ಕಲಬುರಗಿ : ಎಕನಾಮಿಕ್ ಮೀಷನ್ ಅಡಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಸೆಕ್ಷನ್ 8 ಕಂಪನಿಗಳನ್ನು ಸ್ಥಾಪಿಸಲು ನಿರ್ಧಾರ ಕೇಗೊಂಡಿದ್ದು, ಜೈವಿಕ ಆರ್ಥಿಕ ಮಿಷನ್ ಮೂಲಕ ರೈತರ ಆದಾಯ ಹೆಚ್ಚಳಕ್ಕೆ ಯೋಜನೆ, ರಕ್ತಹೀನತೆ ದೂರ ಮಾಡಲು ಎರಡು ವರ್ಷದ ಅಭಿಯಾನ ಮಾಡಲಾಗಿದೆ. ವಿಶೇಷವಾಗಿ ಗರ್ಭಿಣಿಯರಿಗೆ ಗಮನ ನೀಡಲಾಗುವುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಪೊಲೀಸ್ ತುಕ್ಕಡಿಗಳಿಂದ ಗೌರವ ವಂಧನೆ ಸ್ವೀಕರಿಸಿ ಮಾತನಾಡಿ,
ಕಲಬುರಗಿ ನಗರದಲ್ಲಿ ಮೂಲಸೌಕರ್ಯಕ್ಕೆ ಸೇಡಂ ರಸ್ತೆಯಲ್ಲಿ ಮೇಲ್ಸೇತುವೆ ಗೆ ಡಿಪಿಆರ್, ನಿವೇಶನ ರಹಿತರಿಗೆ 50 ಸಾವಿರ ನಿವೇಶನ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಬಡವರಿಗೆ ನೀಡಲು ಘೋಷಣೆ. ಇಂಜಿನಿಯರ್ಸ್ ಇದ್ದು, ಐಟಿ ಪಾರ್ಕ್ ಮಾಡಲು 30 ಎಕರೆಯಲ್ಲಿ ಸ್ಥಾಪಿಸಲು ನಿರ್ಧಾರ, ಎಐ ಆಧಾರದಲ್ಲಿ ಸಿಸಿಟಿವಿಯಲ್ಲಿ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಬಸವಣ್ಣನವರ ಹೋರಾಟದ ನೆಲ, ಸಮಾನತೆ, ಮಾನವೀಯತೆ, ಸಹಬಾಳ್ವೆಯ ಪುಣ್ಯಭೂಮಿ. 12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಭೂಮಿ ಇದು. ಸೋನಿಯಾಗಾಂಧಿ, ಮನ್ ಮೋಹನ್ ಸಿಂಗ್ ಳ, ಖರ್ಗೆ, ಧರ್ಮಸಿಂಗ್ ಅವರ ಶ್ರಮದಿಂದ 371 ಜೆ ಜಾರಿ ಇಂದ ಅಭಿವೃದ್ಧಿ ಆಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಇಡುವ ಪ್ರತಿ ಹೆಜ್ಜೆ ಚಿಕ್ಕದಿರಬಹುದು. ಆಲೋಚನೆಗಳು ದೊಡ್ಡದಾಗಿರಬೇಕು. ಕಟ್ಟಡ ನಿರ್ಮಾಣದ ಜೊತೆಗೆ ಕಟ್ಟಕಡೆಯ ವ್ಯಕ್ತಿಯ ಸಮೃದ್ಧಿಯೇ ನಮ್ಮ ಸರ್ಕಾರದ ಆಶಯ. ಅದನ್ನು ಮಾಡುತ್ತಿದೆ ಎಂದು ಹೇಳಿದರು.
ಹಸ್ತದಿಂದಲೇ ದೇಶದ ಅಭಿವೃದ್ಧಿ ಆಗಿದ್ದು, ಕರ್ನಾಟಕದಲ್ಲೂ ಅಭಿವೃದ್ಧಿ ಆಗಿದೆ. ಮತಗಳಿಕೆಗಾಗಿ ಅಲ್ಲ. ಜನಸೇವೆಗಾಗಿ ಪ್ರಜಾಸೇವೆ ಆರಂಭ. ರಾಜ್ಯ ಸರ್ಕಾರ ಮನೆ ಬಾಗಿಲಿಗೆ ತಂದು ಸಮಸ್ಯೆ ಬಗೆಹರಿಸುವುದೇ ಆಶಯವಾಗಿದೆ ಎಂದು ಹೇಳಿದರು.
