ಹಂಚೀಪುರ ಬಳಿ ರಾಷ್ಟಿ$ಯ ಹೆದ್ದಾರಿ ಲ್ಯಾಂಕೋ ಟೋಲ್​ ಬಳಿ ಪರಿಶೀಲನೆ ಮಾಡಿದ ಪೊಲೀಸರು.  
ರಾಜ್ಯ

50 ಲಕ್ಷ ರೂ. ಮೌಲ್ಯದ ಇ-ಸಿಗರೇಟ್​ ಜಪ್ತಿ / NELMANGAL

ಬೆಂಗಳೂರು ಗ್ರಾಮಾಂತರ ಡೆಸ್ಕ್
ನೆಲಮಂಗಲ: ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಬಂದಿದ್ದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ನಿಷೇಧಿತ ಇ&ಸಿಗರೇಟ್​ಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡು, 6  ಮಂದಿಯನ್ನು ಬಂಧಿಸಿದ್ದಾರೆ. 
ಬುಧವಾರ ತಡರಾತ್ರಿ ದುಬೈನಿಂದ ಬೆಂಗಳೂರಿಗೆ ಬಂದು ಬೆಂಗಳೂರಿನಿಂದ ಮಂಗಳೂರು ಮಾರ್ಗವಾಗಿ ಇ&ಸಿಗರೇಟ್​ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ರೂಪಿಸಿ ತಾಲೂಕಿನ ಹಂಚೀಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಕ್​ಪೋಸ್ಟ್​ ಹಾಕಿ ಮೂರೂ ಕಾರುಗಳನ್ನು ತಡೆದಾಗ ಕಾರುಗಳ ಡಿಕ್ಕಿಯಲ್ಲಿ ಹಲವು ಬಾಕ್ಸ್​ಗಳಲ್ಲಿ ಇ&ಸಿಗರೇಟ್​ ಪತ್ತೆಯಾಗಿವೆ. 
ಈ ವೇಳೆ ಇ&ಸಿಗರೇಟ್​ ಹಾಗೂ 3 ಎರ್ಟಿಗಾ ಕಾರುಗಳು ಸೇರಿ 9 ಫೋನ್​ಗಳುನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳ ಸಾಗಣೆ ಮಾಡುತ್ತಿದ್ದ 6 ಮಂದಿಯನ್ನು ಬಂಧಿಸಿ ಪೊಲೀಸರು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಅಂತಾರಾಷ್ಟ್ರೀಯ ಸಂಪರ್ಕಗಳು, ಹಣಕಾಸು ವ್ಯವಹಾರಗಳನ್ನು ಎನ್​ಸಿಬಿ(ನಾಕೋರ್ಟಿಕ್ಸ್​ ಕಂಟ್ರೋಲ್​ ಬ್ಯೂರೋ) ಮತ್ತು ಕಸ್ಟಮ್ಸ್​ ಇಲಾಖೆಯೊಂದಿಗೆ ಸಂಯೋಜಿಸಿ ತನಿಖೆ ನಡೆಸಲಾಗುತ್ತಿದೆ.
ರಾಜ್ಯದ ವಿವಿಧೆಡೆ ಮಾರಾಟ : ದೇಶದಲ್ಲಿ ಇ&ಸಿಗರೇಟ್​ ಮಾರಾಟ ಮತ್ತು ಸಾಗಣೆ ನಿಷೇಧಿಸಲಾಗಿದೆ. ಹೀಗಾಗಿ ದುಬೈನಿಂದ ರಹಸ್ಯವಾಗಿ ತರಿಸಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದರಿಂದ ಅಕ್ರಮ ಸಾಗಣೆ ಜೋರಾಗಿದೆ ಎನ್ನಲಾಗಿದ್ದು, ಈ ಗ್ಯಾಂಗ್​ ದುಬೈನಿಂದ ಆಮದು ಮಾಡಿಕೊಂಡು, ಮಂಗಳೂರು, ಮೈಸೂರು, ಬೆಂಗಳೂರು ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಮಾರಾಟ ಮಾಡುವ ಯೋಜನೆ ಹೊಂದಿತ್ತು ಎಂದು ತಿಳಿದುಬಂದಿದೆ.
