ಮಕ್ಕಳಿಗೆ ವಿದ್ಯೆ, ಸಂಸ್ಕಾರವೇ ಉತ್ತಮ ಆಸ್ತಿ children 
ರಾಜ್ಯ

ಮಕ್ಕಳಿಗೆ ವಿದ್ಯೆ, ಸಂಸ್ಕಾರವೇ ಉತ್ತಮ ಆಸ್ತಿ children

ರಾಯಲ್ಪಾಡು: ಪಾಲಕರು ಮಕ್ಕಳಿಗೆ ಆಸ್ತಿ, ಅಂತಸ್ತು ಮಾಡುವುದರ ಬದಲು ಒಳ್ಳೆಯ ವಿದ್ಯೆ, ಸಂಸ್ಕಾರ ಕಲಿಸಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸಿಮೆಂಟ್​ ನಾರಾಯಣಸ್ವಾಮಿ ಹೇಳಿದರು. children
ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾರದಾ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಜೀವನ ಶೈಲಿ, ಮಾನವೀಯತೆ ಬೆಳಸಿಕೊಳ್ಳುವುದು ಮುಖ್ಯ. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರು ಸಾಧನೆ ಮಾಡಬೇಕು ಎಂದರು.
ಪ್ರಾಂಶುಪಾಲ ಪಿ.ಗಣೇಶ್​ ಮಾತನಾಡಿ, ಉಪನ್ಯಾಸಕರು ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ಶ್ರಮವಹಿಸುತ್ತಾರೆ. ವಿದ್ಯಾರ್ಥಿಗಳ ದ್ಯೇಯ ಅರಿತು ಅವರ ಸಾಧನೆಗೆ ನೀರೆರೆಯುತ್ತಾರೆ ಎಂದರು.
ಶಿಕ್ಷಣ ಪ್ರೇಮಿ ಗುಡಿಪಲ್ಲಿ ಕಿರಣ್​ಕುಮಾರ್​ ಮಾತನಾಡಿ, ಓದಿನ ಜತೆ ವಿದ್ಯಾರ್ಥಿಗಳು ಮೌಲ್ಯಯುತ ಗುಣ ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಬೇಕು. ವಿದ್ಯೆಗೆ ಬಡವ ಬಲ್ಲಿದನೆಂಬ ಭೇದಭಾವ ಇಲ್ಲ ಎಂದು ಹೇಳಿದರು.