10 ಸಾವಿರ ಯುವಕರ ಸಂಘ ನಿರ್ಮಾಣ. ಕಲ್ಯಾಣವೇ ನಮ್ಮ ಆದ್ಯತೆ. ಕಲ್ಯಾಣ ಕರ್ನಾಟಕ ರಾಜ್ಯಕ್ಕೆ ದೊಡ್ಡ ಶಕ್ತಿ ಪೀಠವಾಗಿದೆ. ತುಂಗಭದ್ರಾ, ಕೃಷ್ಣೆಯಂತೆ ಅಭಿವೃದ್ಧಿ ತುಂಬಿ ಹರಿಯುತ್ತಿದೆ. ತುಂಗಭದ್ರಾ ಡ್ಯಾಂ ಕಟ್ಟಡ ಹೆಚ್ಚಳಕ್ಕೆ ಮೂರು ರಾಜ್ಯದ ಸಿಎಂ, ಗೃಹ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ ಎಂದು ಹೇಳಿದರು.
25ಸಾವಿರ ಕೋಟಿ ರೂ . ಖರ್ಚು. ಕಕ ಅಭಿವೃದ್ಧಿಗೆ ರಕ್ತದ ಜೊತೆಗೆ ಬೆವರೂ ಹರಿಸಿದ್ದೇವೆ. ನೆಹರು ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದಲೇ ಹೈಕ ವಿಮೋಚನೆ. ಧರ್ಮಸಿಂಗ್ ಅವರ ವರದಿ ಆಧಾರದಲ್ಲಿ ಕೆಕೆಆರ್ ಡಿಬಿ ಸ್ಥಾಪನೆ. ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆ 371ಜೆ. ಅದರ ಉದ್ದೇಶ ಪ್ರತಿ ಮನೆಯಲ್ಲಿ ವೈದ್ಯರು, ಸರ್ಕಾರಿ ನೌಕರರು, ಇಂಜಿನಿಯರ್ ಗಳು ಆಗುವ ಉದ್ದೇಶ ಈಡೇರುತ್ತಿದೆ ಎಂದು ಹೇಳಿದರು.
ಸೋನಿಯಾ ಗಾಂಧಿ 440 ಲೋಕಸಭೆ ಸದಸ್ಯರನ್ನು ಸೇರಿಸಿ, 371 ಜೆ ತಂದಿದ್ದು, ಡಾ.ಮಲ್ಲಿಕಾರ್ಜುನ ಖರ್ಗೆ ಅವರು. 12 ವರ್ಷವಾಯಿತು. 41,103ಕಾಮಗಾರಿ, 32 ಸಾವಿರ ಕಾಮಗಾರಿ ಪೂರ್ಣ. 79 ಸಾವಿರ ಯುವಕರಿಗೆ ಸರ್ಕಾರಿ ಉದ್ಯೋಗ, 32 ಸಾವಿರ ಉದ್ಯೋಗ ಭರ್ತಿ. ಕಕ ಭಾಗಕ್ಕೆ ಉದ್ಯೋಗ ದೊರೆಯಲಿದೆ ಎಂದು ಹೇಳಿದರು.
ಪ್ರತಿ ವರ್ಷ 5 ಸಾವಿರ ಕೋಟಿ ಕೊಡಲಾಗುತ್ತಿದೆ. ಅತಿ ದೊಡ್ಡ ಇಎಸ್ ಐ ಆಸ್ಪತ್ರೆ ಕಲಬುರಗಿಯಲ್ಲಿ ಸ್ಥಾಪಿಸಲಾಗಿದೆ. ಕಲ್ಯಾಣ ಕರ್ನಾಟಕ ಆರೋಗ್ಯದ ಪವಿತ್ರ ಕ್ಷೇತ್ರವಾಗಿ ಮಾರ್ಪಟ್ಟಿದೆ. ಯಾದಗಿರಿ, ಕೊಪ್ಪಳ, ಬೀದರ್ ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಕಿದ್ವಾಯಿ ಆಗಿದೆ. ಆರೋಗ್ಯ ಭಾಗ್ಯ ದೊರಕಿಸಲಾಗಿದೆ ಎಂದು ಹೇಳಿದರು.
ಬಂಜಾರರು ಪರಿಶಿಷ್ಟ ಪಟ್ಟಿಗೆ ಸೇರಿಸಿದ್ದು ಕಾಂಗ್ರೆಸ್ ಪಕ್ಷ. ಕೈಬಿಡುವ ಪ್ರಶ್ನೆಯೇ ಇಲ್ಲ. ಕಲ್ಯಾಣ ಪಥ 1050 ರಸ್ತೆಗಳ ಅಭಿವೃದ್ಧಿ, 120 ಕೋಟಿ ರೂ. ಪ್ರತಿ ಕ್ಷೇತ್ರಕ್ಕೆ ನೀಡಲಾಗಿದೆ. 370ಕ್ಕೂ ಕೆಎಪಿಎಸ್ ಶಾಲೆಗಳ ಸ್ಥಾಪನೆಗೆ ನಿರ್ಧಾರ. ಆರೋಗ್ಯಕ್ಕೆ1790 ಕೋಟಿ ರೂ., 120ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗೆ ಉತ್ತೇಜನ. 500 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗುರಿ ಹೊಂದಲಾಗಿದೆ ಎಂದು ಹೇಳಿದರು.
