ಅಫಜಲಪುರ ತಾಲೂಕಿನ ಭೈರಾಮಡಗಿಯಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಕೆಕೆಆರ್ಟಿಸಿ ಅಧ್ಯ ಅರುಣಕುಮಾರ ಪಾಟೀಲ್ ಅವರಿಗೆ ಗ್ರಾಮಸ್ಥರು ಮನವಿಪತ್ರ ಸಲ್ಲಿಸಿದರು. ಹಣಮಂತರಾವ ಹಿರೇಗೌಡ, ಶಿವಾನಂದ ಬಿರಾದಾರ, ಈರಣ್ಣ ನಂದರಗಿ, ಬಸಣ್ಣ ಹಿರೇಗೌಡ, ಸಂಜುಗೌಡ ಬಿದಾದಾರ, ಜೆ.ಡಿ.ಪಾಟೀಲ್ ಇತರರಿದ್ದರು
- ಅರುಣಕುಮಾರ ಪಾಟೀಲ್ ಭರವಸೆ
- ಭೈರಾಮಡಗಿಯಲ್ಲಿ ಕಾಲಭೈರವ ಜಾತ್ರೋತ್ಸವ
ಅಫಜಲಪುರ : ಐತಿಹಾಸಿಕ ಭೈರಾಮಡಗಿ ಗ್ರಾಮದ ಶ್ರೀ ಕಾಲಭೈರವ ದೇವಸ್ಥಾನಕ್ಕೆ ಯಾತ್ರಿಕ್ ನಿವಾಸ ಹಾಗೂ ಗ್ರಾಮದಿಂದ ದೇವಾಲಯವರೆಗೆ ರಸ್ತೆ ಅಭಿವೃದ್ಧಿಪಡಿಸಲು ಶ್ರಮಿಸಲಾಗುವುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯ ಅರುಣಕುಮಾರ ಪಾಟೀಲ್ ಭರವಸೆ ನೀಡಿದರು.
ಭೈರಾಮಡಗಿ ಗ್ರಾಮದಲ್ಲಿ ಶ್ರೀ ಕಾಲಭೈರವ ದೇವಸ್ಥಾನದ ರಥೋತ್ಸವ ನಿಮಿತ್ತ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಅತ್ಯಂತ ಪುರಾತನ ಹಾಗೂ ಐತಿಹಾಸಿಕ ಶ್ರೀ ಕಾಲಭೈರವ ದೇವಸ್ಥಾನಕ್ಕೆ ಇದೀಗ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅತ್ಯಧಿಕ ಪ್ರವಾಸಿಗರೂ ಆಗಮಿಸುತ್ತಿದ್ದಾರೆ. ಹೀಗಾಗಿ ಯಾತ್ರಿಕ್ ನಿವಾಸ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಹಿಂದೆ ಪ್ರವಾಸೋದ್ಯಮ ಇಲಾಖೆಯಡಿ 30 ಲ ರೂ. ವೆಚ್ಚದಲ್ಲಿ ಯಾತ್ರಿಕ ನಿವಾಸ ಭೈರಲಿಂಗೇಶ್ವರ ದೇವಸ್ಥಾನಕ್ಕೆ ಮಂಜೂರಾಗಿತ್ತು. ಜತೆಗೆ ಸ್ಥಳಾವಕಾಶ ಬಗ್ಗೆ ಸಮೀೆ ಮಾಡಲಾಗಿತ್ತು. ಆದರೆ ಪ್ರಸಕ್ತ ಸ್ಥಗಿತಗೊಂಡಿದ್ದು, ಈ ಕುರಿತು ಪರಿಶೀಲಿಸುವುದಾಗಿ ಹೇಳಿದರು.
ಮಹಾಂತೇಶ್ವರ ವಿರಕ್ತ ಮಠದ ಶ್ರೀ ಷಡರಿ ದೇವರು, ಸ್ಟೇಷನ್ ಗಾಣಗಾಪುರದ ಶ್ರೀ ನಾಗು ಮುತ್ಯಾ ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ಹಣಮಂತರಾವ ಹಿರೇಗೌಡ, ಶಿವಾನಂದ ಬಿರಾದಾರ, ಈರಣ್ಣ ನಂದರಗಿ, ಬಸಣ್ಣ ಹಿರೇಗೌಡ, ಸಂಜುಗೌಡ ಬಿದಾದಾರ, ಜೆ.ಡಿ.ಪಾಟೀಲ್, ಮಲ್ಲಿನಾಥ ಜವಳಿ, ವಿಶ್ವನಾಥ ಪಾಟೀಲ್, ಸಿದ್ದಲಿಂಗ ಗುರನಂಜಿ, ಶಿವುಗೌಡ ಪೊಲೀಸ್ ಪಾಟೀಲ್ ಇತರರಿದ್ದರು. ವಿವಿಧ ಸರ್ಕಾರಿ ಹುದ್ದೆಗಳಲ್ಲಿರುವ ಗ್ರಾಮದ ನೌಕರರನ್ನು ಸನ್ಮಾನಿಸಲಾಯಿತು. ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂದ ನಿರ್ದೇಶಕರಾಗಿ ಆಯ್ಕೆಯಾದ ಲಕ್ಷಿ$್ಮಕಾಂತ ಪಾಟೀಲ್ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು. ನಿವೃತ್ತ ಶಿಕ ಶಾಮರಾವ ಪೊದ್ದಾರ ನಿರೂಪಣೆ ಮಾಡಿ, ವಂದಿಸಿದರು.