ಬೈಲಹೊಂಗಲದಲ್ಲಿ ಮೌಲಾನಾ ಆಜಾದ್​ ಆಂಗ್ಲ ಮಾಧ್ಯಮ ಸರ್ಕಾರಿ ಮಾದರಿ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಮಹಾಂತೇಶ ಕೌಜಲಗಿ ಭೂಮಿಪೂಜೆ ನೆರವೇರಿಸಿದರು. ಎ.ಎನ್​.ಪ್ಯಾಟಿ, ವಿಜಯ ಬೋಳನ್ನವರ, ಬಸವರಾಜ ಜನ್ಮಟ್ಟಿ ಇತರರಿದ್ದರು. 
ರಾಜ್ಯ

ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆ

ಬೈಲಹೊಂಗಲ: ನಗರದ ಬಡ ವಿದ್ಯಾರ್ಥಿಗಳ ಶಿಣ ಅಭಿವೃದ್ಧಿಗೆ 5 ಕೋಟಿ ರೂ. ವೆಚ್ಚದಲ್ಲಿ ಮೌಲಾನಾ ಆಜಾದ್​ ಆಂಗ್ಲ ಮಾಧ್ಯಮ ಸರ್ಕಾರಿ ಮಾದರಿ ಶಾಲೆಯನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ನಗರದ ಇಂದಿರಾ ನಗರದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನೂತನ ಮೌಲಾನಾ ಆಜಾದ್​ ಆಂಗ್ಲ ಮಾಧ್ಯಮ ಶಾಲಾ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಇಂಗ್ಲಿಷ್​ ಶಿಕ್ಷಣದಿಂದ ಬಡ ವಿದ್ಯಾರ್ಥಿಗಳು ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಈ ಯೋಜನೆ ರೂಪಿಸಿದೆ. ಕಟ್ಟಡ ಸೇರಿ ಶಿಕರ ಸಕಲ ಸೌಕರ್ಯಗಳ ಮೂಲಕ ಶಾಲೆ ಪ್ರಾರಂಭವಾಗಲಿದ್ದು, ಎಲ್ಲ ಸಮುದಾಯದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಬಿಇಒ ಎ.ಎನ್​.ಪ್ಯಾಟಿ, ಪುರಸಭೆ ಮಾಜಿ ಅಧ್ಯ ವಿಜಯ ಬೋಳನ್ನವರ, ಬಸವರಾಜ ಜನ್ಮಟ್ಟಿ, ಬಾಬು ಕುಡಸೋಮಣ್ಣವರ, ಮಾಜಿ ಉಪಾಧ್ಯ ಬುಡ್ಡೆಸಾಬ ಶಿರಸಂಗಿ, ಡಾ.ಮಹಾಂತೇಶ
ಕಳ್ಳಿಬಡ್ಡಿ, ಇಮ್ರಾನ್​ ಕಿತ್ತೂರ, ಪುಕ್ರಾನ ಗದಗ, ಪುರಸಭೆ ಮಾಜಿ ಸದಸ್ಯ ಕುತುಬುದ್ದಿನ್​ ಮುಲ್ಲಾ, ನಿಸ್ಸಾರ್​ ತಿಗಡಿ, ಹೇಮಲತಾ ಹಿರೇಮಠ, ಶಶಿಕಲಾ ಕಲ್ಲೊಳ್ಳಿ,
ಅಂಬಿಕಾ ಕೊಟಬಾಗಿ, ಹಸನ ಗೊರವನಕೊಳ್ಳ, ಆರ್​.ಎ.ಅರಬಾಂವಿ, ಡಾ.ಐ.ಎಂ.ಖಾಜಿ, ಎಸ್​ಡಿಎಂಸಿ ಅಧ್ಯ ಸುರೇಶ ಮದಲಬಾಂವಿ, ಪ್ರಕಾಶ ಕೊಟಬಾಗಿ, ಡಾ.ಎ.ಎಂ.ಬಾಗೇವಾಡಿ ಇತರರರಿದ್ದರು.