bank accounts 
ರಾಜ್ಯ

ಜ್ಞಾನೇಂದ್ರ,ಕನ್ನಾಳೆ ಬ್ಯಾಂಕ್ ಖಾತೆ ಫ್ರೀಜ್‌ಗೆ ಇ.ಡಿ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ಬಾಲ್ಕಿ ಸಹಕಾರ ಬ್ಯಾಂಕ್‌ನಿಂದ ಜ್ಞಾನೇಂದ್ರ ಚಿನ್ನ ಖರೀದಿಗೆ ಹಣ ಪಾವತಿ
  • ಸಿಐಡಿ ಅಧಿಕಾರಿಗಳಿಂದಲೂ ತನಿಖೆ ಚುರುಕು
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದಲ್ಲಿ ನಡೆದಿರುವ ಪರೀಕ್ಷಾ ಹಗರಣದ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್, ಅವರ ಆಪ್ತ ಬಸವರಾಜ್ ಕನ್ನಾಳೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಅವರ ಖಾತೆಯಲ್ಲಿನ ಲಂಚದ ಹಣ ಫ್ರೀಜ್ ಮಾಡುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಸಿಐಡಿ ಅಧಿಕಾರಿಗಳ ತನಿಖೆ ನಂತರ, ಪರೀಕ್ಷಾ ಅಕ್ರಮದ ಕುರಿತು ಇ.ಡಿ ತನಿಖೆ ಆರಂಭಿಸಿದೆ. ಆರೋಪಿ ಜ್ಞಾನೇಂದ್ರ ಆಯೋಗದ ಪರೀಕ್ಷಾ ನಿಯಂತ್ರಕರಾಗಿ ನಿಯೋಜನೆಗೊಂಡ ದಿನಾಂಕದಿಂದ ಆತನ ಹಾಗೂ ಅವರ ಸಂಬಂಧಿಕರ ಖಾತೆಯಲ್ಲಿ ನಡೆದಿರುವ ಹಣಕಾಸಿನ ವ್ಯವಹಾರ, ಆರೋಪಿ ಕನ್ನಾಳೆ ಮತ್ತು ಅವರ ಸಂಬಂಧಿಕರು, ಆಪ್ತರಿಂದ ವರ್ಗಾವಣೆಗೊಂಡ ನಗದು ವ್ಯವಹಾರದ ಮಾಹಿತಿ ಸಂಗ್ರಹಿಸಿದ್ದಾರೆ. ಬೀದರ್, ಬಾಲ್ಕಿ ಹಾಗೂ ಬೆಂಗಳೂರಿನ ವಿವಿಧ ಬ್ಯಾಂಕ್ ಖಾತೆ ನಡೆದಿರುವ ಕೋಟ್ಯಂತರ ವ್ಯವಹಾರದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಮೂರು ಕಡೆ ಪರೀಕ್ಷಾ ಅಕ್ರಮ:
ಪಶುವೈದ್ಯಾಧಿಕಾರಿ ಹುದ್ದೆಯ ಪರೀಕ್ಷೆ ಸೇರಿ ಹಿಂದಿನ ಹಲವು ಪರೀಕ್ಷೆ ಬಗ್ಗೆ ಅಭ್ಯರ್ಥಿಗಳನ್ನು ಪರೀಕ್ಷೆ ಬರೆಯಿಸಿರುವುದು, ಪ್ರಶ್ನೆಪತ್ರಿಕೆ ಸೋರಿಕೆಗೊಳಿಸಿ ತರಬೇತಿ ನೀಡಿರುವುದು ಸೇರಿ ಒಟ್ಟು ಮೂರು ಸ್ಥಳಗಳಲ್ಲಿ ಅಕ್ರಮ ನಡೆಸಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಜ್ಞಾನೇಂದ್ರಗೆ ಸೇರಿ ದೇವನಹಳ್ಳಿ ರೆಸಾರ್ಟ್, ಕನ್ನಾಳಗೆ ಸೇರಿದ ಸಂಜಯನಗರದ ನಿವಾಸ ಹಾಗೂ ಕೇರಳ ಗಡಿ ಭಾಗದ ರೆಸಾರ್ಟ್‌ನಲ್ಲಿ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಿ ತರಬೇತಿ ನೀಡಿರುವ ಸ್ಥಳವನ್ನು ಅಧಿಕಾರಿಗಳು ಗುರುತಿಸಿದ್ದಾರೆ.
