ಅಫಜಲಪುರದಲ್ಲಿ ಹೂಗಾರ ಸಮಾಜ ಸೇವಾ ಸಂಘದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ, ಶ್ರೀ ಶರಣಬಸವ ಶರಣರು, ಶಾಸಕ ಎಂ.ವೈ.ಪಾಟೀಲ್, ಪ್ರಮುಖರಾದ ಮಂಜುನಾಥ ಅಂಜುಟಗಿ, ಶಂಕರ ಹೂಗಾರ ಇತರರಿದ್ದರು.
- ಶಾಸಕ ಎಂ.ವೈ.ಪಾಟೀಲ್ ಭರವಸೆ
- ಅಫಜಲಪುರದಲ್ಲಿ ಹೂಗಾರ ಸಮಾಜದ ಕಾರ್ಯಕ್ರಮ
ಅಫಜಲಪುರ: ನಿಮ್ಮಲ್ಲಿರುವ ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗೊತ್ತಿ, ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಸಂಘಟನೆಗೆ ಶ್ರಮಿಸಬೇಕು. ಅಂದಾಗಲೇ ಸಮಾಜ ಪ್ರಗತಿ ಹೊಂದಲು ಸಾಧ್ಯ ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.
ಬಸವ ಮಂಟಪದಲ್ಲಿ ಹೂಗಾರ ಸಮಾಜ ಸೇವಾ ಸಂಘದಿಂದ ಶನಿವಾರ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಿಸಿಕೊಡುವಂತೆ ಸಮುದಾಯ ಬೇಡಿಕೆ ಇಟ್ಟಿದ್ದು, ಹೊಸ ಬಡಾವಣೆಗಳಲ್ಲಿನ ಸಿಎ ನಿವೇಶನ ಗುರುತಿಸಿದರೆ ಸರ್ಕಾರದಿಂದ ಅನುದಾನ ನೀಡಲಾಗುತ್ತದೆ. ಪಾರಂಪರಿಕ ಕುಲಕಸುಬಿನ ಜತೆಗೆ ಬೇರೆ ಲಾಭದಾಯಕ ವೃತ್ತಿ ಮಾಡಿ. ಈಗಾಗಲೇ ಘೋಷಿಸಿರುವ ಹೂಗಾರ ಅಭಿವೃದ್ಧಿ ನಿಗಮದ ಚಾಲ್ತಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತದೆ ಎಂದು ಭರವಸೆ ನೀಡಿದರು.
ಹೂಗಾರ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಶಂಕರ ಹೂಗಾರ ಮಾತನಾಡಿದರು. ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ, ಶ್ರೀ ಶರಣಬಸವ ಶರಣರು ಸಾನ್ನಿಧ್ಯವಹಿಸಿದ್ದರು.
ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಎಪಿಎಂಸಿ ಅಧ್ಯ ಮಂಜುನಾಥ ಅಂಜುಟಗಿ, ನಗರ ಯೋಜನಾ ಅಭಿವೃದ್ಧಿ ಪ್ರಧಿಕಾರದ ಅಧ್ಯ ಚಂದ್ರಶೇಖರ ಕರಜಗಿ, ಪ್ರಮುಖರಾದ ಶಿವಾನಂದ ಗಾಡಿಸಾಹುಕಾರ, ಜೆ.ಎಂ.ಕೊರಬು, ಡಾ.ಅಜಯ ಗುತ್ತೇದಾರ್, ಅಶೋಕ ಹೂಗಾರ, ರಮೇಶ ಹೂಗಾರ, ಶಂಕರ ಮ್ಯಾಕೇರಿ, ಮಲ್ಲಿಕಾರ್ಜುನ ಹೂಗಾರ, ಮಡಿವಾಳ ಗೊಳಸಾರ, ಶ್ರೀಶೈಲ ಬಳೂರಗಿ, ಪ್ರಭಾವತಿ ಮೇತ್ರಿ, ಉಗ್ರಮೂರ್ತಿ, ಭೀಮಾಶಂಕರ ಪೂಜಾರಿ, ಶಿವಾನಂದ ಹೂಗಾರ, ಸಿದ್ದು ಅವಟೆ, ಗುರುಸಿದ್ದ ಹೂಗಾರ, ಆನಂದ ಹೂಗಾರ, ವಿಶ್ವಾರಾಧ್ಯ ಹೂಗಾರ ಇತರರಿದ್ದರು.