ಕಲಬುರಗಿಯ ಜಿಮ್ಸ್ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ಸಮಗ್ರ ಸೀಳು ತುಟಿ ಹಾಗೂ ಸೀಳು ಅಂಗುಳ ಶಸಚಿಕಿತ್ಸಾ ಶಿಬಿರವನ್ನು ಡಾ.ಶಿವಕುಮಾರ್ ಸಿ.ಆರ್. ಉದ್ಘಾಟಿಸಿದರು. ಕಾರ್ನಾಡ್ ಡೆನ್ನಿಸ್, ಪ್ರಶಾಂತಕುಮಾರ, ಡಾ.ರಾಮಕುಮಾರ್ ವೆಂಕಟೇಶ್ವರನ್, ಡಾ.ಉಮೇಶ ಎಸ್.ಆರ್., ಡಾ.ರೇವಣಸಿದ್ದಪ್ಪ ಭೋಸಗಿ, ಡಾ.ಜಗದೀಶ್ ಎಂ.ಬಿ ಇತರರಿದ್ದರು.
- ಮಿಷನ್ ಸ್ಮೈಲ್ ಸಿಇಒ ಕಾರ್ನಾಡ್ ಡೆನ್ನಿಸ್ ಹೇಳಿಕೆ
- ಜಿಮ್ಸ್ನಲ್ಲಿ ಸೀಳುತುಟಿ ಉಚಿತ ಶಸಚಿಕಿತ್ಸಾ ಶಿಬಿರ
ಕಲಬುರಗಿ: ಮಿಷನ್ ಸ್ಮೈಲ್ ಉಚಿತ ಸೇವಾ ಶಿಬಿರಕ್ಕಾಗಿ ದೇಶದ ವಿವಿಧ ಭಾಗಗಳಿಂದ ನುರಿತ ವೈದ್ಯಕಿಯ ತಂಡ ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳ ಸೀಳುತುಟಿ ಸಮಸ್ಯೆ ನಿವಾರಿಸಿ, ಕುಟುಂಬಗಳಲ್ಲಿ ಹೊಸ ಭರವಸೆಯ ನಗು ಮೂಡಲಿದೆ ಎಂದು ಮಿಷನ್ ಸ್ಮೈಲ್ ಸಿಇಒ ಕಾರ್ನಾಡ್ ಡೆನ್ನಿಸ್ ಹೇಳಿದರು.
ವೈದ್ಯಕಿಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ಸಮಗ್ರ ಸೀಳು ತುಟಿ ಹಾಗೂ ಸೀಳು ಅಂಗುಳಿ ಶಸಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಮಿಷನ್ ಸ್ಮೆಲ್ ಒಂದು ನೋಂದಾಯಿತ ವೈದ್ಯಕಿಯ ದತ್ತಿ ಸಂಸ್ಥೆಯಾಗಿದ್ದು, 2003ರಿಂದ ಸೀಳುತುಟಿ, ಸೀಳು ಅಂಗುಳಿ ಹಾಗೂ ಇತರೆ ಉಚಿತ ಶಸಚಿಕಿತ್ಸೆ ನೀಡುತ್ತಾ ಬರುತ್ತಿದೆ ಎಂದರು.
ಮುತ್ತೂಟ್ ಪಾಪಚನ್ ಗ್ರೂಪ್ ಮುಖ್ಯಸ್ಥ ಪ್ರಶಾಂತಕುಮಾರ ಮಾತನಾಡಿ, ಮುತ್ತೂಟ್ ಸಮೂಹ ಸಂಸ್ಥೆ ಬ್ಯಾಂಕಿಂಗ್ ವ್ಯವಹಾರದ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಿಸುತ್ತಿದೆ. ಈ ಮುತೂಟ್ ಮತ್ತು ಮಿಷನ್ ಸ್ಮೈಲ್ ಸಹಭಾಗಿತ್ವದಲ್ಲಿ ಈವರೆಗೆ ಒಟ್ಟು 3,747 ಉಚಿತ ಶಸಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಈ ಆರ್ಥಿಕ ವರ್ಷದಲ್ಲಿ ಇದು 2ನೇ ಶಿಬಿರವಾಗಿದ್ದು ದೇಶದ ವಿವಿಧ ರಾಜ್ಯಗಳಲ್ಲಿ ಇನ್ನೂ 6 ಶಿಬಿರ ನಡೆಸುವ ಯೋಜನೆ ಹೊಂದಲಾಗಿದೆ ಎಂದು ಹೇಳಿದರು.
