Eat cereals daily. 
ರಾಜ್ಯ

ದಿನನಿತ್ಯ ಸಿರಿಧಾನ್ಯ ಸೇವಿಸಿ

ಪಾತಪಾಳ್ಯ: ಸಮತೋಲಿತ ಆಹಾರ ಕ್ರಮ ಮತ್ತು ಜೀವನ ಶೈಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪ್ರಮುಖ ಅಸ್ತ್ರವಾಗಿದೆ ಎಂದು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಎನ್​.ನಾಗಮಣಿ ತಿಳಿಸಿದರು.
ಕಳ್ಳಿಪಲ್ಲಿ ಆಯುಷ್ಮಾನ್​ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೋಷಣ್​ ಅಭಿಯಾನದಲ್ಲಿ ಮಾತನಾಡಿ, ಜನರ ಜೀವನ ಶೈಲಿ ಬದಲಾಗುತ್ತಿದಂತೆ ಸಾಂಪ್ರಾಯದಾಯಿಕ, ಆರೋಗ್ಯಕರ ತಿನಿಸುಗಳು ದೂರವಾಗಿವೆ. ರಾಗಿ, ಸಜ್ಜೆ, ನವಣೆ, ಬರಗು, ಸಾಮೆ, ಊದಲು, ಆರ್ಕ್​, ಕೊರಲೆ ಮೊದಲಾದ ಸಿರಿಧಾನ್ಯಗಳಲ್ಲಿ ಪೋಷಕಾಂಶ ಯಥೇಚ್ಚವಾಗಿದೆ. ಸಿರಿಧಾನ್ಯಗಳು ಹೆಚ್ಚಿನ ಪ್ರಮಾಣದ ಪ್ರೋಟಿನ್​, ನಾರಿನಾಂಶ, ಬಿ ಮತ್ತು ಇ ಗುಂಪಿನ ಜೀವಸತ್ವಗಳನ್ನು ಹೊಂದಿವೆ. ಅಗತ್ಯ ಅಮೈನೊ, ಪೋಲಿಕ್​ ಆಂಮ್ಲಗಳಿಂದ ಕೂಡಿದೆ ಎಂದರು.
ಆಶಾ ಕಾರ್ಯಕರ್ತೆ ಜ್ಯೋತಿ ಮಾತನಾಡಿ, ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಪೌಷ್ಠಿಕಾಂಶಯುಕ್ತ ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಅಗತ್ಯ. ಬೆಳೆಯುವ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಚೆನ್ನಾಗಿರುತ್ತದೆ. ಚಿಕ್ಕವಯಸ್ಸಿನಲ್ಲಿಯೇ ಹರಡುವ ರೋಗಗಳಿಂದ ಪಾರಾಗಿ ಆರೋಗ್ಯವಂತರಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಆಶಾ ಕಾರ್ಯಕರ್ತೆ ಶ್ರೀಶಾ, ವರಲಕ್ಷಿ, ಅಂಜಿನಮ್ಮ, ಹೇಮಾವತಿ, ರಾಧಮ್ಮ, ವೆಂಕಟಲಕ್ಷಿ$್ಮ ಇತರರು ಇದ್ದರು.