- ಕಲಬುರಗಿ-ಬೆಂಗಳೂರು ಮಧ್ಯೆ ವಿಮಾನ ಸೇವೆ
- ಜೂ.10ರಿಂದ ಕಾರ್ಯಾರಂಭ
ಕಲಬುರಗಿ: ಬಹುನಿರೀತ ಕಲಬುರಗಿ&ಬೆಂಗಳೂರು ನಡುವೆ ಜೂನ್ 10 ರಿಂದ ವಿಮಾನ ಸಂಚಾರ ಪ್ರಾರಂಭವಾಗಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಸೇವೆ ಉಡಾನ್ ಯೋಜನೆ ಅಡಿ ಸೇರ್ಪಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್ ಭರವಸೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಡಾ.ಜಾಧವ್, ಕಲಬುರಗಿ ಮತ್ತು ಬೆಂಗಳೂರು ನಡುವೆ ಜೂನ್ 10 ರಿಂದ ಸ್ಟಾರ್ ಏರ್ಲೈನ್ಸ್ ವಿಮಾನ ಸಂಜೆ 6ಕ್ಕೆ ಬೆಂಗಳೂರಿನಿಂದ ಹೊರಟು ಕಲಬುರಗಿಗೆ ಸಂಜೆ 7.10ಕ್ಕೆ ಆಗಮಿಸಲಿದೆ. ಕಲಬುರಗಿಯಿಂದ ಸಂಜೆ 7.40ಕ್ಕೆ ಹೊರಟು ಬೆಂಗಳೂರಿಗೆ 8.50ಕ್ಕೆ ತಲುಪಲಿದೆ. ಸದ್ಯ ದಿನಕ್ಕೆ ಒಂದು ಬಾರಿ ವಿಮಾನ ಸಂಚಾರ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಕಲಬುರಗಿ ಹಾಗೂ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಲು ಇತರ ವಿಮಾನ ಕಂಪನಿಗಳ ಜತೆ ಮಾತುಕತೆ ಪ್ರಗತಿಯಲ್ಲಿದ್ದು ಹೆಚ್ಚಿನ ವಿಮಾನಗಳು ತನ್ನ ಸಂಚಾರ ಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ.
ಉಡಾನ್ ಅಡಿ ಸೇರ್ಪಡೆಗೆ ಯತ್ನ
ಕೇಂದ್ರ ಸರ್ಕಾರ ಕಲಬುರಗಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆ ಅಡಿ ಸೇರ್ಪಡೆ ಮಾಡಲು ಕೇಂದ್ರ ವಿಮಾನಯಾನ ಖಾತೆ ಸಚಿವರು, ಪ್ರಧಾನ ಮಂತ್ರಿಯವರನ್ನು ಒತ್ತಾಯಿಸಲಾಗುವುದು. ಕಲಬುರಗಿಯಿಂದ ವಿಮಾನ ಸಂಚಾರ ಪ್ರಾರಂಭವಾಗಲು ಕರ್ನಾಟಕ ಸರ್ಕಾರ ಸಬ್ಸಿಡಿ ಹಣವನ್ನು ಕೆಕೆಆರ್ಡಿಬಿ ಮೂಲಕ ನೀಡಿ ಈ ಭಾಗದ ಸಂಪರ್ಕ ವ್ಯವಸ್ಥೆಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿರುವುದು ಉತ್ತಮ ಬೆಳವಣಿಗೆ. ವಿಮಾನ ಸಂಚಾರ ಪ್ರಾರಂಭವಾದರೆ ಈ ಭಾಗದಲ್ಲಿ ಅಭಿವೃದ್ಧಿಗೂ ಹೆಚ್ಚಿನ ಒತ್ತು ಸಿಗಲಿದ್ದು ಕೈಗಾರಿಕೆ, ವಾಣಿಜ್ಯೋದ್ಯಮ, ಪ್ರವಾಸೋದ್ಯಮ, ಕೃಷಿ ಸೇರಿದಂತೆ ಅನೇಕ ೇತ್ರಗಳ ಬೆಳವಣಿಗೆಗೆ ಪೂರಕವಾಗಲಿದೆ ಎಂದು ತಿಳಿಸಿದ್ದಾರೆ.