ಹನಬರಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರೋಹಿಣಿ ಪಾಟೀಲ, ನಿಂಗಪ್ಪ ಅರಕೇರಿ, ಸತೀಶ ನಾಯ್ಕ, ಶೈಲಾ ಜಕ್ಕಣ್ಣವರ, ಪ್ರವಿಣ ದೊಡಮನಿ ಇತರರಿದ್ದರು. 
ರಾಜ್ಯ

ಆರ್ಥಿಕತೆ ಸುಧಾರಣೆಗೆ ಯೋಜನೆ ನೆರವು

ನೇಸರಗಿ: ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಆರ್ಥಿಕ ಮಟ್ಟ ಸುಧಾರಿಸಲು ಸಹಕಾರಿಯಾಗಿದೆ ಎಂದು ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ ಹೇಳಿದರು.
ಸಮೀಪದ ಹಣಬರಹಟ್ಟಿ ಗ್ರಾಮದಲ್ಲಿ ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಲಹೊಂಗಲ, ಪ್ರಗತಿ ಬಂಧು ಸ್ವ&ಸಹಾಯ ಸಂಗಳ ಒಕ್ಕೂಟ ನೇಸರಗಿ ವಲಯ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆ ಹಣಬರಹಟ್ಟಿ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ ಮಾತನಾಡಿ, ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಹಲವು ಯೋಜನೆ ಜಾರಿಗೊಳಿಸಿದ್ದು, ಮಹಿಳೆಯರು ಸದುಪಯೋಗ ಪಡೆದುಕೊಳ್ಳಿ ಎಂದರು.
ಕೆಳದಿ ಹಿರೇಮಠದ ಶ್ರೀ ಬಸವಲಿಂಗ ಶಿವಾಚಾರ್ಯ ಸ್ವಾಮೀಜಿ, ಸುತಗಟ್ಟಿಯ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಜಿಪಂ ಮಾಜಿ ಸದಸ್ಯ ನಿಂಗಪ್ಪ ಅರಕೇರಿ, ಗ್ರಾಪಂ ಅಧ್ಯೆ ಸುನಂದಾ ಉಳವಿ, ಭೀಮಶಿ ಗೋವಿ, ರಮೇಶ ಉಳವಿ, ಶ್ರೀಧರ ಯರಡಾಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಎಂ.ವಿಜಯಕುಮಾರ, ಮುಖ್ಯಶಿಕ್ಷಕಿ ಸುಮಿತ್ರಾ ಮೇಗೇರಿ, ಗಾಯತ್ರಿ ಪತ್ತಾರ, ಜ್ಞಾನವಿಕಾಸ ಸಮನ್ವಯಾಧಿಕಾರಿ ಶೈಲಾ ಜಕ್ಕಣ್ಣವರ, ಮೇಲ್ವಿಚಾರಕ ಪ್ರವಿಣ ದೊಡಮನಿ ಇತರರಿದ್ದರು.