಕ ಅನಿಲ್ ಮಾತನಾಡಿ, ಕೇವಲ 32 ವರ್ಷಗಳ ಆಯುಷ್ಯದಲ್ಲಿಯೇ ಶಂಕರಾಚಾರ್ಯರು ದೇಶದ ಮೂಲೆಮೂಲೆ ಸಂಚರಿಸಿ ಸನಾತನ ಧರ್ಮದ ತತ್ವಗಳನ್ನು ಜನರಿಗೆ ತಲುಪಿಸಿದರು ಎಂದು ಹೇಳಿದರು.
ತಾಲೂಕು ವಿಪ್ರ ಸಂಘದ ಅಧ್ಯಕ್ಷ ಶ್ರೀಪ್ರಸಾದ್ ಮಾತನಾಡಿ, ಶಂಕರಾಚಾರ್ಯರ ಜೀವನವು ತ್ಯಾಗ, ಜ್ಞಾನ ಮತ್ತು ಸಾಧನೆಯ ಪ್ರತಿಕವಾಗಿದ್ದು, ಅವರ ತತ್ವಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕವಾಗಿವೆ ಎಂದರು.