Efforts for the academic development of students 
ರಾಜ್ಯ

ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮ

ತುಮಕೂರು ಡೆಸ್ಕ್
ಹೊಯ್ಸಳಕಟ್ಟೆ : ಶಾಲಾ ಕೊಠಡಿಗಳ ದುರಸ್ತಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ಅನುದಾನದಲ್ಲಿ ಕ್ರಮವಾಗಿ 3.5 ಲಕ್ಷ ರೂ. ಹಾಗೂ 4 ಲಕ್ಷ ರೂ. ಹಣ ನೀಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಕೆ.ಕಾಂತರಾಜು ತಿಳಿಸಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಹೊಯ್ಸಳಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾರದಾ ಪೂಜೆ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಾತನಾಡಿ,
ಹೊಯ್ಸಳಕಟ್ಟೆ ಸರ್ಕಾರಿ ಹಿರಿಯ ಪಾಥಮಿಕ ಶಾಲೆಯಲ್ಲಿ 1ನೇ ತರಗತಿಯಿಂದ ಇಂಗ್ಲಿಷ್ ವಾಧ್ಯಮ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ಒಂದೇ ವರ್ಷದಲ್ಲಿ ಕೊಠಡಿಯ ಶಂಕುಸ್ಥಾಪನೆ ವಾಡಿ ಉದ್ಘಾಟಿಸಲಾಗಿದೆ. ಇನ್ನೆರಡು ಕೊಠಡಿಗಳ ನಿರ್ವಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಎರಡು ಶೌಚಗೃಹ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಮನವಿ ವಾಡಿದರು.
ಮುಖ್ಯ ಶಿಕ್ಷಕ ಪರಶಿವಮೂರ್ತಿ ವಾತನಾಡಿ, ನಾನು ಈ ಶಾಲೆಯಲ್ಲಿ 29 ವರ್ಷ ಸೇವೆ ಸಲ್ಲಿಸಿದ್ದೇನೆ. ಎಸ್‌ಡಿಎಂಸಿ ಹಿರಿಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಕೆಲಸ ವಾಡಿದ ತೃಪ್ತಿ ಇದೆ ಎಂದರು.
ನಿವೃತ್ತಿ ಹೊಂದಿದ್ದ ಶಿಕ್ಷಕರಾದ ಗಂಗಾಧರಯ್ಯ, ರಾಮಕೃಷ್ಣಯ್ಯ, ವಿಜಯಕುವಾರಿ, ವಿಜಯಲಕ್ಷ್ಮಮ್ಮ, ಜಯಮ್ಮ, ಬುಳ್ಳಯ್ಯ, ವರ್ಗಾವಣೆಯಾದ ಶಿಕ್ಷಕರಾದ ನಾಗರತ್ನಮ್ಮ, ಚೌಡೇಗೌಡ, ಚಂದ್ರಯ್ಯ, ಬೇಬಿಕಲಾ ಅವರನ್ನು ಸನ್ಮಾನಿಸಲಾಯಿತು. ಅಕ್ಷರ ದಾಸೋಹ ಸಹಾಯಕ ನಿರ್ದೆಶಕ ಗವಿರಂಗಯ್ಯ, ಶಿಕ್ಷಣ ಇಲಾಖೆ ನೌಕರರ ಸಹಕಾರ ಸಂದ ಅಧ್ಯಕ್ಷ ಶಿವಕುವಾರ್, ವೆಂಕಟರಮಣ, ಗಿರೀಶ್, ಹಂದನಕೆರೆ ಸುರೇಶ್, ರಾಜಶೇಖರ್,
ರಂಗಪ್ಪ, ರಾಜಯ್ಯ, ರಾಮಚಂದ್ರಪ್ಪ ಶಬ್ಬೀರ್, ಕುವಾರ್, ನಟರಾಜ್, ಲೋಕೇಶ್, ಮುಖ್ಯಶಿಕ್ಷಕ ಟಿ.ಎನ್. ರಮೇಶ್, ನಿವೃತ್ತ ಮುಖ್ಯ ಶಿಕ್ಷಕ ತಿಮ್ಮರಾಯಪ್ಪ, ಉಪಾಧ್ಯಕ್ಷ ಮಲ್ಲೇಶ್, ಸದಸ್ಯರಾದ ನವೀನ್ ಕುವಾರ್, ಗುರುರಾಜ್, ಅನಿತ್, ವೀಣಾ, ಮೀನಾಕ್ಷಿ, ಶಿಕ್ಷಕರಾದ ಮೋಹನ್ ಕುವಾರ್, ರೇಣುಕಾ, ಚೇತನ್, ಲೀಲಾಮಣಿ, ಜಗದಾಂಬ, ದಯಾನಂದ್, ಹೇಮಲತಾ, ಧನಲಕ್ಷ್ಮೀ ಇದ್ದರು.