ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಈಸ್ಟ್ಪಾಯಿಂಟ್ ಕಾಲೇಜ್ ಆಫ್ ಇಂಜಿನಿಯರಿಂಗ್ಆ್ಯಂಡ್ ಟೆಕ್ನಾಲಜಿ ತನ್ನ ಜ್ಞಾನಪ್ರಭಆವರಣದಲ್ಲಿ ‘ಪದವಿ ಪ್ರದಾನ ಸಮಾರಂಭ2026’ಅನ್ನುಯಶಸ್ವಿಯಾಗಿ ನಡೆಸಿತು.ಪದವಿಪಡೆದ ಇಂಜಿನಿಯರಿಂಗ್ ವಿದ್ಯಾರ್ಥಿಗಳುತಮ್ಮ ವೃತ್ತಿಪರ ಜೀವನದ ಮುಂದಿನಹಂತಕ್ಕೆ ಪಾದಾರ್ಪಣೆ ಮಾಡಿದರು.
ಸಮಾರಂಭವನ್ನುಉದ್ಘಾಟಿಸಿ ಮಾತನಾಡಿದ ಡಾ.ಜಿ.ಪರಮೇಶ್ವರ,ಪದವಿಪಡೆದ 527ವಿದ್ಯಾರ್ಥಿಗಳನ್ನುಅಭಿನಂದಿಸಿದರು.ವೇಗವಾಗಿಬದಲಾಗುತ್ತಿರುವ ಜಗತ್ತಿನಸವಾಲುಗಳನ್ನು ಎದುರಿಸಲುವಿದ್ಯಾರ್ಥಿಗಳು ಸಿದ್ಧರಾಗಿರಬೇಕು.ಭಾರತದಶಿಕ್ಷಣ ವ್ಯವಸ್ಥೆಯು ವಿಶ್ವದಯಾವುದೇ ವಿಶ್ವವಿದ್ಯಾಲಯಗಳಿಗೆಸರಿಹೊಂದುವಂತಿದ್ದು,ಭಾರತೀಯಪದವೀಧರರು ಜಾಗತಿಕವಾಗಿ ಅದರಲ್ಲೂವಿಶೇಷವಾಗಿ ತಂತ್ರಜ್ಞಾನ ಮತ್ತುವೈದ್ಯಕೀಯ ಕ್ಷೇತ್ರದಲ್ಲಿಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ.ಭಾರತವುವಿಶ್ವದ ಪ್ರಮುಖ ನುರಿತ ಮಾನವಸಂಪನ್ಮೂಲ ಸೃಷ್ಟಿಸುವ ಕೇಂದ್ರವಾಗಿದೆಎಂದು ಪರಮೇಶ್ವರ ವಿವರಿಸಿದರು.ಇದೇವೇಳೆ ಸಂಸ್ಥೆಯ ಶ್ರಮ,ಗುಣಮಟ್ಟದಶಿಕ್ಷಣ ನೀತಿಗೆ ಡಿಸಿಎಂ ಮೆಚ್ಚುಗೆವ್ಯಕ್ತಪಡಿಸಿದರು.
ಸಮಾರಂಭದಲ್ಲಿವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್ಅತಿಥಿಗಳಾಗಿ ಭಾಗವಹಿಸಿದ್ದರು.ಸಂಸ್ಥೆಯಅಧ್ಯಕ್ಷೆ ಬಿ.ಎಲ್.ರಮಾದೇವಿವೆಂಕಟಪತಿ,ಟ್ರಸ್ಟಿಹಾಗೂ ಸಿಇಒಗಳಾದ ಎಸ್.ವಿ.ಪ್ರಮೋದ್ಗೌಡ ಮತ್ತು ಎಸ್.ವಿ.ರಾಜೀವ್ಗೌಡ,ಪ್ರಾಂಶುಪಾಲಡಾ.ಪ್ರದೀಪ್‌ಕುಮಾರ್ದೀಕ್ಷಿತ್ ಉಪಸ್ಥಿತರಿದ್ದರು.
ಸಂಸ್ಥೆಯಸಂಸ್ಥಾಪಕ ಅಧ್ಯಕ್ಷರಾದ ಡಾ.ಎಸ್.ಎಂ.ವೆಂಕಟಪತಿಅವರಿಗೆ ಗೌರವ ನಮನ ಸಲ್ಲಿಸುವಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ,ಶೈಕ್ಷಣಿಕಶ್ರೇಷ್ಠತೆಯ ಭಾಗವಾಗಿ,ಪ್ರತಿಯೊಂದುವಿಭಾಗದ ‘ಅತ್ಯುತ್ತಮ ವಿದ್ಯಾರ್ಥಿ’ಹಾಗೂ ಸಂಸ್ಥೆಯ ‘ಅತ್ಯುತ್ತಮವಿದ್ಯಾರ್ಥಿ’ ವ್ಯಕ್ತಿಗತಪ್ರಶಸ್ತಿಗಳನ್ನು ನೀಡಲಾಯಿತು.