ಡೀಲ್ ಮಾಡಿಕೊಂಡಿದ್ದ ಎಲ್ಲ ಅಭ್ಯರ್ಥಿಗಳನ್ನು ಒಂದೇ ಕಡೆ ಸೇರಿಸುವುದು ಇತರರಿಗೆ ಅನುಮಾನ ಬರಲಿದ ಎಂದು 10 ರಿಂದ 15 ಅಭ್ಯರ್ಥಿಗಳ ಗುಂಪುಗಳನ್ನಾಗಿ ಮಾಡಿಕೊಂಡಿದ್ದ ಆರೋಪಿಗಳು ಮೂರು ಕಡೆ ತರಬೇತಿ ನೀಡಿ ಪರೀಕ್ಷೆ ಬರೆಸಿದ್ದಾರೆ.
ಅಭ್ಯರ್ಥಿಗಳನ್ನು ತರಬೇತಿ ನೀಡುತ್ತಿದ್ದ ಸ್ಥಳಕ್ಕೆ ಜ್ಞಾನೇಂದ್ರ ಕುಮಾರ್ ಹಾಜರಾಗುತ್ತಿರಲಿಲ್ಲ. ಆತನ ಆಪ್ತನಾಗಿದ್ದ ಬಸವರಾಜ್ ಕನ್ನಾಳೆ ಹಾಗೂ ಈತನ ಸಹೋದರ ಗೌಪ್ಯವಾಗಿ ಸಭೆ ನಡೆಸಿ, ಪರೀಕ್ಷಾ ಅಕ್ರಮದ ಹಾಗೂ ಸರ್ಕಾರಿ ನೌಕರಿ ಕೊಡಿಸುವ ಭರವಸೆಯನ್ನು ಅಭ್ಯರ್ಥಿಗಳಿಗೆ ನೀಡುತ್ತಿದ್ದರು. ಸಿಐಡಿಯಿಂದ ರೆಸಾರ್ಟ್, ಅಪಾರ್ಟ್‌ಮೆಂಟ್‌ನಲ್ಲಿನ ಸಿಸಿ ಕ್ಯಾಮರಾ ಪುಟೇಜ್ ಡಿಲೀಟ್ ಆಗಿರುವುದನ್ನು ರಿಟ್ರಿವ್ ಮಾಡಲು ಮುಂದಾಗಿದ್ದಾರೆ.
ಮತ್ತೊಂದು ಕಡೆ ಸಿಐಡಿ ಕೂಡ ವಿವಿಧ ಆಯಾಮದಲ್ಲಿ ತನಿಖೆ ಕೈಗೊಂಡಿದ್ದು ಈ ವರೆಗೆ 400 ಅಭ್ಯರ್ಥಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ. ಪರೀಕ್ಷೆ ನಡೆಯುವ ಒಂದೇರಡು ಗಂಟೆ ಅಭ್ಯರ್ಥಿಗಳಿಗೆ ತರಬೇತಿ ಹಾಗೂ ಉತ್ತರನ್ನು ಹಂಚಿಕೆ ಮಾಡಿರುವುದನ್ನು ಅದೇ ಅಭ್ಯರ್ಥಿಗಳು ಕೆಲ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಿಕೊಂಡಿದಾರೆ ಎಂಬುದನ್ನು ಸಿಐಡಿ ಪತ್ತೆ ಮಾಡಿದೆ. ವಾರದ ಮುಂಚೆಯೇ ಪ್ರಶ್ನೆಗಳು ಕನ್ನಾಳೆ ಕೈ ಸೇರುತ್ತಿದ್ದವು. ಮಧ್ಯವರ್ತಿಗಳ ಸಹಾಯದಿಂದ ಅಭ್ಯರ್ಥಿಗಳಿಂದ ಪಡೆದ ಅಡ್ವಾನ್ಸ್ ಹಣ ಹಾಗೂ ನೀಡಿರುವ ಭರವಸೆಯಂತೆ ತರಬೇತಿ ದಿನಾಂಕ, ಸ್ಥಳವನ್ನು ಕನ್ನಾಳೆ ಅಭ್ಯರ್ಥಿಗಳಿಗೆ ಹೇಳುತ್ತಿದ್ದ. ಕನ್ನಾಳೆಯಿಂದ ತರಬೇತಿ ಪಡೆದಿದ್ದ ಕೆಲವರು ಅದೇ ಉತ್ತರನ್ನು ಬೇರೆಯವರಿಗೆ ಲಕ್ಷಾಂತರ ರೂ.ಗೆ ಮಾರಾಟ ಮಾಡಿಕೊಂಡಿದ್ದರು ಎಂಬುದು ತನಿಖೆ ವೇಳೆ ಬಯಲಿಗೆ ಬಂದಿದೆ.

