ಯಾದಗಿರಿ ನಗರದ ಮಶೆಮ್ಮ ಗುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೋಣೆಗಳನ್ನು ಶಾಸಕ ಚನ್ನಾರಡ್ಡಿ ಪಾಟೀಲ್ ಮಂಗಳವಾರ ಉದ್ಘಾಟಿಸಿದರು. ಹಣಮಂತ ನಾಯಕ, ವೀರಪ್ಪ ಕನ್ನಳ್ಳಿ, ನರಸಪ್ಪ ಬುಡ್ಡಯ್ಯನೋರ ಇತರರಿದ್ದರು.
- ಶಾಸಕ ಚನ್ನಾರಡ್ಡಿ ಪಾಟೀಲ್ ಅಭಿಪ್ರಾಯ
- ಯಾದಗಿರಿಯಲ್ಲಿ ತರಗತಿ ಕೋಣೆ ಉದ್ಘಾಟನೆ
ಯಾದಗಿರಿ: ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಪ್ರಮುಖವಾಗಿದೆ. ಕಾರಣ ನಗರ ಹಾಗೂ ಗ್ರಾಮೀಣ ಜನರು ತಮ್ಮ ಮಕ್ಕಳಿಗೆ ತಪ್ಪದೆ ಶಿಕ್ಷಣ ಕೊಡಿಸಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ವಾಲ್ಮೀಕಿ ನಗರದಲ್ಲಿ 54 ಲ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಶೆಮ್ಮ ಗುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 4 ಕೋಣೆಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಶೌಚಗೃಹ ನಿರ್ಮಾಣ ಕೆಲಸ ನಡೆದಿದ್ದು, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ, ಮಕ್ಕಳ ಅನುಕೂಲಕ್ಕಾಗಿ ಕೂಡಲೇ ಕಂಪೌಂಡ್ ಮತ್ತು ಆಟದ ಮೈದಾನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ನಗರಸಭೆ ಮಾಜಿ ಸದಸ್ಯ ಹಣಮಂತ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಕನ್ನಳ್ಳಿ, ನಾಯಕ ಸಮಾಜದ ಮುಖಂಡ ನರಸಪ್ಪ ಬುಡ್ಡಯ್ಯನೋರ ಮಾತನಾಡಿದರು. ದಂಡಗುಂಡ ಬಸವಣ್ಣ ದೇವಸ್ಥಾನದ ಅರ್ಚಕ ಸಿದ್ದಯ್ಯ ಸ್ವಾಮಿ ಹಿರೇಮಠ, ಇಂಜಿನಿಯರ್ಗಳಾದ ಕೈಲಾಶ, ಪ್ರಭಾಕರ, ಶರಣಗೌಡ ಪಾಟೀಲ್, ಮಲ್ಲಪ್ಪ, ಪ್ರಮುಖರಾದ ಬಸವರಾಜಪ್ಪ ಬುಡ್ಡಯ್ಯನೋರ, ಕೃಷ್ಣಾ ನಾನೆಕಾರ, ಮುಖ್ಯ ಗುರು ಸುರೇಖಾ ಪಂಚಾಳ, ರೇಣುಕಾ ಮೋನಪ್ಪ ಹಳಿಗೇರ, ವಿಶ್ವನಾಥ ನಾಯಕ, ಹಣಮಂತ ನಿಶಾನಿ, ದೇವಿಂದ್ರಪ್ಪ ಬುಡ್ಡಯ್ಯನೋರ, ಚಂದಪ್ಪ ಅಕ್ಕನೋರ, ನಾಗಪ್ಪ ಪಿಲ್ಲಿ ಇತರರಿದ್ದರು.