ನವ ಕರ್ನಾಟಕ, ಸದೃಢ ಸರ್ಕಾರ ನಮ್ಮ ಸಂಕಲ್ಪವಾಗಿದೆ. 2028ರಲ್ಲಿ ನಮ್ಮ ಸರ್ಕಾರ ತರಲು ಶ್ರಮಿಸಬೇಕು. 2029ರಲ್ಲಿ ದೊಡ್ಡ ಶಕ್ತಿಯನ್ನು ನೀಡಬೇಕು. ಜನರಿಗೆ ಉಪಕಾರ ಸ್ಮರಣೆ ಇದ್ದು, ಸರ್ಕಾರ ನೀಡಬೇಕು ಎಂದು ಹೇಳಿದರು
ಎಕನಾಮಿಕ್ ಮೀಷನ್ ಅಡಿ ಈ ಭಾಗದ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಸೆಕ್ಷನ್ 8 ಕಂಪನಿಗಳನ್ನು ಸ್ಥಾಪಿಸಲು ನಿರ್ಧಾರ, ಜೈವಿಕ ಆರ್ಥಿಕ ಮಿಷನ್ ಮೂಲಕ ರೈತರ ಆದಾಯ ಹೆಚ್ಚಳಕ್ಕೆ ಯೋಜನೆ, ರಕ್ತಹೀನತೆ ದೂರ ಮಾಡಲು ಎರಡು ವರ್ಷದ ಅಭಿಯಾನ ಮಾಡಲಾಗಿದೆ. ವಿಶೇಷವಾಗಿ ಗರ್ಭಿಣಿಯರಿಗೆ ಗಮನ. ಕಲಬುರಗಿ ನಗರದಲ್ಲಿ ಮೂಲಸೌಕರ್ಯಕ್ಕೆ ಸೇಡಂ ರಸ್ತೆಯಲ್ಲಿ ಮೇಲ್ಸೇತುವೆ ಗೆ ಡಿಪಿಆರ್, ನಿವೇಶನ ರಹಿತರಿಗೆ 50 ಸಾವಿರ ನಿವೇಶನ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಬಡವರಿಗೆ ನೀಡಲು ಘೋಷಣೆ. ಇಂಜಿನಿಯರ್ಸ್ ಇದ್ದು, ಐಟಿ ಪಾರ್ಕ್ ಮಾಡಲು 30 ಎಕರೆಯಲ್ಲಿ ಸ್ಥಾಪಿಸಲು ನಿರ್ಧಾರ, ಎಐ ಆಧಾರದಲ್ಲಿ ಸಿಸಿಟಿವಿಯಲ್ಲಿ ನಿಯಂತ್ರಣಕ್ಕೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಪ್ರವಾಸೋದ್ಯಮದ ಬೀದರ, ಬಸವಕಲ್ಯಾಣ, ಕಲಬುರಗಿ, ವಿಜಯನಗರ ಸೇರಿದಂತೆ ಹಲವು ಪ್ರಮುಖ ಐತಿಹಾಸಿಕ ತಾಣಗಳಿವೆ. ಪುಣ್ಯ ಕ್ಷೇತ್ರಗಳ ಯಾತ್ರಾ ಸಂಕೀರ್ಣ ರೂಪಿಸಲು ನಿರ್ಧರಿಸಲಾಗಿದೆ. ಯುವಕರಿಗೆ ಕ್ರೀಡೆಗೆ ಶಕ್ತಿ ನೀಡಲು ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣಕ್ಕೆ ಸಮಗ್ರ ಪುನರ್ ಅಭಿವೃದ್ಧಿ ಮಾಡಿ, ಸ್ಫೋರ್ಟ್ ಸಿಟಿ ಮಾಡಲು ನಿರ್ಧಾರ ಎಂದು ಹೇಳಿದರು.
10 ಕೋಟಿ ವೃಕ್ಷ ಅಭಿಯಾನ ಮಾಡಲು, ಪ್ರತಿ ವರ್ಷ ಒಂದು ಕೋಟಿ ವೃಕ್ಷ ಅಭಿಯಾನ ಮಾಡಲು ಕಾರ್ಯಕ್ರಮ ಮಾಡಲು ನಿರ್ಧಾರ. ಬಲವಾಗಿ ಉಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ.ಪಾಟೀಲ್, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಶಶೀಲ ನಮೋಶಿ, ಹಂಪನಗೌಡ ಬಾದರ್ಲಿ, ಡಾ.ಚಂದ್ರಶೇಖರ್ ಪಾಟೀಲ್, ಸಂಸದ ರಾಧಾಕೃಷ್ಣ ದೊಡ್ಡಮನಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.