ಗುಬ್ಬಿ ತಾಲೂಕಿನ ಕಾಡಬೆಟ್ಟನಹಳ್ಳಿಯ Economic developmentಡೇರಿಯಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ವಿಸ್ತಾರಣಾಧಿಕಾರಿ ಮಹೇಶ್​ ಉದ್ಘಾಟಿಸಿದರು. ವಿಸ್ತಾರಣಾಧಿಕಾರಿ ರಾಜು, ಕಾರ್ಯದರ್ಶಿ ಶಿವಕುಮಾರ್​, ಮಾಜಿ ಅಧ್ಯಕ್ಷ ನಾರಾಯಣಪ್ಪ, ಮಾಜಿ ಉಪಾಧ್ಯಕ್ಷ ರಾಜ, ಮಾಜಿ ನಿರ್ದೇಶಕರಾದ ಗಿರಿಜಮ್ಮ, ಲಕ್ಷಿ$್ಮದೇವಮ್ಮ, ರಂಗಪ್ಪ, ಜಗದೀಶ್​ ಇತರರಿದ್ದರು. 
ರಾಜ್ಯ

ಹೈನುಗಾರಿಕೆಯಿಂದ ಆರ್ಥಿಕ ಅಭಿವೃದ್ಧಿ

ತುಮಕೂರು ಡೆಸ್ಕ್
ಎಂ.ಎನ್​.ಕೋಟೆ: ಹಾಲು ಉತ್ಪಾದಕರ ಸಹಕಾರದಿಂದ ಪ್ರಸಕ್ತ ವರ್ಷ ಡೇರಿ ಒಂದು ಲಕ್ಷ ರೂ.ಲಾಭಗಳಿಸಿದೆ ಎಂದು ವಿಸ್ತರಣಾಧಿಕಾರಿ ಮಹೇಶ್​ ತಿಳಿಸಿದರು.Economic development
ಗುಬ್ಬಿ ತಾಲೂಕಿನ ಕಾಡಬೆಟ್ಟನಹಳ್ಳಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಹೈನುಗಾರಿಕೆಯಿಂದ ಆರ್ಥಿಕ ಅಭಿವೃದ್ಧಿ ಸಾಧಿಸಬಹುದು.
 ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಡೇರಿಗೆ ಹೆಚ್ಚಿನ ಹಾಲು ಸರಬರಾಜು ಮಾಡಿದವರಿಗೆ ಬೋನಸ್​ ನೀಡಲಾಗುವುದು ಎಂದು ತಿಳಿಸಿದರು.