DySP Muralidhar transferred 
ರಾಜ್ಯ

ಡಿವೈಎಸ್​ಪಿ ಮುರಳೀಧರ್​ ವರ್ಗಾವಣೆ

ಚಿಕ್ಕಬಳ್ಳಾಪುರ ಡೆಸ್ಕ್
ಚಿಂತಾಮಣಿ: ಪಿ.ಮುರಳೀಧರ್​ ಅವರನ್ನು 2023 ಅಕ್ಟೋಬರ್​ 4ರಂದು ಸರ್ಕಾರ ಚಿಂತಾಮಣಿ ಉಪವಿಭಾಗದ ಡಿವೈಎಸ್​ಪಿಯಾಗಿ ನೇಮಕ ಮಾಡಿತ್ತು.
ಪ್ರಸ್ತುತ ಅವರನ್ನು ವಿಜಯನಗರ ಜಿಲ್ಲೆ ಹೊಸಪೇಟೆ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರದ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು ಪರವಾಗಿ ಸೌಮೇಂದು ಮುಖರ್ಜಿ ಭಾನುವಾರ ಆದೇಶ ಹೊರಡಿಸಿದ್ದಾರೆ.
2 ವರ್ಷಕ್ಕೊಮ್ಮೆ ಡಿವೈಎಸ್​ಪಿಗಳು ವರ್ಗಾವಣೆಗೊಳ್ಳುತ್ತಿದ್ದು ಚಿಂತಾಮಣಿ ಉಪವಿಭಾಗದ ಡಿವೈಎಸ್​ಪಿ ಪಿ.ಮುರಳೀಧರ್​ ಮಾತ್ರ 2023 ಅಕ್ಟೋಬರ್​ 4ರಂದು ಇಲ್ಲಿ ಅಧಿಕಾರ ವಹಿಸಿಕೊಂಡ ನಂತರ ಹೆಚ್ಚುವರಿಯಾಗಿ 6 ತಿಂಗಳು ಸೇವೆ ಸಲ್ಲಿಸಿರುವುದು ವಿಶೇಷ.