ನೀಲಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಉದ್ಘಾಟಿಸಿದರು. ಶ್ರೀಯಾಂಕಾ ಧನಶ್ರೀ, ಮಾರುತಿ ಹುಜರಾತಿ ಇತರರಿದ್ದರು. 
ರಾಜ್ಯ

ಶಿಕ್ಷಣದಿಂದ ಸರ್ವ ಜನಾಂಗದ ಏಳಿಗೆ

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಅನಿಸಿಕೆ
  • ನೀಲಹಳ್ಳಿಯಲ್ಲಿ ಪ್ರಯೋಗಾಲಯ ಉದ್ಘಾಟನೆ
ಮಳಖೇಡ: ಶಿಕ್ಷಣದಿಂದ ಮಾತ್ರ ಸರ್ವ ಜನಾಂಗದ ಏಳಿಗೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್​ ಸರ್ಕಾರ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ ಎಂದು ವೈದ್ಯಕಿಯ ಶಿಕ್ಷಣ, ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿದರು.
ನೀಲಹಳ್ಳಿಯಲ್ಲಿ ಪಿಎಂಶ್ರೀ ಯೋಜನೆಯಡಿ ಸುಮಾರು 17.70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಪ್ರೌಢಶಾಲೆ ವಿಜ್ಞಾನ ಪ್ರಯೋಗಾಲಯ ಹಾಗೂ ಕೆಕೆಆರ್​ಡಿಬಿ ಮೈಕ್ರೋ ಯೋಜನೆಯಡಿ 30 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕೋಣೆ ಉದ್ಘಾಟಿಸಿ ಮಾತನಾಡಿ, ಶಿಕ್ಷಣಕ್ಕೆ ಉತ್ತೇಜನ ನೀಡುವ ಸಲುವಾಗಿ ಜಿಟಿಟಿಸಿ ಕಾಲೇಜು ಆರಂಭಿಸುತ್ತಿದ್ದು, ಇಲ್ಲಿ ಅಭ್ಯಾಸ ಮಾಡಿದ ಮಕ್ಕಳಿಗೆ ಸುಲಭವಾಗಿ ಕೆಲಸ ದೊರಕಲಿದೆ. ಪ್ರೌಢಶಾಲಾ ಮಕ್ಕಳಿಗೆ ಜಿಟಿಟಿಸಿ ಕೋರ್ಸ್​ ಬಗ್ಗೆ ಮಾಹಿತಿ ನೀಡಲು ೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸೇಡಂ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿಶ್ವನಾಥ ಪಾಟೀಲ್​ ಬೊಮ್ನಳ್ಳಿ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್​, ಹಾಪ್​ಕಾಮ್​ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್​ ಊಡಗಿ, ತಹಸೀಲ್ದಾರ್​ ಶ್ರೀಯಾಂಕಾ ಧನಶ್ರೀ, ಬಿಇಒ ಮಾರುತಿ ಹುಜರಾತಿ, ಪ್ರಮುಖರಾದ ಬಸವರಾಜ ರೇವಗೊಂಡ, ಜಗದೇವಪ್ಪ ಪಾಟೀಲ್​, ರಾಜಶೇಖರ ಪುರಾಣಿಕ, ಚನ್ನಬಸಪ್ಪ ಹಾಗರಗಿ, ಮಹೇಶ ಪಾಟೀಲ್​ ತರನಳ್ಳಿ, ಸತೀಶ ಪೂಜಾರಿ, ಶ್ರೀನಿವಾಸ ಸಂಗಾವಿ, ರಾಮಯ್ಯ ಪೂಜಾರಿ, ಶರಣಗೌಡ ಎಂ.ಸಿ. ಪಾಟೀಲ್​, ಶಿವಶರಣಪ್ಪ ಜಮಾದಾರ, ಮಂಜುನಾಥ ಸಾಹು, ದೇವಪ್ಪ ನಾಯ್ಕೋಡಿ, ಬಸವರಾಜ ಗೌಡಪ್ಪನೋರ, ಗೌಡಪ್ಪ ಪಾಟೀಲ್​, ಸುರೇಖಾ ವೆಂಕಟರಾವ, ಮುಖ್ಯಗುರು ಮಂಜು ಇತರರಿದ್ದರು. ಶಿವಾನಂದ ಇಟಿಕಾರ ಸ್ವಾಗತಿಸಿ, ನಿರೂಪಣೆ ಮಾಡಿದರು. ಬಂಡೆಪ್ಪ ಪೂಜಾರಿ ವಂದಿಸಿದರು.