ನರೋಣಾದಲ್ಲಿ 2 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಬಸವರಾಜ ಮತ್ತಿಮಡು ಚಾಲನೆ ನೀಡಿದರು. ಗಂಗಪ್ಪಗೌಡ ಪಾಟೀಲ್, ಸಂಗಮೇಶ ವಾಲಿ, ಶಿವಕುಮಾರ ಪಾಟೀಲ್, ದಿಲೀಪ್ ಮೂಲಗೆ, ಬಾಬು ವಾಲಿ ಇತರರಿದ್ದರು.
- ಶಾಸಕ ಬಸವರಾಜ ಮತ್ತಿಮಡು ಹೇಳಿಕೆ
- ನರೋಣಾದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ
ಕಮಲಾಪುರ: ಗ್ರಾಮೀಣ ಕ್ಷೇತ್ರದ ಜನತೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಪ್ರಥಮಾದ್ಯತೆ ನೀಡಲಾಗುತ್ತಿದೆ. ಸುಸಜ್ಜಿತ ರಸ್ತೆ, ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ಕಾರ್ಯ ಮುಂದುವರಿದಿದೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ನರೋಣಾ ಗ್ರಾಮದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನರೋಣಾ&ಧರಿ ತಾಂಡಾದಿಂದ ಚಂದ್ರು ಮಡುವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಧಿಕ ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ ದಾಖಲೆ ಬರೆದಿದ್ದಾರೆ. ಬಲಿಷ್ಠ ಭಾರತ ನಿರ್ಮಾಣಕ್ಕೆ ಅವರ ಕೊಡುಗೆ ಅಪಾರವಾಗಿದೆ. ಭಾರತವನ್ನು ವಿಶ್ವದ ಶಕ್ತಿಶಾಲಿ ದೇಶವನ್ನಾಗಿ ನಿರ್ಮಿಸಿದ್ದಾರೆ ಎಂದು ಬಣ್ಣಿಸಿದರು.
ಡಾಂಬರ್ ರಸ್ತೆ, ಕುಡಿವ ನೀರು, ಶಾಲಾ ಕೋಣೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಅನುದಾನ ನೀಡುವುದಕ್ಕಾಗಿ ಕಳೆದ ಅವಧಿಯಲ್ಲಿ ಕ್ಷೇತ್ರಕ್ಕೆ 16 ನೂರು ಕೋಟಿ ರೂ. ಅನುದಾನ ತಂದಿದ್ದೆ. ಈ ಬಾರಿಯೂ ಪ್ರಗತಿ ಕಾರ್ಯ ಮುಂದುವರಿದಿದ್ದು, ಅಗತ್ಯ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಬಿಜೆಪಿ ಗ್ರಾಮೀಣ ಮಂಡಲ ಅಧ್ಯ ಗಂಗಪ್ಪಗೌಡ ಪಾಟೀಲ್, ಪ್ರಮುಖರಾದ ಸಂಗಮೇಶಿ ವಾಲಿ, ಶಿವಕುಮಾರ ಪಾಟೀಲ್, ದಿಲೀಪ್ ಮೂಲಗೆ, ಬಾಬು ವಾಲಿ, ರೇವಣಸಿದ್ದಪ್ಪ ಬುಕ್ಕ, ಗುರುಸಿದ್ದಯ್ಯ ಮಠ, ಶಿವಶಂಕರ ವಾಲಿ, ರಾಜಕುಮಾರ, ಶೇಖರ ಸೌಕಾರ, ಅಪ್ಪಾಸಾಬ್, ಕರಬಸ್ಸಪ್ಪ ರಾಯನಾಡ, ಬಸವಣಪ್ಪ ವಾಲಿ, ಶಿವಾನಂದ ಬೊಶೆಟ್ಟಿ, ಸಂಜುಕುಮಾರ ಹೀರಾ, ಶರಣಬಸ್ಸಪ್ಪ ಸಾವಳಗಿ, ಶಂಭು, ಸತೀಶ ವಾಲಿ, ಪ್ರಕಾಶ ದೋಳಶೆಟ್ಟಿ, ಸುಭಾಷ ವಾಲಿ, ಶರಣಬಸ್ಸಪ್ಪ ವಾಲಿ, ಕೈಲಾಸ ರಾಗಿ, ಗೋಪಾಲ ಬೇಡರ ಇತರರಿದ್ದರು.