ಹುಲಸೂರಿನಲ್ಲಿ ನಡೆದ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮದಲ್ಲಿ ಅಂಜನಕುಮಾರ ಕಲ್ಯಾಣಿ, ನಾಗೇಶ ಕೌಟೆ, ಪ್ರವಿಣ ಹಾರಕೂಡೆ, ವೀರೇಶ ವಡ್ಡೆ, ಧನರಾಜ ನಾರಾಯಣಪುರೆ, ಅಜರ್​ ಪಟೇಲ್​, ಗಣೇಶ ಬಿರಾದಾರ ಇತರರಿದ್ದರು.  
ರಾಜ್ಯ

ಛಾಯಾಗ್ರಾಹಕರನ್ನು ಗುರುತಿಸುವ ಕೆಲಸವಾಗಲಿ

ಹುಲಸೂರು: ಛಾಯಾಗ್ರಾಹಕರು ಅನೇಕ ಕಷ್ಟಗಳ ಮಧ್ಯೆ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಅಂಥವರನ್ನು ಗುರುತಿಸಿ ಅಗತ್ಯ ಸೌಲಭ್ಯ ಹಾಗೂ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಬೇಕು ಎಂದು ಛಾಯಾಗ್ರಾಹಕರ ಸಂಘದ ತಾಲೂಕು ಅಧ್ಯಕ್ಷ ಅಂಜನಕುಮಾರ ಕಲ್ಯಾಣಿ ಮನವಿ ಮಾಡಿದರು. ನಗರದಲ್ಲಿ ಸಂಘ ಬುಧವಾರ ಏರ್ಪಡಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಮಾತನಾಡಿ, ಫೋಟೋ ತೆಗೆಯುವುದು ಗೌರವದ ಕೆಲಸ ಎಂದರು. ಪ್ರಮುಖರಾದ ನಾಗೇಶ ಕಾವಟೆ, ವೀರೇಶ ವಡ್ಡೆ, ಧನರಾಜ ನಾರಾಯಣಪುರೆ, ಅಜರ್​ ಪಟೇಲ್​, ಸುಮೀತ್​, ಪ್ರವಿಣ ಹಾರಕೂಡೆ, ಗಣೇಶ ಬಿರಾದಾರ, ಸಂತೋಷ ಟಿಳೆ, ಮಹೇಶ ಕಾಂಬಳೆ, ರಾಜಕುಮಾರ ಡೋಂಗ್ರೆ, ಉಪೇಂದ್ರ ಗಿರಿ, ಧನರಾಜ, ಶರದ ತಳವಾಡೆ, ಗಿರೀಶ್​ ಸ್ವಾಮಿ, ಪ್ರಶಾಂತ ಮೇಹಕರೆ, ಮನೋಜ ಸೂರ್ಯವಂಶಿ ಇತರರಿದ್ದರು. ಕಾರ್ಯನಿರತ ಛಾಯಾಗ್ರಾಹಕರಿಗೆ ಗುರುತಿನ ಚೀಟಿ ಹಾಗೂ ಪ್ರಮಾಣಪತ್ರ ವಿತರಿಸಿ ಸನ್ಮಾನ ಮಾಡಲಾಯಿತು.