ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಭಾರತಮತ್ತು ಜಪಾನ್‌ನಲ್ಲಿ ಜಾಗತಿಕಶಿಕ್ಷಣದ ಭವಿಷ್ಯ, ಜ್ಞಾನಮತ್ತು ನಾವೀನ್ಯತೆ ವಿನಿಮಯಕ್ಕಾಗಿ ‘ಎಐ ಮತ್ತು ಉದ್ಯೋಗಗಳ ಭವಿಷ್ಯ’ಎಂಬ ವಿಷಯದ ಕುರಿತು ಗುರುವಾರಬೆಂಗಳೂರಿನಲ್ಲಿ ಭಾರತ-ಜಪಾನ್ಉನ್ನತ ಶಿಕ್ಷಣ ಸಮಾವೇಶ ನಡೆಯಿತು.
ಓ.ಪಿ.ಜಿಂದಾಲ್ಗ್ಲೋಬಲ್ ವಿಶ್ವವಿದ್ಯಾಲಯ(ಜೆಜಿಯು)ಮತ್ತುಟೋಕಿಯೊ ವಿಶ್ವವಿದ್ಯಾಲಯದಸಹಭಾಗಿತ್ವದಲ್ಲಿ ನಡೆದಕಾನ್‌ಕ್ಲೇವ್‌ನಲ್ಲಿ ಎರಡೂಸಂಸ್ಥೆಗಳ ಶಿಕ್ಷಣ ತಜ್ಞರು,ವಿದ್ಯಾರ್ಥಿಗಳುಪಾಲ್ಗೊಂಡಿದ್ದರು. ಆನ್‌ಲೈನ್ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್,ಭಾರತದಲ್ಲಿಉನ್ನತ ಶಿಕ್ಷಣದಲ್ಲಿನ ಹೊಸಬೆಳವಣಿಗೆಗಳು ಮತ್ತು ಭಾರತವುಐತಿಹಾಸಿಕ ಮತ್ತು ಕಾರ್ಯತಂತ್ರದಸಂಬಂಧವನ್ನು ಹಂಚಿಕೊಳ್ಳುವಜಪಾನ್‌ನೊಂದಿಗಿನ ಹೊಸ ಪಾಲುದಾರಿಕೆಗಳನ್ನುಸ್ವಾಗತಿಸಿದರು.
ಗೋಷ್ಠಿಯಲ್ಲಿಮಾತನಾಡಿದ ಜೆಜಿಯು ಸ್ಥಾಪಕಉಪಕುಲಪತಿ ಡಾ.ಸಿ.ರಾಜಕುಮಾರ್,ಜೆಜಿಯುಮತ್ತು ಟೋಕಿಯೊ ವಿವಿ ನಡುವೆಅಲ್ಪಾವಧಿ ವಿದೇಶಿ ಅಧ್ಯಯನಕಾರ್ಯಕ್ರಮವನ್ನು ಹೊಂದಿರುವಮೊದಲ ವಿಶ್ವವಿದ್ಯಾಲಯಗಳಾಗಿವೆ.ಜಪಾನ್‌ನಅತ್ಯುನ್ನತ ವಿಶ್ವವಿದ್ಯಾಲಯವಾಗಿರುವಟೋಕಿಯೊ ವಿವಿಯು ಅನೇಕ ಪ್ರಧಾನಮಂತ್ರಿಗಳು, ನೊಬೆಲ್ಪ್ರಶಸ್ತಿ ವಿಜೇತರು, ವಿವಿಧಕ್ಷೇತ್ರದ ತಜ್ಞರನ್ನು ಹುಟ್ಟುಹಾಕಿದೆ.ಅದರೊಂದಿಗೆಆಗಿರುವ ಒಪ್ಪಂದವು ಭಾರತ ಮತ್ತುಜಪಾನ್ ನಡುವಿನ ಕಾರ್ಯತಂತ್ರದಪಾಲುದಾರಿಕೆಯ ಹೃದಯಭಾಗದಲ್ಲಿಉನ್ನತ ಶಿಕ್ಷಣವನ್ನು ನೀಡಲಿದೆ.ಎರಡೂ ದೇಶಗಳನಡುವಿನ ಐತಿಹಾಸಿಕ ಸಂಬಂಧಕ್ಕೆಈ ಒಪ್ಪಂದ ನಾಂದಿಯಾಗಿದೆ ಎಂದುಬಣ್ಣಿಸಿದರು.
ಕಾರ್ಯಕ್ರಮದಲ್ಲಿಟೋಕಿಯೊ ವಿವಿ ಪ್ರಾಜೆಕ್ಟ್ರಿಸರ್ಚ್ ಅಸೋಸಿಯೇಟ್ ಪ್ರೊಸತ್ಸುಕಿ ಶಿಯೋಯಾಮಾ,ಎಜುಕೇಶನ್ವರ್ಲ್ಡ್ ಸಂಪಾದಕ ದಿಲೀಪ್ ಠಾಕೂರ್,ನಿವೃತ್ತಐಎಎಸ್ ಅಧಿಕಾರಿ ಕೆ. ಜೈರಾಜ್ಮತ್ತಿತರರು ಪಾಲ್ಗೊಂಡಿದ್ದರು.
ಭಾರತದಿಂದ ಜಪಾನ್‌ಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ. ವಿವಿಧ ಶ್ರೇಣಿಯ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡಲು ಬಯಸುವ ಆಸಕ್ತ ವಿದ್ಯಾರ್ಥಿಗಳನ್ನು ಕರೆತರಲು ನಾವು ಎದುರು ನೋಡುತ್ತಿದ್ದೇವೆ. ಜಪಾನ್‌ನಲ್ಲಿ, ಸ್ಥಳೀಯ ಮತ್ತು ವಿದೇಶಿ ವಿದ್ಯಾರ್ಥಿಗಳ ನಡುವೆ ವ್ಯತ್ಯಾಸ ಇರುವುದಿಲ್ಲ. ಶುಲ್ಕ ವಿನ್ಯಾಸ ಇಬ್ಬರಿಗೂ ಸಮನಾಗಿರುತ್ತದೆ. ಸುರಕ್ಷೆ, ಭಾಷೆ, ಸಂಸ್ಕೃತಿಯ ದೃಷ್ಟಿಯಿಂದ ಇಲ್ಲಿನ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಜೆಜಿಯು ಜೊತೆಗಿನ ನಮ್ಮ ಪಾಲುದಾರಿಕೆ ಎರಡೂ ದೇಶಗಳ ನಡುವಿನ ಸಂಬಂಧವನ್ನು ಬಲಗೊಳಿಸುವ ವಿಶ್ವಾಸವಿದೆ.
— ಪ್ರೊ. ಕೌರಿ ಹಯಾಶಿ, ಟೋಕಿಯೋ ವಿವಿ ಕಾರ್ಯನಿರ್ವಾಹಕ ಉಪಾಧ್ಯಕ್ಷೆ