ಕಾರ್ಯಾಚರಣೆ ಹೇಗಿತ್ತು? : ನೆಲಮಂಗಲ ಇನ್​ಸ್ಪೆಕ್ಟರ್​ ಮತ್ತು ತಂಡಕ್ಕೆ ನಿಷೇಧಿತ ಇ&ಸಿಗರೇಟ್​ಗಳನ್ನು ಸಾಗಿಸುತ್ತಿರುವ ಗೌಪ್ಯ ಮಾಹಿತಿ ದೊರೆತಿತ್ತು. ನ.12ರಂದು ರಾತ್ರಿ 2 ಗಂಟೆ ಸುಮಾರಿಗೆ ಚೆಕ್​ಪೋಸ್ಟ್​ ಹಾಕಿ ಮೂರು ಕಾರುಗಳನ್ನು ತಪಾಸಣೆ ಮಾಡಿದಾಗ ಸರಕು ಪತ್ತೆಯಾಯಿತು. ಇದು ದೊಡ್ಡ ಜಾಲ. ದುಬೈನಿಂದ ಆಮದು ಮಾಡಿಕೊಂಡು ಕರ್ನಾಟಕದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಇ-ಸಿಗರೇಟ್​ ಎಂದರೇನು? : ಇ&ಸಿಗರೇಟ್​ ಬ್ಯಾಟರಿ ಚಾಲಿತ ಸಾಧನವಾಗಿದ್ದು, ನಿಕೋಟಿನ್​ ದ್ರಾವಣವನ್ನು ಉಸಿರಾಡುವ ಮತ್ತು ಹೊರಹಾಕುವ ಏರೋಸಾಲ್​ (ಮಂಜು) ಆಗಿ ಪರಿವರ್ತಿಸುತ್ತದೆ. ಸಿಗರೇಟ್​ಗಳಿಗಿಂತ ಭಿನ್ನವಾಗಿ, ಈ ಸಾಧನಗಳು ತಂಬಾಕು ಎಲೆಗಳನ್ನು ಸುಡುವುದಿಲ್ಲ ಅಥವಾ ಬಳಸುವುದಿಲ್ಲ. ಆದಾಗ್ಯೂ, ಇದು ಸಾಮಾನ್ಯ ಸಿಗರೇಟಿನಂತೆ ಕಾಣುತ್ತದೆ ಮತ್ತು ಬಳಕೆದಾರರಿಗೆ ನಿಜವಾದ ಸಿಗರೇಟಿನಂತೆಯೇ  ನೀಡುತ್ತದೆ. ಅವುಗಳನ್ನು ಇ&ಹುಕ್ಕಾಗಳು, ವೇಪ್​ ಪೆನ್​ಗಳು ಮತ್ತು ಎಲೆಕ್ಟ್ರಾನಿಕ್​ ನಿಕೋಟಿನ್​ ವಿತರಣಾ ವ್ಯವಸ್ಥೆಗಳು ಮುಂತಾದ ಹಲವು ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. 
ಆನ್​ಲೈನ್​ ಲಭ್ಯ : ಇ&ಸಿಗರೇಟ್​ಗಳು ನಿಕೋಟಿನ್​, ಕೆಮಿಕಲ್​ ಫ್ಲೇವರ್​ಗಳನ್ನು ಹೊಂದಿದ್ದು, ಯುವಕರಲ್ಲಿ ವ್ಯಸನ, ಶ್ವಾಸಕೋಶ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಸರ್ಕಾರ ನಿಷೇಧಿಸಿದ್ದರೂ, ಆನ್​ಲೈನ್​ ಮತ್ತು ಅಕ್ರಮ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.