ಸೇಡಂನ ಕೆಇಬಿ ಕಾಲನಿ ಹನುಮಾನ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ನಗರಸಭೆ ಪೌರಾಯುಕ್ತ ಶರಣಯ್ಯಸ್ವಾಮಿ ಮಾತನಾಡಿದರು. ಪ್ರಭುರೆಡ್ಡಿ, ಡಾ.ಸಂಜು ಪಾಟೀಲ್​ ಇತರರಿದ್ದರು.  
ರಾಜ್ಯ

ಜನರ ಸಮಸ್ಯೆ ದೂರವಾಗಿಸಲು ಶ್ರಮ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಪೌರಾಯುಕ್ತ ಶರಣಯ್ಯ ಸ್ವಾಮಿ ಹೇಳಿಕೆ
  • ಸೇಡಂನಲ್ಲಿ ನಗರಸಭೆಯಿಂದ ವಾರ್ಡ್​ ಸಭೆ
ಸೇಡಂ: ನಗರದ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಮತ್ತು ಅವರ ಸಮಸ್ಯೆ ಆಲಿಸಲು ನಗರಸಭೆ ಅಧಿಕಾರಿಗಳ ತಂಡ ಪ್ರತಿ ವಾರ್ಡ್​ಗೆ ಭೇಟಿ ನೀಡಿ ಸ್ಪಂದಿಸುವ ಕೆಲಸಕ್ಕೆ ಮುಂದಾಗಿದೆ. ಕೆಇಬಿ ಕಾಲನಿ ಹನುಮಾನ ಮಂದಿರದಲ್ಲಿ ನಗರಸಭೆ ಆಡಳಿತಾಧಿಕಾರಿ ಪ್ರಭುರೆಡ್ಡಿ, ಪೌರಾಯುಕ್ತ ಶರಣಯ್ಯಸ್ವಾಮಿ ಅವರು ಬಡಾವಣೆ ಜನರೊಂದಿಗೆ ಸೋಮವಾರ ಸಭೆ ನಡೆಸಿ ಚರ್ಚಿಸಿದರು.
ನಗರಸಭೆ ಪೌರಾಯುಕ್ತ ಶರಣಯ್ಯಸ್ವಾಮಿ ಮಾತನಾಡಿ, ಅನೇಕರಿಗೆ ಸಮಸ್ಯೆ ಹೇಳುವ ಇಚ್ಛೆ ಇರುತ್ತದೆ. ಆದರೆ ಎಲ್ಲರಿಗೂ ಕಚೇರಿಗೆ ಬರಲು ಸಾಧ್ಯವಾಗುವದಿಲ್ಲ. ಅದನ್ನು ಮನಗಂಡು ಸ್ಥಳಿಯ ಶಾಸಕರ ಮಾರ್ಗದರ್ಶನದಂತೆ ನಗರದಲ್ಲಿರುವ ಎಲ್ಲ ವಾರ್ಡ್​ಗಳಲ್ಲಿ ಸಭೆ ಆಯೋಜಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಅಲ್ಲಿ ಜನರೊಂದಿಗೆ ಕುಳಿತು ಸಮಸ್ಯೆ ಕೇಳುವುದಲ್ಲದೆ, ಸಾಧ್ಯವಾಗುವುದನ್ನು ಅಲ್ಲಿಯೇ ಪರಿಹರಿಸುವ ಕೆಲಸ ಮಾಡಲಾಗುವುದು. ಕುಡಿವ ನೀರು, ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಿ ಬಗೆಹರಿಸಲಾಗುತ್ತದೆ. ರಸ್ತೆ ನಿರ್ಮಾಣ ಸೇರಿ ಅನುದಾನ ಅವಶ್ಯಕತೆ ಇರುವ ಕೆಲಸಗಳಿಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.
ವಾರ್ಡ್​ ಮಾಜಿ ಸದಸ್ಯ ನಾಗಕುಮಾರ ಎಳ್ಳಿ ಮಾತನಾಡಿ, ಇಲ್ಲಿ ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸರಿಯಾದ ರಸ್ತೆ ಇಲ್ಲದೆ ಸಮಸ್ಯೆಯಾಗುತ್ತಿದೆ. ಹೀಗಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು. ಚರಂಡಿ ಸ್ವಚ್ಛಗೊಳಿಸಿದ ಮೇಲೆ ಕಸ ತಕ್ಷಣ ವಿಲೇವಾರಿ ಮಾಡಬೇಕು. ಬೋರ್​ವೆಲ್​ ಕೊರೆಸಿ ನೀರಿನ ಸಮಸ್ಯೆಗೆ ಇತಿಶ್ರೀ ಹಾಡಬೇಕು ಎಂದು ಮನವಿ ಮಾಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಜು ಪಾಟೀಲ್​, ನಗರಸಭೆ ಅಧಿಕಾರಿಗಳಾದ ಮಲ್ಲಿಕಾರ್ಜುನ, ಬಿ.ವಿ.ಪಾಟೀಲ್​, ಶ್ರೀಕಾಂತ ಹೊಸಳ್ಳಿ, ಸಂಪತ, ನಾಗಣ್ಣ ಕಾಡಾ, ಬಡಾವಣೆ ನಿವಾಸಿಗಳಾದ ವೀರಭದ್ರಯ್ಯಸ್ವಾಮಿ, ಮಲ್ಲಿಕಾರ್ಜುನಸ್ವಾಮಿ ಬಿಬ್ಬಳ್ಳಿ, ಯುನೂಸ್​ ಸವೇರಾ, ಮಲ್ಲಿಕಾರ್ಜುನ ಪಾಟೀಲ್​ ಹೊಸಳ್ಳಿ, ವಿದ್ಯಾಸಾಗರ ಗುಂಡಗುರ್ತಿ, ಡಾ.ಶ್ರೀನಿವಾಸ ರಂಜೋಳಕರ್​, ಕೃಷ್ಣ ತಾಯಿತ್​, ವಿಜಯ ತರಿಗೆ, ಬಾಪು ಪಾಟೀಲ್​, ಶ್ರೀನಿವಾಸ ಚವ್ಹಾಣ್​, ಜುಬೇದ್​, ರೌಫ್​ ಇತರರಿದ್ದರು.