ಬಸವಕಲ್ಯಾಣ ತಾಲೂಕಿನ ಮೋರಖಂಡಿ ಗ್ರಾಮದ ಜೇತವನ ಬುದ್ಧ ವಿಹಾರದಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ಅವರ 199ನೇ ಜನ್ಮ ದಿನಾಚರಣೆ, ಪಿಯುಸಿ ದ್ವೀತಿಯ ಪಿಯು ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಎಂಎಲ್ಸಿ ಎಂ.ಜಿ.ಮುಳೆ ಅವರನ್ನು ಸನ್ಮಾನಿಸಲಾಯಿತು. ಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ, ನರಸಿಂಗರೆಡ್ಡಿ ಗದಲೇಗಾಂವ, ಅಣ್ಣಾರಾವ, ದತ್ತು ಗಾಯಕವಾಡ, ಸತೀಶಕುಮಾರ, ಡಿ.ಟಿ ಕಾಂಬಳೆ, ಮಾರುತಿ ಶಿಂದೆ ಇತರರಿದ್ದರು.
- ಎಂಎಲ್ಸಿ ಮುಳೆ ಭರವಸೆ
- ಮೋರಖಂಡಿಯಲ್ಲಿ ಫುಲೆ ಜನ್ಮ ದಿನಾಚರಣೆ
ಬಸವಕಲ್ಯಾಣ: ಮೋರಖಂಡಿ ಗ್ರಾಮದ ಜೇತವನ ಬುದ್ಧ ವಿಹಾರದಲ್ಲಿ ಡಿಜಿಟಲ್ ಗ್ರಂಥಾಲಯ ಮಂಜೂರು ಮಾಡಿಸಲು ಪ್ರಯತ್ನಿಸುವುದಾಗಿ ಎಂಎಲ್ಸಿ ಎಂಜಿ ಮುಳೆ ಭರವಸೆ ನೀಡಿದರು.
ಮೋರಖಂಡಿ ಗ್ರಾಮದ ಜೇತವನ ಬುದ್ಧ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ಮಹಾತ್ಮ ಜ್ಯೋತಿಬಾ ಫುಲೆ ಅವರ 199ನೇ ಜನ್ಮ ದಿನಾಚರಣೆ ಹಾಗೂ ಪಿಯುಸಿ ದ್ವೀತಿಯ ಪಿಯು ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಬರೆದಿರುವ ಎಲ್ಲ ಗ್ರಂಥಗಳನ್ನು ಓದಿದ್ದೇನೆ. ಭಗವಾನ್ ಗೌತಮ ಬುದ್ಧರ ವಿಚಾರಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂದು ಹೇಳಿದರು.
ಹುಲಸೂರು ತಹಸೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ಮೊರಖಂಡಿ ಗ್ರಾಮದ ಬುದ್ಧವಿಹಾರ ರಾಜ್ಯದಲ್ಲಿ ಪ್ರಸಿದ್ಧವಾಗಿದೆ ಎಂದರು.
ನೀಲಾಂಬಿಕಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನರಸಿಂಗರೆಡ್ಡಿ ಗದಲೇಗಾಂವ ಮಾತನಾಡಿ, ಡಾ.ಅಂಬೇಡ್ಕರ್ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜೇತವನ ಬುದ್ಧವಿಹಾರದ ಅಧ್ಯಕ್ಷ ಅಣ್ಣಾರಾವ, ಉಪಾಧ್ಯಕ್ಷ ದತ್ತು ಗಾಯಕವಾಡ, ಕಾರ್ಯದರ್ಶಿ ಸತೀಶಕುಮಾರ, ತಾಪಂ ಮಾಜಿ ಸದಸ್ಯ ಡಿ.ಟಿ ಕಾಂಬಳೆ, ಮಾರುತಿ ಶಿಂದೆ, ಅರವಿಂದ, ಶೈಲೇಂದ್ರ, ಅಮೂಲ, ದಶರಥರಾಮಾ, ದಶರಥ ಗಣಪತಿ, ಲಕ್ಷ$್ಮಣ, ನರಸಿಂಗ, ಬನಾಜಿ, ನಿತೀನ, ಜ್ಞಾನದೇವ, ರಾಮಜಿ, ಸಂದಿಪಾನ, ಸುಭಾಷ, ರಾಜಕುಮಾರ, ಪ್ರದಿಪ ಮತ್ತು ಭೀಮರಾವ ಶರಣಪ್ಪ, ವಿಕ್ರಮ ಮುಗಳೆ, ಡಾ. ಓಂ ಹಂದಿಗುತ್ತೆ, ಮತ್ತು ಮಾರುತಿ ಪಾಂಡರವಡೆ, ಸುರೇಶ ಮುದಬಲೆ, ಮುಕೇಶ, ಅನೀಲ ಕಾಂಬಳೆ, ವಿಶ್ವನಾಥ ಬನ್ಸೂಡೆ ಇತರರಿದ್ದರು. ದ್ವಿತಿಯ ಪಿಯುಸಿಯಲ್ಲಿ ಉತ್ತೀರ್ಣರಾದ ಸಮ್ಮೇಕ ರಾಮಜಿ, ಕುನಾಲ ಪಂಡಿತ, ಪ್ರತಿಾ ಸುರೇಶ, ಪ್ರಜ್ವಲ ರಾಹುಲ, ವಿಜಯಲಕ್ಷ್ಮೀ ವಿಕಾಸ, ಮನ್ಸವಿ ಮಹೇಂದ್ರಕುಮಾರ, ರೂಪಾಲಿ ದಶರಥ, ದಮ್ಮಶಿಲಾ ರೂಪಚಂದ ಇತರರನ್ನು ಸನ್ಮಾನಿಸಲಾಯಿತು.