ಅಫಜಲಪುರದಲ್ಲಿ ಪೊಲೀಸ್ ವಸತಿ ಸಮುಚ್ಛಯಗಳನ್ನು ಶಾಸಕ ಎಂ.ವೈ.ಪಾಟೀಲ್ ಉದ್ಘಾಟಿಸಿದರು. ಎಸ್ಪಿ ಅಡ್ಡೂರು ಶ್ರೀನಿವಾಸುಲು, ಡಿವೈಎಸ್ಪಿ ತಮ್ಮಾರಾಯ ಪಾಟೀಲ್, ಎಪಿಎಂಸಿ ಅಧ್ಯ ಮಂಜುನಾಥ ಅಂಜುಟಗಿ, ಚಂದ್ರಶೇಖರ ಕರಜಗಿ, ಶಿವಾನಂದ ಗಾಡಿಸಾಹುಕಾರ ಇತರರಿದ್ದರು.
- ಶಾಸಕ ಎಂ.ವೈ.ಪಾಟೀಲ್ ಅಭಿಮತ >
- ಅಫಜಲಪುರದಲ್ಲಿ ವಸತಿ ಸಮುಚ್ಛಯ ಉದ್ಘಾಟನೆ
ಅಫಜಲಪುರ: ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗಾಗಿ ನಿರಂತರ ಶ್ರಮಿಸುವ ಪೊಲೀಸರಿಗೆ ಮೂಲ ಸೌಕರ್ಯ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದಿಂದ ಸುಮಾರು 695 ಲ ರೂ. ವೆಚ್ಚದಲ್ಲಿ ನಿರ್ಮಿಸಿರುವ 24 ಪೊಲೀಸ್ ವಸತಿ ಸಮುಚ್ಛಯಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಹಗಲು & ರಾತ್ರಿ ರಣೆಗೆ ನಿಲ್ಲುವ ಪೊಲೀಸರಿಗೆ ಸ್ವಂತ ಸೂರು ಸಿಕ್ಕಿರುವುದರಿಂದ ಕಾರ್ಯಮತೆ ಹೆಚ್ಚಿ, ಅಪರಾಧಗಳ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಹೊಸ ವಸತಿ ಗೃಹಗಳಗಳಲ್ಲಿ ನಿಮ್ಮೆಲ್ಲರ ಜೀವನ ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದರು.
ಎಸ್ಪಿ ಅಡ್ಡೂರು ಶ್ರೀನಿವಾಸುಲು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯ ಮಂಜುನಾಥ ಅಂಜುಟಗಿ, ಡಿವೈಎಸ್ಪಿ ತಮ್ಮಾರಾಯ ಪಾಟೀಲ್, ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯ ಚಂದ್ರಶೇಖರ ಕರಜಗಿ, ತಾಪಂ ಮಾಜಿ ಅಧ್ಯ ಶಿವಾನಂದ ಗಾಡಿಸಾಹುಕಾರ, ಪ್ರಮುಖರಾದ ಜೆ.ಎಂ.ಕೊರಬು, ರಮೇಶ ಪೂಜಾರಿ, ಸೈಫನಸಾಬ್ ಚಿಕ್ಕಳಗಿ, ಸಿದ್ದು ಮಗಿ, ಶ್ರೀಮಂತ ಬಿರಾದಾರ, ಮಲ್ಲಯ್ಯ ಹೊಸಮಠ, ಸಿಪಿಐ ಲಖನ್ ಮಸಗುಪ್ಪಿ ಇತರರಿದ್ದರು.