ಶಿಕ್ಷಣ, ಪರಿಶ್ರಮವೇ ಯಶಸ್ಸಿನ ದಾರಿ Education 
ರಾಜ್ಯ

ಶಿಕ್ಷಣ, ಪರಿಶ್ರಮವೇ ಯಶಸ್ಸಿನ ದಾರಿ Education

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶನೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆ ಮುಖ್ಯಶಿಕ್ಷಕ ಅನಿಸಿಕೆ
ಬಂಗಾರಪೇಟೆ: ಶಿಕ್ಷಣ ಮತ್ತು ಪರಿಶ್ರಮವೇ ಯಶಸ್ಸಿನ ದಾರಿ ಎಂಬುದಕ್ಕೆ ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡಿ ಸಿವಿಲ್​ ನ್ಯಾಯಾಧೀಶಯಾಗಿ ಆಯ್ಕೆಯಾಗಿರುವ ಎನ್​.ಅಶ್ವಿನಿ ಅವರೇ ಉತ್ತಮ ಉದಾಹರಣೆಯಾಗಿದ್ದಾರೆ ಎಂದು ಶ್ರೀ ಶನೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆ ಮುಖ್ಯಶಿಕ್ಷಕ ಎಚ್​.ಎಲ್​.ಅನಂದ್​ ಮೆಚ್ಚುಗೆ ವ್ಯಕ್ತಪಡಿಸಿದರು. Education
ಕೀಲುಕೊಪ್ಪದ ಶ್ರೀ ಶನೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನೂತನ ನ್ಯಾಯಾಧೀಶೆ ಎನ್​.ಅಶ್ವಿನಿ 1996&97 ನೇ ಸಾಲಿನಿಂದ ನಮ್ಮ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದು, ಶಾಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದರು.
ಕೀಲುಕೊಪ್ಪ ಗ್ರಾಮದ ನಿವೃತ್ತ ರೈಲ್ವೆ ನೌಕರ ನಾರಾಯಣಪ್ಪ ಮತ್ತು ರತ್ನಮ್ಮ ದಂಪತಿ ಪುತ್ರಿಯಾದ ಎನ್​.ಅಶ್ವಿನಿ ಚಿನ್ನಕೋಟೆ ಗ್ರಾಮದ ವಕೀಲ ಶ್ಯಾಮ್​ಕುಮಾರ್​ ಅವರ ಪತ್ನಿಯಾಗಿದ್ದಾರೆ, 10 ವರ್ಷಗಳಿಂದ ವಕೀಲೆಯಾಗಿ ಬಂಗಾರಪೇಟೆ ಮತ್ತು ಕೆಜಿಎ್​ ನ್ಯಾಯಾಲಯಗಳಲ್ಲಿ ವಕೀಲರಾಗಿ ವೃತ್ತಿ ಮಾಡುತ್ತಿದ್ದರು ಎಂದರು.
ನಿವೃತ್ತ ಶಿಕ ರಂಗಣ್ಣ ಮಾತನಾಡಿ, ಹೈಕೋರ್ಟ್​ 2025ರಲ್ಲಿ 83 ಸಿವಿಲ್​ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು, ಡಿಸೆಂಬರ್​ನಲ್ಲಿ ಲಿಖಿತ ಪರೀೆ ನಡೆಸಲಾಗಿತ್ತು. ಲಿಖಿತ ಪರೀೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳಿಗೆ 2026ರ ಜನವರಿ ತಿಂಗಳಿನಲ್ಲಿ ವೈಯಕ್ತಿಕ ಸಂದರ್ಶನಕ್ಕೆ ಆಹ್ವಾನಿಸಿದ್ದು, ವೈಯಕ್ತಿಕ ಸಂದರ್ಶನ ಪರೀೆಯಲ್ಲಿ ತಾಲೂಕಿನ ಎನ್​.ಅಶ್ವಿನಿ ಆಯ್ಕೆಯಾಗುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದರು.
ಎನ್​.ಅಶ್ವಿನಿ ಶಿಕರ ಒಡನಾಟ, ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು, ಶಿಕರ ಸಹಕಾರದಿಂದ ಗುರಿ ತಲುಪಲು ಸಾಧ್ಯವಾಯಿತು ಎಂದರು.
ಅಶ್ವಿನಿ ಅವರ ತಾಯಿ ರತ್ನಮ್ಮ ಹಾಗೂ ಪತಿ ವಕೀಲ ಶ್ಯಾಮಕುಮಾರ್​, ಶಿಕರಾದ ಎಸ್​.ಗಿರಿಜಮ್ಮ, ಉಷಾರಾಣಿ, ಚಂದ್ರಕಲಾ ಇದ್ದರು.