ನಿರ್ಮಲಾ ಸೀತಾರಾಮನ್ 
ರಾಜ್ಯ

ಹಂಪಿಯಲ್ಲಿ ಅರ್ಥಿಕ ಇಲಾಖೆ ಸಭೆ

ಪ್ರಮುಖ ಮುಖ್ಯಾಂಶಗಳು

  • 17 ಜನ ಐಎಎಸ್ ಅಧಿಕಾರಿಗಳ ಜತೆ ವಿತ್ತ ಸಚಿವೆ ಚಿಂತನೆ ಮಂಥನ
ಹೊಸಪೇಟೆ: ತಾಲೂಕಿನ ಮಲಪನಗುಡಿಯ ವಿಜಯಶ್ರೀ ಹೆರಿಟೇಜ್ ನಲ್ಲಿ ಡಿ.20 ಮತ್ತು 21ರಂದು ವಿತ್ತ ಸಚಿವೆ ನಿರ್ಮಲ ಸೀತರಾಮನ್ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಆರ್ಥಿಕ ಇಲಾಖೆ ಸಂಭವಿಸಿದಂತೆ 17 ಐಎಎಸ್ ಅಧಿಕಾರಿಗಳ ಜತೆ ಚಿಂತನೆ ಮಂಥನ ನಡೆಯಲಿದೆ.
ಕೇಂದ್ರ ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ‌ ಕಚೇರಿ ಸಭಾಂಗಣ ಹೊರತು ಪಡಿಸಿ ಪ್ರತಿವರ್ಷ ದೇಶದ ವಿವಿಧ ಸ್ಥಳಗಳನ್ನು ಆಯ್ಕೆ‌ ಮಾಡಿ ನಂತರ ಸಭೆ ನಡೆಸುತ್ತಾರೆ. ಅದರಂತೆ, ಈ ಭಾರಿ ತಾಲೂಕಿನ ಮಲಪನಗುಡಿಯ ವಿಜಯಶ್ರೀ ಹೆರಿಟೇಜ್ ನಲ್ಲಿ ಸಭೆ ನಡೆಸಲು ಭರದ ಸಿದ್ದತೆ ನಡೆದಿದೆ. ಕಳೆದ ನವೆಂಬರ್ ತಿಂಗಳಲ್ಲಿ ಕೇಂದ್ರದಿಂದ ಅಧಿಕಾರಿಗಳ ತಂಡ ಬೇಟಿ‌ ನೀಡಿ ಹಂಪಿ‌ ಪರಿಸರದಲ್ಲಿ ಸಭೆ ನಡೆಸಲು ಪರಿಶೀಲನೆ ನಡೆದಿತ್ತು.
ಅಕ್ಟೋಬರ್ ನಲ್ಲಿ‌ ಮೂರು ದಿನಗಳ‌ ಕಾಲ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಪ್ರವಾಸ‌ಕೈಗೊಂಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತರಾಮನ್ ಹಂಪಿ‌ ಬೇಟಿ ನೀಡಿದರು. ಹಂಪಿ ಪರಿಸರ ಧಾರ್ಮಿಕ, ಐತಿಹಾಸಿ, ಪ್ರವಾಸೋದ್ಯಮ ಮಾತ್ರವಲ್ಲದೇ ಕೃಷಿ, ಗಣಿಗಾರಿಕೆ ಹಾಗೂ ಇತರೆ ಕ್ಷೇತ್ರಗಳಿಗೂ ಹೆಸರುವಾಸಿಯಾಗಿದೆ. ಆದ್ದರಿಂದ ಈ ಭಾಗದಲ್ಲಿ ಅನುಕೂಲ ಆಗುವಂತೆ ವಿಶೇಷ ಯೋಜನೆ ರೂಪಿಸುತ್ತಾರಾ? ಅಧಿಕಾರಿಗಳ ಜತೆ ನಡೆಯುವ ಚಿಂತನ ಮಂಥನನ ಹಂಪಿ ಪರಿಸರಕ್ಕೂ ಲಾಭವಾಗಲಿ ಎಂಬುದು ಈ ಭಾಗದ ಜನರ ಆಶಯವಾಗಿದೆ.
========