ಈ ಸಿಎಸ್ಆರ್ ಚಟುವಟಿಕೆಗಳಿಗೆ ಮುತೂಟ್ ಫಿನ್ಕಾರ್ಪ್ ಲಿಮಿಟೆಡ್ (ಚಿನ್ನದ ಸಾಲ), ಮೈಕ್ರೋ ಫೈನಾನ್ಸ್, ಹೌಸಿಂಗ್ ಫೈನಾನ್ಸ್, ಮುತ್ತೂಟ್ ಕ್ಯಾಪಿಟಲ್ ಸರ್ವಿಸಸ್ (ವಾಹನ ಸಾಲ), ರಿಸ್ಕ್ ಇನ್ಶೂರೆನ್ಸ್, ಎಕ್ಸಿಮ್ ಮತ್ತು ಮುತೂಟ್ ಚಿಟ್ಸ್ ಸೇರಿ ಒಟ್ಟು 7 ಹಣಕಾಸು ಸಂಸ್ಥೆಗಳು ಬೆಂಬಲ ನೀಡುತ್ತಿವೆ. ಎಲ್ಲ ಶಾಖಾ ಸದಸ್ಯರ ಈ ಶ್ರಮ ಮತ್ತು ಸೇವೆ ನಿಜಕ್ಕೂ ಅಭಿನಂದನೀಯ ಎಂದು ಶ್ಲಾಘಿಸಿದರು.
ಜಿಮ್ಸ್ನ ವೈದ್ಯಕಿಯ ಅಧೀಕ್ಷಕ ಡಾ.ಶಿವಕುಮಾರ್ ಸಿ.ಆರ್. ಮಾತಾನಾಡಿ, ನೋಂದಾಯಿಸಿಕೊಂಡಿರುವ 50 ರಿಂದ 80 ಮಕ್ಕಳಿಗೆ ನಮ್ಮ ಆಸ್ಪತ್ರೆಯಲ್ಲೇ ಸುರತ ಮತ್ತು ಗುಣಮಟ್ಟದ ಚಿಕಿತ್ಸೆ ನೀಡಲಾಗುವುದು. ಇದು ವೈದ್ಯರ ಸೇವಾ ಮನೋಭಾವದಿಂದ ಮಾಡುತ್ತಿರುವ ಕಾರ್ಯ ಎಂದರು.
ಹಿರಿಯ ಅರಿವಳಿಕೆ ತ ಡಾ.ರಾಮಕುಮಾರ್ ವೆಂಕಟೇಶ್ವರನ್, ಜಿಮ್ಸ್ ನಿರ್ದೇಶಕ ಡಾ.ಉಮೇಶ ಎಸ್.ಆರ್., ಮಕ್ಕಳ ವಿಭಾಗದ ಉಪ ವೈದ್ಯಕಿಯ ಅಧೀಕ್ಷಕ ಡಾ.ರೇವಣಸಿದ್ದಪ್ಪ ಭೋಸಗಿ, ಅರಿವಳಿಕೆ (ಅನಸ್ಥಿಷಿಯಾಲಜಿ) ವಿಭಾಗದ ಉಪ ವೈದ್ಯಕಿಯ ಅಧೀಕ್ಷಕ ಡಾ.ಜಗದೀಶ್ ಎಂ.ಬಿ ಇತರರಿದ್ದರು.
"
ಈವರೆಗೆ ಒಟ್ಟು 77,000ಕ್ಕೂ ಹೆಚ್ಚು ಮಕ್ಕಳ ತಪಾಸಣೆ ನಡೆಸಲಾಗಿದ್ದು, 52,500ಕ್ಕೂ ಹೆಚ್ಚು ಮಕ್ಕಳಿಗೆ ಯಶಸ್ವಿ ಶಸಚಿಕಿತ್ಸೆ ಮಾಡಲಾಗಿದೆ. ಸಂಸ್ಥೆಯ ನಿಸ್ವಾರ್ಥ ಸೇವೆ ಹಾಗೂ ಸತ್ಕರ್ಮದ ಫಲವಾಗಿ, ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ಮತ್ತು ಹೊಸ ಜೀವನ ಲಭಿಸುವಂತಾಗಲಿದೆ.
— > ಕಾರ್ನಾಡ್ ಡೆನ್ನಿಸ್, ಸಿಇಒ, ಮಿಷನ್ ಸ್ಮೈಲ್