ಕೆಂಭಾವಿ ಸಮೀಪ ಐನಾಪುರ ಗ್ರಾಮದ ಆದರ್ಶ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಆದರ್ಶ ಜ್ಞಾನ ಮಂಥನ ಕಾರ್ಯಕ್ರಮವನ್ನು ಸಿಆರ್​ಪಿ ರಮೇಶ ವಣಿಕ್ಯಾಳ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಶಿವನಗೌಡ ದೊಡ್ಡಮನಿ, ಸಂಜು ದೊಡ್ಡಮನಿ, ವಿದ್ಯಾ ದೊಡ್ಡಮನಿ ಇತರರಿದ್ದರು. 
ರಾಜ್ಯ

ಜೀವನದ ಮೌಲ್ಯ ಅರಿಯುವುದೇ ಶಿಕ್ಷಣ

ಕೆಂಭಾವಿ: ಶಿಕ್ಷಣ ಎನ್ನುವುದು ಕೇವಲ ಕಲಿಕೆಗೆ ಸೀಮಿತವಲ್ಲ. ಅದು ಜೀವನದ ಮೌಲ್ಯ ಅರಿಯುವ ದಾರಿ ಎಂದು ಸಿಆರ್​ಪಿ ರಮೇಶ್​ ವಣಿಕ್ಯಾಳ ಹೇಳಿದರು.
ಐನಾಪುರ ಗ್ರಾಮದ ಆದರ್ಶ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಆದರ್ಶ ಜ್ಞಾನ ಮಂಥನ ಎಂಬ ವಿಶಿಷ್ಟ ಹಾಗೂ ಮಾದರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಜ್ಞಾನ ಪಡೆಯಬೇಕಾದರೆ ವಿದ್ಯಾರ್ಥಿ ಜೀವನಲ್ಲಿ ಮಕ್ಕಳು ಕಷ್ಟ ಪಡಬೇಕು ದೈನಂದಿನ ಜೀವನದ ಗರಿಷ್ಠ ಸಮಯ ಓದುವುದರಲ್ಲೆ ಕಳೆದಾಗ ಮಾತ್ರ ವಿದ್ಯಾರ್ಥಿಗಳು ಮುಂದೆ ಬರಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಮಕ್ಕಳಿಗೆ ಜವಾಬ್ದಾರಿ ಕಲಿಸಲು ಇಂತಹ ಕಾರ್ಯಕ್ರಮ ಪೂರಕವಾಗಿವೆ. ಶಿಕ್ಷಣ ಎಂದರೆ ಕೇವಲ ಅಂಕಗಳಿಕೆಯಲ್ಲ, ಅದು ವ್ಯಕ್ತಿತ್ವ ವಿಕಸನ ಎಂಬುದನ್ನು ಈ ಜ್ಞಾನ ಮಂಥನ ಸಾಬೀತುಪಡಿಸಿದ್ದು, ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವ ಶಾಲೆಯ ಕಾರ್ಯ ಶ್ಲಾನೀಯ ಎಂದರು.
ಶ್ರೀ ಶಾಂತಯ್ಯ ಸ್ವಾಮಿ, ಶ್ರೀ ಜಗದಂಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಿವನಗೌಡ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಬಾಪುಗೌಡ ದೊಡ್ಡಮನಿ, ನೀಲಕಂಠರಾಯಗೌಡ ಪಾಟೀಲ್​, ಶಾಂತಗೌಡ ಸಾಲವಡಗಿ, ಎಸ್​.ಎಸ್​. ಪಾಟೀಲ್​, ಮಧುಗೌಡ ಜಲಪುರ, ಪಾಲ್ಗೊಂಡಿದ್ದರು. ಶಾಲೆಯ ಮುಖ್ಯಗುರು ಸಂಜು ದೊಡ್ಡಮನಿ, ವಿದ್ಯಾ ದೊಡ್ಡಮನಿ ಇತರರಿದ್ದರು.