ಶಿಕ್ಷಣ ಸಚಿವ ಮಧುಬಂಗಾರಪ್ಪ, ಲೇಖಕರು ಹಾಗೂ ಪ್ರಕಾಶಕರೊಂದಿಗೆ ಸಭೆ ನಡೆಸಿದರು.  
ರಾಜ್ಯ

ಲೇಖಕ, ಪಕ್ರಾಶಕರ ಜತೆ ಶಿಕ್ಷಣ ಸಚಿವರ ಸಭೆ

ಪ್ರಮುಖ ಮುಖ್ಯಾಂಶಗಳು

  • * ಸಮಸ್ಯೆ ಪರಿಹಾರಕ್ಕೆ ಕ್ರಮ
  • * ಬೇಡಿಕೆ ಈಡೇರಿಸುವ ಭರವಸೆ
ಬೆಂಗಳೂರು: ಕನ್ನಡ ಪುಸ್ತಕಗಳ ಪುಟವಾರು ಬೆಲೆ 2017ರಿಂದ ಪರಿಷ್ಕೃತವಾಗಿಲ್ಲದಿರುವುದಕ್ಕೆ ಸಂಬಂಧಿಸಿದ ಕಡತವನ್ನು ತಕ್ಷಣವೇ ಮುಖ್ಯಮಂತ್ರಿಗಳಿಗೆ ಕಳಿಸುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕರ್ನಾಟಕ ಲೇಖಕ ಮತ್ತು ಪ್ರಕಾಶಕ ಮುದ್ರಕರ ಒಕ್ಕೂಟದ ಹೋರಾಟ ಮತ್ತು ಮನವಿಗೆ ಸ್ಪಂದಿಸಿ ಬುಧವಾರ ಒಕ್ಕೂಟದ ಸಭೆ ಕರೆದಿದ್ದ ಸಚಿವರು, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವಿಷಯಗಳ ಕುರಿತು ಅಧಿಕಾರಿಗಳು ಹಾಗೂ ಪ್ರಕಾಶಕರೊಂದಿಗೆ ಚರ್ಚಿಸಿದರು. ಮುಖ್ಯಮಂತ್ರಿಗಳು ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗೆಗೆ ಅಪಾರ ಗೌರವ ಪ್ರೀತಿ ಇರುವ ಕಾರಣದಿಂದ ನಿಮ್ಮ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದರು. ಇದೇ ವೇಳೆ 2023ರಿಂದ 2025ರವರೆಗಿನ ಪ್ರಕಟಿತ ಪುಸ್ತಕಗಳ ಆಯ್ಕೆಯನ್ನು ಒಂದೇ ಹಂತದಲ್ಲಿ ಆರು ತಿಂಗಳ ಅವಧಿಯಲ್ಲಿ ಖರೀದಿಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಮಾತನಾಡಿ, 2022ನೇ ಸಾಲಿನ ಪಟ್ಟಿ ತಮ್ಮ ಬಳಿ ಇದ್ದು ಶೀಘ್ರವೇ ಮುಖ್ಯಮಂತ್ರಿಗಳ ಅನುಮೋದನೆಗೆ ಕಳಿಸಿಸಲಾಗುವುದು. ಇನ್ನುಮುಂದೆ ಅಯಾ ವರ್ಷದ ಬಜೆಟ್ ಅನುಮೋದನೆಯನ್ನು ಸಾಧ್ಯವಾದಷ್ಟು ಬೇಗ ಮಾಡಿ ಕಳಿಸಲು ಸಮಯ ಮಿತಿಯಲ್ಲಿ ಅನುಮೋದಿಸಲು ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಹಿರಿಯ ವಕೀಲ ಸಿ.ಎಸ್ .ದ್ವಾರಕಾನಾಥ್, ಹಿರಿಯ ಕಲಾವಿದ ಎಂ.ಎಸ್. ಮೂರ್ತಿ, ಡಾ. ವಸುಂಧರಾ ಭೂಪತಿ, ಅವಿರತ ಹರೀಶ್, ಚಂದ್ರಕೀರ್ತಿ, ಬಿ.ರಾಜೇಶ್, ಧಾತ್ರಿ ಉಮೇಶ್, ಹಿರಿಯ ಪತ್ರಕರ್ತರಾದ ಆರ್. ಪೂರ್ಣಿಮಾ, ಅಭಿನವ ರವಿಕುಮಾರ್, ಇಲಾಖೆ ಮುಖ್ಯಸ್ಥರು ಇತರರು ಇದ್ದರು.

ಸಚಿವರು ನೀಡಿರುವ ಭರವಸೆ ಹೊಸ ವರ್ಷಕ್ಕೆ ನಮಗೆ ನೀಡುತ್ತಿರುವ ಕೊಡುಗೆ. ತಡವಾದರೂ ಸರ್ಕಾರ ನಮ್ಮತ್ತ ನೋಡಿದ್ದಕ್ಕೆ ಇಡೀ ಕನ್ನಡ ಪುಸ್ತಕೋದ್ಯಮ ಹರ್ಷಿಸುತ್ತದೆ. ಈ ಭರವಸೆಗಳು ಈಡೇರಲಿ, ಪುಸ್ತಕೋದ್ಯಮ ಚೇತರಿಸಿಕೊಳ್ಳಲಿ.