ವಿಜಯಪುರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಶಂಕರ ಬಿದರಿ, ಬಸವಲಿಂಗ ಸ್ವಾಮೀಜಿ, ನಟರಾಜ ಸಾಗರನಹಳ್ಳಿ ಮತ್ತಿತರರಿದ್ದರು. 
ರಾಜ್ಯ

ಸದೃಢ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಮುಖ್ಯ

ಪ್ರಮುಖ ಮುಖ್ಯಾಂಶಗಳು

  • ಲಿಂಗಾಯತ ಮಹಾಸಭಾ ಅಧ್ಯಕ್ಷ ಶಂಕರ ಬಿದರಿ ಅಭಿಮತ
  • ರಾಜ್ಯ ಮಟ್ಟದ ಕಾರ್ಯಾಗಾರ
ವಿಜಯಪುರ: ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು. ಎಲ್ಲರೂ ಶಿಕ್ಷಣವಂತರಾದಾಗಲೇ ಸಮಾಜ ಸದೃಢವಾಗಲು ಸಾಧ್ಯ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಂಕರ ಬಿದರಿ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕರ್ನಾಟಕ ರಾಜ್ಯ ಘಟಕ ಮತ್ತು ವಿಜಯಪುರ ಜಿಲ್ಲಾ ಘಟಕದ ಸಹಯೋಗದಲ್ಲಿ ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ, ಪರಸ್ಪರ ಪರಿಚಯ ವಿಚಾರ ಮಂಥನವೇ ರಾಜ್ಯಮಟ್ಟದ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ. ಸಮಾಜದ ಎಲ್ಲರೂ ವೀರಶೈವ ಲಿಂಗಾಯತರು ಎಂದು ಸಂಕಲ್ಪ ಮಾಡೋಣ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಜ್ಞಾನದ ದೀಪವನ್ನು ಆರದಂತೆ ಕಾಪಾಡಬೇಕು. ಎಲ್ಲರೂ ಒಳ್ಳೆಯ ಸಂಸ್ಕಾರವಂತರಾಗಬೇಕು. ತನು ಶುದ್ಧ, ಮನ ಶುದ್ಧವಿಟ್ಟುಕೊಂಡು ತಪ್ಪದೇ ಲಿಂಗಾರ್ಚನೆ ಮಾಡಬೇಕು. ವೀರಶೈವ ಲಿಂಗಾಯತ ಧರ್ಮವನ್ನು ಉಳಿಸೋಣ ಎಲ್ಲರೂ ಕೂಡಿ ಬಾಳೋಣ ಎಂದರು.
ಮಹಾನಗರ ಪಾಲಿಕೆ ಮೇಯರ್ ಎಸ್.ಎಂ. ಕರಡಿ, ವಿ.ಎಸ್. ತೇಲಿ, ಕಾಶಿನಾಥ ಅಣೆಪ್ಪನವರ, ವಿದ್ಯಾವತಿ ಅಂಕಲಗಿ, ಮಹಾಸಭೆಯ ಉಪಾಧ್ಯಕ್ಷ ಸಹದೇವ ನಾಡಗೌಡರ, ಪ್ರದಾನ ಕಾರ್ಯದರ್ಶಿ ಬಿ.ಟಿ. ಈಶ್ವರಗೊಂಡ ಮತ್ತಿತರರಿದ್ದರು.
ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಷಟಸ್ಥಳ ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಉಪಾಧ್ಯಕ್ಷ ಅಮರೇಗೌಡ ಭಯ್ಯಪುರ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜ್ಯೋತಿ ಬಾಗಲಕೋಟ, ಶಾರದಾ ಕೊಪ್ಪ ತಂಡದವರು ವೀರಶೈವ ಗೀತೆ ಪ್ರಸ್ತುತ ಪಡಿಸಿದರು. ಮಹಾಸಭೆಯ ಜಿಲ್ಲಾಧ್ಯಕ್ಷ ವ್ಹಿ.ಸಿ. ನಾಗಠಾಣ ಸ್ವಾಗತಿಸಿದರು. ದೊಡ್ಡಣ್ಣ ಭಜಂತ್ರಿ ವಂದಿಸಿದರು.
ನಂತರ ನಡೆದ ಗೋಷ್ಠಿಗಳಲ್ಲಿ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಮಾತನಾಡಿದರು. ಬುರಣಾಪುರ ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಶಾರದಾ ಜಿ. ಕೊಪ್ಪ ಉಪನ್ಯಾಸ ನೀಡಿದರು.
ಮಾಜಿ ಶಾಸಕಿ ಸೀಮಾ ಮಸೂತಿ ಅಧ್ಯಕ್ಷತೆ ವಹಿಸಿದ್ದರು. ಸಂಗಮೇಶ ಬದಾಮಿ, ಸುಭಾಸ ಕನ್ನೂರ ನಿರೂಪಿಸಿದರು. ಶಾರದಾ ಹಿರೇಮಠ ವಂದಿಸಿದರು.
ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಕೈಗಾರಿಕಾ ಮತ್ತು ವಾಣಿಜ್ಯ ವಿಜಯಪುರ ಘಟಕದ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿತು. ಗುರುಸಿದ್ದಪ್ಪ ಅನಂತಪುರ (ಜಿಲ್ಲಾಧ್ಯಕ್ಷ), ಎನ್.ಎಸ್. ಚೌಧರಿ, ಭೀಮರಾಯ ಶಿರಡೋಣ, ಮೋಹನ ಬಗಲಿ ಮತ್ತು ಸೋಮಶೇಖರ ಅಣ್ಣೆಪ್ಪನವರ (ಉಪಾಧ್ಯಕ್ಷರಾಗಿ), ಜಯಪ್ರಕಾಶ ಅಂಬಲಿ (ಪ್ರಧಾನ ಕಾರ್ಯದರ್ಶಿ) ಅಶೋಕ ದೇಶೆಟ್ಟಿ (ಕೋಶಾಧ್ಯಕ್ಷ) ಎಂ.ಎಸ್. ಬಿರಾದಾರ, ಅನಿಲ ಸಾಲಕ್ಕಿ ಮತ್ತು ಶ್ರೀಧರ ಚಿಂಚಲಿ (ಕಾರ್ಯದರ್ಶಿ) ಪ್ರಮಾಣ ವಚನ ಸ್ವೀಕರಿಸಿದರು.