ಕಲಬುರಗಿ : ಎಲ್ಲ ಸಮಸ್ಯೆಗಳಿಗೆ ಸಮಾಧಾನ ಶಿಕ್ಷಣ. ಅದನ್ನು ಪಡೆಯುವ ಹಕ್ಕು ಎಲ್ಲರಿಗೂ ಇದೆ ಎಂದು ಕೆಬಿಎನ ವಿವಿಯ ಕ್ಯಾಂಪಸ್ ನಿರ್ದೇಶಕ ಡಾ.ಸಯ್ಯದ್ ಮುಸ್ತಫಾ ಅಲ್ ಹುಸ್ಸೇನಿ ನುಡಿದರು.
ಬುಧವಾರ ಸಯ್ಯದ ಅಕ್ಬರ ಹುಸ್ಸೇನಿ ಅಕ್ಯಡೆಮಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಪಿಯುಸಿ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಲವಾಗಿ ಗುಲ್ಬರ್ಗಾ ವಿದ್ಯಾರ್ಥಿಗಳು ಬೇರೆ ಊರಿಗೆ ಹಣ ಖರ್ಚು ಮಾಡಿ ಹೋಗುವ ಅವಶ್ಯಕತೆ ಇಲ್ಲ. ಕಲಬುರಗಿಲ್ಲಿಯೇ ಅಕಾಡೆಮಿ ಸ್ಥಾಪಿಸಿ ಪಿಯುಸಿ ಯಿಂದಲೇ ಸಿಇ ಟಿ, ಜೆಇಇ, ನೀಟ್ ಪರೀಕ್ಷೆ ತರಬೇತಿ ಅತ್ಯಂತ ಕಡಿಮೆ ದರದಲ್ಲಿ ನೀಡಲಾಗುತ್ತದೆ ಎಂದರು.
ಕಠಿಣ ಪರಿಶ್ರಮ, ಸಮಯ ಪಾಲನೆ ಮತ್ತು ಸರಿಯಾದ ಕೇಂದ್ರೀಕರಣವಿದ್ದರೆ ಏನನ್ನಾದರೂ ಸಾಧಿಸಬಹುದು. ಖಾಜಾ ಎಜುಕೇಶನ್ ಸಂಸ್ಥೆ ಜ್ಞಾನರ್ಜನೆಯಲ್ಲಿ ನಿರತವಾಗಿದ್ದು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ನಿರಂತರ ಶ್ರಮಿಸುತ್ತಿದೆ ಎಂದು ಕೆಬಿಎನ ವಿವಿಯ ಉಪ ಕುಲಪತಿ ಪ್ರೊ.ಅಲಿರಜಾ ಮೂಸ್ವಿ ಹೇಳಿದರು.
ಸಮ ಉಪಕುಲಪತಿ ಪ್ರೊ ಅಶಫಾಕ್ ಅಹ್ಮದ್ ಮಾತನಾಡುತ್ತ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಕೋರ್ಸಗಳು ಲಭ್ಯಇವೆ. ಅಲ್ಲದೇ ನುರಿತ ಅಧ್ಯಪಕರನ್ನು ನೇಮಕ ಮಾಡಲಾಗಿದೆ. ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವತೆ ಹೇಳಿದರು.
ಪ್ರೊ ಪಠಾಣ, ಇವರು ಮಾತನಾಡಿ ಖಾಜಾ ಸಂಸ್ಥೆ ಬೆಳೆದು ಬಂದ ದಾರಿ ಹಾಗೂ ಸಮಾಜದಲ್ಲಿ ಶಿಕ್ಷಣ ಪ ಸರಿಸುವ ಕಾರ್ಯ ಕುರಿತು ಮಾತನಾಡಿ ದಿವಂಗತ ಡಾ ಸಯ್ಯದ ಶಹಾ ಖುಸ್ರೋ ಹುಸ್ಸೇನಿ ಸಾಹೇಬರ ಕನಸು ನನಸಾಗಲಿದೆ ಎಂದರು.
ಪ್ರಥಮ ಪಿಯುಸಿ ಗೆ ಕೇವಲ 18000 ರೂಪಾಯಿ ಫೇಸ, ತರಬೇತಿಗೆ 22000. ಇವತ್ತೇ ನೋಂದಣಿ ಮಾಡಿದರೆ 2000 ರೂಪಾಯಿ ಕಡಿಮೆ ಮಾಡುವ ಆಫರ್ ಇದೆ. ಕಲಾ ವಿಭಾಗದಲ್ಲಿ ಕೇವಲ 8000 ವರ್ಷಕ್ಕೆ ಹಾಗೂ ವಾಣಿಜ್ಯದಲ್ಲಿ ಕೇವಲ 10000 ವರ್ಷಕ್ಕೆ ಎಂದು ಪ್ರಾಂಶುಪಾಲರಾದ ಡಾ ಫೀರೋಜ್ ಹೇಳಿದರು.
ತರಬೇತಿಗೆ ನೇಮಕ ಮಾಡಲಾದ ಅಧ್ಯಪಕರನ್ನು ಉಪನ್ಯಾಸಕ ಶಾರುಖ ಪರಿಚಯಿಸಿದರು. ಸಾಧನೆಗೈದ ಹಳೆಯ ವಿದ್ಯಾರ್ಥಿಗಳಿಗೆ ಮೆಮೆಂಟೋ ನೀಡಲಾಯಿತು.
ಮೌಲನಾ ನಸೀರ್ ಪ್ರಾರ್ಥಿಸಿದರು.ಇಂಗ್ಲೀಷ್ ಉಪನ್ಯಾಸಕಿ ಹುಮೆರಾ ಸುಲ್ತಾನಾ ನಿರೂಪಿಸಿ ಸ್ವಾಗತಿಸಿದರು. ಡಾ ಫಿರೋಜ ಪ್ರಸ್ತಾವಿಕ ನುಡಿದರು. ಫಿಸಿಕ್ಸ್ ಉಪನ್ಯಾಸಕಿ ಸಬೀನಾ ವಂದಿಸಿದರು.