ದಸ್ತಪುರ ಗ್ರಾಮದಲ್ಲಿ ಸರ್ಕಾರಿ ಶಾಲೆ ಆರು ಕೋಣೆಗಳನ್ನು ಶಾಸಕ ಬಸವರಾಜ ಮತ್ತಿಮಡು ಸೋಮವಾರ ಉದ್ಘಾಟಿಸಿದರು. ತಹಸೀಲ್ದಾರ್​ ಮಹಮ್ಮದ್​ ಮೊಹಸಿನ್​, ತಾಪಂ ಇಒ ರಮೇಶ ಪಾಟೀಲ್​, ಬಿಇಒ ಸೋಮಶೇಖರ ಹಂಚಿನಾಳ, ಶಾಂತವೀರ ಪಾಟೀಲ್​, ಪ್ರವಿಣ್​ ಮುಚ್ಚಟ್ಟಿ, ಮಲ್ಲಿಕಾರ್ಜುನ ಮರತೂರಕರ್​, ಅನಿತಾ ರಾಠೋಡ್​ ಇತರರಿದ್ದರು. 
ರಾಜ್ಯ

ಶಿಕ್ಷಣ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ

ಕಮಲಾಪುರ: ಗ್ರಾಮೀಣ ಮತೇತ್ರದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದಾಗಿ ಶಾಸಕ ಬಸವರಾಜ ಮತ್ತಿಮಡು ಹೇಳಿದರು.
ದಸ್ತಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 83 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸರ್ಕಾರಿ ಪ್ರಾಥಮಿಕ ಶಾಲೆಯ ಆರು ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿದ ಅವರು, ತರಗತಿ ಕೋಣೆಗಳು ಮಳೆಯಿಂದ ಸೋರುತ್ತಿರುವುದನ್ನು ಗ್ರಾಮಸ್ಥರು ಗಮನಕ್ಕೆ ತರುತ್ತಲೇ ಅನುದಾನ ಒದಗಿಸಿ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆದು ಹೆತ್ತವರು ಮತ್ತು ಈ ನಾಡಿನ ಋಣ ತೀರಿಸಬೇಕು. ದುಶ್ಚಟಗಳಿಂದ ದೂರವಿದ್ದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ಯಾವುದೇ ರೀತಿಯ ಸಹಕಾರ ಬೇಕಿದ್ದರೂ ನೇರವಾಗಿ ನನ್ನನ್ನು ಸಂಪರ್ಕಿಸಿದರೆ ಸಹಾಯ ಮಾಡಲು ಸಿದ್ಧ ಎಂದು ಭರವಸೆ ನೀಡಿದರು.
ತಹಸೀಲ್ದಾರ್​ ಮಹಮ್ಮದ್​ ಮೊಹಸಿನ್​, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ ಪಾಟೀಲ್​, ಬಿಇಒ ಸೋಮಶೇಖರ ಹಂಚಿನಾಳ, ಪ್ರಮುಖರಾದ ವೈಜನಾಥ ಪಂಡರಗಿ, ಶಾಂತವೀರ ಪಾಟೀಲ್​, ಶ್ರೀಶೈಲ್​ ಮಾಲಿಪಾಟೀಲ್​, ಪ್ರವಿಣ್​ ಮುಚ್ಚಟ್ಟಿ, ಮಲ್ಲಿಕಾರ್ಜುನ ಮರತೂರಕರ್​, ಮುಖ್ಯ ಗುರು ಅನಿತಾ ರಾಠೋಡ್​, ಚಂದ್ರಕಾಂತ ಪಸಾರ, ಸತೀಶ ಸೊರಡೆ, ಚನ್ನವಿರ ಮುನ್ನಳ್ಳಿ, ಪಿಡಿಒ ಅಮೀತಕುಮಾರ ಇತರರಿದ್ದರು.
"

ದಸ್ತಾಪುರ ಕ್ರಾಸ್​ನಿಂದ ದಸ್ತಾಪುರವರೆಗೆ ಡಾಂಬರಿಕರಣ ರಸ್ತೆ ಮತ್ತ ಸೇತುವೆ ನಿರ್ಮಾಣಕ್ಕೆ 5 ಕೋಟಿ, ಜೆಜೆಎಂಗೆ 1.18 ಕೋಟಿ ರೂ. ಸೇರಿ 7.52 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಂಡಿದ್ದೇನೆ. ಗುಣಮಟ್ಟದಿಂದ ನಡೆಯುವಂತೆ ನೋಡಿಕೊಳ್ಳುವುದು ನಿಮ್ಮೆಲ್ಲರ ಹೊಣೆ.