ಐನಾಪೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶೈಕ್ಷಣಿಕ ವರ್ಷದ ಆರಂಭೋತ್ಸವವನ್ನು ತಹಸೀಲ್ದಾರ್ ಪ್ರಶಾಂತ್ ಚನಗೊಂಡ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ವಿಠಲ ಶಿವಣಗಿ, ಮಹಾದೇವ ಚವಾಣ್, ವಿಲಾಸ್ ಗಾಯಕವಾಡ, ಎಸ್.ವೈ. ಸಿಂಧೆ, ಜೆ.ಎಸ್. ಮೋಗಲಿ ಇತರರಿದ್ದರು. 
ರಾಜ್ಯ

ಶಿಕ್ಷಣದಿಂದ ಮಕ್ಕಳ ಬದುಕು ಸುಗಮ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಪ್ರಶಾಂತ ಚನಗೊಂಡ ಹೇಳಿಕೆ
  • ಶೈಕ್ಷಣಿಕ ವರ್ಷದ ಆರಂಭೋತ್ಸವ
ಐನಾಪೂರ: ಶಿಕ್ಷಣ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿದ್ದು, ಶಾಲೆಯ ಸರ್ವತೋಮುಖ ಪ್ರಗತಿಗೆ ಶಿಕ್ಷಕರು ಮತ್ತು ಪಾಲಕರು ಸಮಾನ ಜವಾಬ್ದಾರರು ಎಂದು ತಹಸೀಲ್ದಾರ್ ಪ್ರಶಾಂತ್ ಚನಗೊಂಡ ಹೇಳಿದರು.
ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ವರ್ಷದ ಆರಂಭೋತ್ಸವ ಸಮಾರಂಭದಲ್ಲಿ ಮಾತ ನಾಡಿದ ಅವರು, ಸರ್ಕಾರ ಉಚಿತ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಬಿಸಿಯೂಟ ಸೇರಿ ವಿದ್ಯಾರ್ಥಿಗಳಿಗಿರುವ ವಿವಿಧ ಸೌಲಭ್ಯಗಳ ಕುರಿತು ವಿವರಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ವಿಠಲ ಶಿವಣಗಿ ಮಾತನಾಡಿ, ಶಾಲೆಯ ಶೈಕ್ಷಣಿಕ ಹಾಗೂ ಮೂಲ ಸೌಕರ್ಯಗಳ ಪ್ರಗತಿಗೆ ಕಮಿಟಿ ವತಿಯಿಂದ ಸದಾ ಪೂರ್ಣ ಸಹಕಾರ ನೀಡಲಾಗುವುದು. ಪಾಲಕರು ಕೇವಲ ಸಭೆಗಳಿಗೆ ಸೀಮಿತವಾಗದೆ ಶಾಲೆ ದಿನನಿತ್ಯದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಮಹಾದೇವ ಚವಾಣ್, ಕವಲಗಿ ವಲಯದ ಸಿಆರ್‌ಪಿ ವಿಲಾಸ್ ಗಾಯಕವಾಡ, ಎಸ್.ವೈ. ಸಿಂಧೆ, ಶಿಕ್ಷಕಿ
ಜೆ.ಎಸ್. ಮೋಗಲಿ, ಉಮೇಶ ರೊಟ್ಟಿ, ಎಚ್.ಡಿ. ಪಾಂಡು, ಗ್ರಾಮ ಆಡಳಿತ ಅಧಿಕಾರಿ ಎಂ.ಎ. ಇಂಡಿಕರ್, ಲಕ್ಷ್ಮಣ ವಾಲಿಕಾರ, ಶರಣಗೌಡ ಗೊಬ್ಬುರ, ಕರೇಪ್ಪಾ ಕಾಖಡಂಕಿ, ಭೀಮಶಿ ಪಾಟೀಲ ಮಲ್ಲಿಕಾರ್ಜುನ ಸೊಲಾಪುರ ಇತರರಿದ್ದರು.