ಸಿಂದಗಿ ನಗರದ ಸಾರಂಗಮಠದಲ್ಲಿ ಪರಮಪೂಜ್ಯ ಶ್ರೀ ಚೆನ್ನವೀರ ಮಹಾಸ್ವಾಮಿಗಳ 35ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಎ.ಎಂ. ಮನಗೂಳಿ ಶ್ರೀಗಳಿಗೆ ರೇಣುಕಾಚಾರ್ಯ ಭಾವಚಿತ್ರ ನೀಡಿದರು. ಡಾ.ಪ್ರಭುಸಾರಂಗದೇವ ಶೀವಾಚಾರ್ಯರು, ಡಾ.ವಿಶ್ವಪ್ರಭುದೇವ ಶಿವಾಚಾರ್ಯರು, ಚಂದ್ರಕಾಂತ ಬಿರಾದಾರ ಇದ್ದರು. 
ರಾಜ್ಯ

ಸಮಾಜ ಪರಿವರ್ತನೆಗೆ ಶಿಕ್ಷಣ ಮುಖ್ಯ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎ.ಎಂ. ಮನಗೂಳಿ ಅಭಿಮತ
  • ಚನ್ನವೀರ ಸ್ವಾಮೀಜಿಗಳ 35ನೇ ಪುಣ್ಯಸ್ಮರಣೋತ್ಸವ
ಸಿಂದಗಿ: ಸಮಾಜದ ಪರಿವರ್ತನೆಗೆ ಶಿಕ್ಷಣದ ಶಕ್ತಿ ಅಗತ್ಯವಾಗಿದೆ ಎಂದು ಸಾರಂಗಮಠದ ಪೂಜ್ಯ ಲಿಂಗೈಕ್ಯ ಚನ್ನವೀರ ಸ್ವಾಮೀಜಿ ಅರಿತಿದ್ದರು ಎಂದು ಶಾಸಕ ಎ.ಎಂ.ಮನಗೂಳಿ ಹೇಳಿದರು.

ನಗರದ ಸಾರಂಗಮಠದ ಲಿಂ.ಮ.ಘ.ಚ. ಸಿದ್ಧಲಿಂಗ ಮಹಾಸ್ವಾಮೀಜಿ ಕಾನ್ಫ್‌ರೆನ್ಸ್ ಹಾಲ್‌ನಲ್ಲಿ ಶುಕ್ರವಾರ ಪರಮ ಪೂಜ್ಯ ಚೆನ್ನವೀರ ಮಹಾಸ್ವಾಮಿಗಳ 35ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡ, ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಒದಗಿಸುವ ಮೂಲಕ ಭವಿಷ್ಯದ ಪೀಳಿಗೆ ಬಗ್ಗೆ ದೂರದೃಷ್ಟಿ ಹೊಂದಿದ್ದ ಶ್ರೀಗಳು, ಮೊದಲಿಗೆ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ, ನಂತರದಲ್ಲಿ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಹುಟ್ಟು ಹಾಕಿ, ಅವರ ಅಂದಿನ ಸಮಾಜಮುಖಿ ಚಿಂತನೆ ಇಂದು ಲಕ್ಷಾಂತರ ಜನರಿಗೆ ದಾರಿದೀಪವಾಗಿದೆ ಎಂದರು.
ಮಾಡಬಾಳ ಆಯುಷ್ ಸಮುದಾಯ ಆರೋಗ್ಯಾಧಿಕಾರಿ ಚಂದ್ರಕಾಂತ ಬಿರಾದಾರ, ಕಾಯಕಯೋಗಿ ಶ್ರೀ ಚೆನ್ನವೀರ ಮಹಾಸ್ವಾಮೀಜಿ ಕುರಿತು ಉಪನ್ಯಾಸ ನೀಡಿದರು. ಸಾರಂಗಮಠದ ಉತ್ತರಾಧಿಕಾರಿ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಶ್ರೀಮಠದ ಪ್ರಸಾದ ನಿಲಯದ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಶಾಸಕ ಎ.ಎಂ.ಮನಗೂಳಿ ಹಾಗೂ ಧರ್ಮಪತ್ನಿ ನಾಗರತ್ನ ಮನಗೂಳಿ ಅವರನ್ನು ಪೂಜ್ಯರು ಸನ್ಮಾನಿಸಿ ಗೌರವಿಸಿದರು. ಡಾ. ಪ್ರಭುಸಾರಂಗದೇವ ಶಿವಾ ಚಾರ್ಯರು ಸಾನಿಧ್ಯ ವಹಿಸಿದ್ದರು.
ಅಶೋಕ ವಾರದ, ಎಂ.ಎಸ್. ಹೈಯಾಳಕರ್, ವೀರೇಶ ಜೋಗೂರ, ಡಾ.ಶರಣು ಜೋಗೂರ, ಪ್ರಾಚಾರ್ಯ ಬಿ.ಎಂ.ಸಿಂಗನಳ್ಳಿ, ವಿ.ಪಿ.ನಂದಿಕೋಲ, ಪಿ.ವಿ.ಮಹಲಿನಮಠ, ಮುಖ್ಯೋಪಾಧ್ಯಾಯ ಎಸ್.ವೈ. ಯರಲಡ್ಡಿ, ಶರಣಗೌಡ ಪಾಟೀಲ, ಎನ್.ಬಿ. ಪೂಜಾರಿ, ಡಿ.ಎಂ. ಸರಶೆಟ್ಟಿ, ಜಿ.ಎಸ್. ಜಂಗಿನಮಠ, ಸೋಮಶೇಖರ ಜೋಗೂರ, ಸಾಹೇಬಗೌಡ ದುದ್ದಗಿ ಮತ್ತಿತರರಿದ್ದರು.