ಬಸವಕಲ್ಯಾಣದ ಬಸವ ಧರ್ಮ ಪೀಠದಲ್ಲಿ ಆಯೋಜಿಸಿದ್ದ ಬಸವ ಜಯಂತ್ಯುತ್ಸವದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯೆ ಪಲ್ಲವಿ ಅವರನ್ನು ಸನ್ಮಾನಿಸಲಾಯಿತು. ಲಾವಣ್ಯಾ ಮಾತಾಜಿ, ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಯೋಗೇಶ್​, ರವೀಂದ್ರ ಕೋಳಕುರ, ಸಂಗಮೇಶ ಎನ್​. ಜವಾದಿ ಇತರರಿದ್ದರು. 
ರಾಜ್ಯ

ಬಸವ ಧರ್ಮ ಪೀಠದ ಅಭಿವೃದ್ಧಿಗೆ ಪ್ರಯತ್ನ

ಪ್ರಮುಖ ಮುಖ್ಯಾಂಶಗಳು

  • ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯೆ ಪಲ್ಲವಿ ಭರವಸೆ
  • ಕಲ್ಯಾಣದಲ್ಲಿ ತೊಟ್ಟಿಲು ಕಾರ್ಯಕ್ರಮ
ಬಸವಕಲ್ಯಾಣ: ಬಸವ ಧರ್ಮ ಪೀಠದಲ್ಲಿ ನಿತ್ಯ ಜರುಗುತ್ತಿರುವ ದಾಸೋಹ ವ್ಯವಸ್ಥೆಗೆ ದಾಸೋಹ ಭವನ ನಿರ್ಮಾಣ ಸೇರಿ ಬಸವ ಧರ್ಮ ಪೀಠದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುವ ಪ್ರಯತ್ನ ಮಾಡುವುದಾಗಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯೆ ಪಲ್ಲವಿ ಭರವಸೆ ನೀಡಿದರು.
ಬಸವ ಧರ್ಮ ಪೀಠ ಮಹಾಮನೆ ಮಹಾಮಠದ ಆವರಣದಲ್ಲಿ ಸೋಮವಾರ ಬಸವ ಜಯಂತಿ ನಿಮಿತ್ತ ಆಯೋಜಿಸಿದ್ದ ತೊಟ್ಟಿಲು ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಾಂಸತಿಕ ನಾಯಕ ವಿಶ್ವಗುರು ಬಸವಣ್ಣನವರು ಸಮಾನತೆಯ ಕ್ರಾಂತಿಯನ್ನು ಮಾಡಿದ ಶ್ರೇಷ್ಠ ದಾರ್ಶನಿಕ. ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್​ ಎಂದು ಖ್ಯಾತಿವೆತ್ತ ಅನುಭವ ಮಂಟಪ ಬಸವಕಲ್ಯಾಣದಲ್ಲಿದೆ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಅಲೆಮಾರಿಗಳ ಅಭಿವೃದ್ಧಿಗಾಗಿ ನಿರಂತರ ಶ್ರಮ ಹಾಕಿ ಕಾರ್ಯನಿರ್ವಹಿಸುತ್ತಿದ್ದೇನೆ. ಸಿಎಂ ಸಿದ್ದರಾಮಯ್ಯನವರು ಬಸವಾಭಿಮಾನಿ ಮುಖ್ಯಮಂತ್ರಿಯಾಗಿದ್ದು, ಬಸವಣ್ಣನವರ ಸಮ&ಸಮಾಜ ಕಲ್ಯಾಣ ಕಾರ್ಯಗಳನ್ನು ಇಂದಿಗೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದರು.
ಜಗದ್ಗುರು ಸಿದ್ದರಾಮೇಶ್ವರ ಸ್ವಾಮೀಜಿ, ಪೂಜ್ಯ ಲಾವಣ್ಯಾ ಮಾತಾಜಿ, ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಯೋಗೇಶ್​, ಸಹಾಯಕ ನಿರ್ದೇಶಕ ದಿಲೀಪಕುಮಾರ್​, ಸಾಹಿತಿ ಸಂಗಮೇಶ ಎನ್​. ಜವಾದಿ, ಗಿರಿಜಾ ಮಾತಾಜಿ, ಸುಜ್ಞಾನಿ ಮಾತಾಜಿ, ರಾಷ್ಟ್ರೀಯ ಬಸವ ದಳದ ತಾಲೂಕು ರವೀಂದ್ರ ಕೋಳಕುರ, ಸುಲೋಚನಾ ಗುದಗೆ, ಜಯಶ್ರೀ ಪಾಟೀಲ್​, ಮಲ್ಲಣ್ಣ, ರಾಜಶೇಖರ ದೇವಣಿ ಪಾಲ್ಗೊಂಡಿದ್ದರು.