400ಕ್ಕೂ ಹೆಚ್ಚು ಮಂದಿಯ ವಿಚಾರಣೆ

ಹಗರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಬರೋಬ್ಬರಿ 400ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಿದ್ದಾರೆ. ಆರೋಪಿಗಳು, ಅಭ್ಯರ್ಥಿಗಳು ಮತ್ತು ಕೆಪಿಎಸ್‌ಸಿ ಸಿಬ್ಬಂದಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಐಟಿ ರಿಟರ್ನ್:

ಅತಿ ಕಡಿಮೆ ಸಮಯದಲ್ಲಿ ಕೋಟ್ಯಾಂತರ ರೂಪಾಯಿ ಹಣ ಕನ್ನಾಳೆ ಸಂಪಾದಿಸಿದ್ದ. ತನ್ನ ಪತ್ನಿಯ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿರುವ ಕುರಿತು ಐಟಿ ರಿಟರ್ನ್ ಫೈಲ್ ಮಾಡಿದ್ದ. ಈ ಬಗ್ಗೆ ಸಿಐಡಿ ಅಧಿಕಾರಿಗಳು ವಿಚಾರಿಸಿದಾಗ, ಇದೆಲ್ಲ ಹಾಲಿನ ಹಣ ಎಂದಾಗಿ ಹೇಳಿಕೆ ನೀಡಿದ್ದಾನೆ. ಅಲ್ಲದೇ ತನ್ನದು ಟ್ರಾವೆಲ್ ಉದ್ಯಮ ಇರುವ ಬಗ್ಗೆಯೂ ಕನ್ನಾಳೆ ಅಧಿಕಾರಿಗಳ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.

ಜ್ಞಾನೇಂದ್ರ ಪ್ರೇಯಿಸಿಗೆ ಚಿನ್ನ ಖರೀದಿಸಿದ್ದು
ಬಾಲ್ಕಿ ಸಹಕಾರ ಬ್ಯಾಂಕ್‌ನಿಂದ

ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ್ ತನ್ನ ಪ್ರೇಯಸಿಗೆ ನೀಡಿದ ದುಬಾರಿ ಉಡುಗೊರೆಯ ಚಿನ್ನ ಖರೀದಿ ಮಾಡಿರುವ ಬಿಲ್ ಓಂ ಲಕ್ಷ್ಮೀ ಸಹಕಾರ ಬ್ಯಾಂಕ್ ಮೂಲಕವೇ ಚಿನ್ನದ ಅಂಗಡಿ ಖಾತೆಗೆ ಹಣ ವರ್ಗಾವಣೆಯಾಗಿರುವುದನ್ನು ಸಿಐಡಿ ಪತ್ತೆ ಮಾಡಿದೆ. ಆರೋಪಿ ಬಸವರಾಜ ಕನ್ನಾಳೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಾಲ್ಕಿ ಪಟ್ಟಣದ ಉಪನ್ಯಾಸಕರ ಬಡಾವಣೆಯ ಓಂ ಲಕ್ಷ್ಮೀ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರ ಕನಶೆಟ್ಟಿ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ನಡೆಸಿರುವುದು ಬೆಳಕಿಗೆ ಬಂದಿದೆ.
ಇದೇ ಬ್ಯಾಂಕ್‌ನಲ್ಲಿನ ಕನ್ನಾಳೆ ಖಾತೆಗೆ 70 ಲಕ್ಷ ರೂ. ಜಮೆಯಾಗಿದೆ. ಅಧಿಕಾರಿ ಯಾರೇಂದು ನನಗೆ ಗೊತ್ತಿಲ್ಲ. ನನಗೆ ಕನ್ನಾಳೆ ೋನ್ ಮಾಡಿ ಸೂಚಿಸಿದ್ದರಿಂದ ಅವರ ಖಾತೆಯಿಂದ 15 ಲಕ್ಷ ರೂ. ಚಿನ್ನದಂಗಡಿಯೊಂದರ ಖಾತೆಗೆ ಜಮೆ ಮಾಡಿರುವುದಾಗಿ ಸಹಕಾರ ಸಂಘದ ಅಧ್ಯಕ್ಷ ಕನಶೆಟ್ಟಿ ಹೇಳಿದ್ದಾರೆ.