ಗೃಹ ಬಳಕೆ cylinder ಸಿಲಿಂಡರ್​ಗಾಗಿ ಸರದಿಸಾಲಿನಲ್ಲಿ ಕಾಯುತ್ತಿರುವ ಗ್ರಾಹಕರು. 
ರಾಜ್ಯ

ಸಿಲಿಂಡರ್​ಗಾಗಿ ಮುಂಜಾನೆಯೇ ಕ್ಯೂ cylinder

ಪ್ರಮುಖ ಮುಖ್ಯಾಂಶಗಳು

  • ಮನೆಬಾಗಿಲಿಗೆ ಬಾರದ ಗ್ಯಾಸ್​, ಸಾರ್ವಜನಿಕರ ಆಕ್ರೋಶ
  • ಏಜೆನ್ಸಿ ಮುಂದೆ ಸಾಲುಗಟ್ಟಿದ ಗ್ರಾಹಕರು
ಬಂಗಾರಪೇಟೆ: ತಾಲೂಕಿನ ಗ್ಯಾಸ್​ ಏಜೆನ್ಸಿಯಲ್ಲಿ ಗೃಹ ಬಳಕೆಯ cylinder ಸಿಲಿಂಡರ್​ಗಳ ವಿತರಣೆಯಲ್ಲಿ ಉಂಟಾಗಿರುವ ವಿಳಂಬ ಮತ್ತು ಅವ್ಯವಸ್ಥೆಯಿಂದ ಗ್ರಾಹಕರು ಪ್ರತಿದಿನ ಸಂಕಷ್ಟ ಅನುಭವಿಸುವಂತಾಗಿದೆ. ನಿಯಮದಂತೆ ಮನೆ ಬಾಗಿಲಿಗೆ ತಲುಪಬೇಕಾದ ಸಿಲಿಂಡರ್​ಗಾಗಿ ಗ್ರಾಹಕರು ಮುಂಜಾನೆ 6 ಗಂಟೆಯಿಂದಲೇ ಖಾಲಿ ಸಿಲಿಂಡರ್​ ಹೊತ್ತು ಏಜೆನ್ಸಿ ಮುಂದೆ ಸರದಿಯಲ್ಲಿ ನಿಲ್ಲಬೇಕಾದ ದುಸ್ಥಿತಿ ನಿಮಾರ್ಣವಾಗಿದೆ.
ಬುಕ್ಕಿಂಗ್​ ಆದರೂ ಸಿಗುತ್ತಿಲ್ಲ: ಗ್ರಾಹಕರು ನೋಂದಣಿ ಮಾಡಿದ ಕೂಡಲೇ ಕಂಪನಿಯಿಂದ "ವಿತರಣೆ ಮಾಹಿತಿ" ಹಾಗೂ ಒಟಿಪಿ ಸಂದೇಶ ಮೊಬೈಲ್​ಗೆ ಬರುತ್ತಿದೆ. ಆದರೆ, ಸಂದೇಶ ಬಂದ ದಿನವೇ ಸಿಲಿಂಡರ್​ ಮನೆಗೆ ತಲುಪುತ್ತಿಲ್ಲ. ಇದರಿಂದ ಆತಂಕಗೊಂಡ ಗ್ರಾಹಕರು ಖಾಲಿ ಸಿಲಿಂಡರ್​ ಹಿಡಿದು ಏಜೆನ್ಸಿಗೆ ಓಡಿ ಬರುತ್ತಿದ್ದಾರೆ. ಗಂಟೆಗಟ್ಟಲೆ ಕಾದರೂ ಸ್ಟಾಕ್​ ಇಲ್ಲವೆಂಬ ಕಾರಣ ನೀಡಿ ವಾಪಸ್​ ಕಳುಹಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿತರಣಾ ವ್ಯವಸ್ಥೆಯ ಲೋಪ: ಬೆಳಗ್ಗೆ 9 ಗಂಟೆಗೆ ಕಚೇರಿ ತೆರೆದ ನಂತರ ಸಾಲಿನಲ್ಲಿ ನಿಂತು ಹಣ ಪಾವತಿಸಿ ರಸೀದಿ ಪಡೆಯಬೇಕು. ಬಳಿಕ ಲಾರಿಯಿಂದ ಸಿಲಿಂಡರ್​ ಪಡೆಯಲು ಮತ್ತೆ ಕಾಯಬೇಕು. ಒಂದು ವೇಳೆ ಸ್ಟಾಕ್​ ಮುಗಿದರೆ ಆ ದಿನದ ಕಾಯುವಿಕೆ ವ್ಯರ್ಥವಾಗುತ್ತದೆ. ಇದರಿಂದ ದಿನಗೂಲಿ ಕಾರ್ಮಿಕರು, ಉದ್ಯೋಗಸ್ಥರು, ಮಹಿಳೆಯರು ಹಾಗೂ ವಯೋವೃದ್ಧರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾಹಕರ ಬೇಡಿಕೆಗಳೇನು?
* ನೋಂದಣಿ ಮಾಡಿದ ನಂತರ ನಿಗದಿತ ಸಮಯಕ್ಕೆ ಮನೆ ಬಾಗಿಲಿಗೆ ಸಿಲೆಂಡರ್​ ವಿತರಣೆ
* ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕೌಂಟರ್​ ವ್ಯವಸ್ಥೆ
* ಸ್ಟಾಕ್​ ಮತ್ತು ವಿತರಣಾ ಮಾಹಿತಿಯಲ್ಲಿ ಪಾರದರ್ಶಕತೆ
* ಸಮಸ್ಯೆ ಇದ್ದಲ್ಲಿ ಅಧಿಕಾರಿಗಳು ಮಧ್ಯಪ್ರವೇಶಿಸಿ ಬಗೆಹರಿಸಬೇಕಿದೆ
ಮಾ.28ರಂದೇ ಸಿಲಿಂಡರ್​ ವಿತರಣೆಯ ಸಂದೇಶದ ಬಂದಿದೆ. ಆದರೆ ಈವರೆಗೂ ಮನೆಗೆ ಬಂದಿಲ್ಲ. ಕಳೆದ ಮೂರು ದಿನಗಳಿಂದ ಖಾಲಿ ಸಿಲಿಂಡರ್​ ಹೊತ್ತು ಏಜೆನ್ಸಿಗೆ ಬಂದು ಬರಿಗೈಲಿ ವಾಪಸ್​ ಹೋಗುತ್ತಿದ್ದೇನೆ. ಈ ಅವ್ಯವಸ್ಥೆ ಕೇಳುವವರೇ ಇಲ್ಲದಂತಾಗಿದೆ.
> ಕೃಷ್ಣಪ್ಪ, ಗ್ರಾಹಕ
ನಮಗೆ ಪ್ರತಿದಿನ 504 ಸಿಲಿಂಡರ್​ಗಳು ಸರಬರಾಜಾಗುತ್ತಿವೆ. ಆದರೆ ಬೇಡಿಕೆ 1,000ಕ್ಕೂ ಹೆಚ್ಚಿದೆ. ಈ ಅಂತರವೇ ವಿಳಂಬಕ್ಕೆ ಪ್ರಮುಖ ಕಾರಣ.
> ಹೆಸರು ಇಚ್ಛಿಸದ ಏಜೆನ್ಸಿ ಸಿಬ್ಬಂದಿ