ನಾಗನೂರ ಬಸವಾಶ್ರಮದಲ್ಲಿ ಬಸವರಾಜ ಗೌಡರ, ಲಕ್ಷಿ$್ಮ ರಡರಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ಅಶೋಕ ಪಟ್ಟಣ, ಗುರುಮಹಾಂತ ಸ್ವಾಮೀಜಿ, ಬಸವಪ್ರಕಾಶ ಸ್ವಾಮೀಜಿ, ಬಸವಾಶ್ರಮದ ಬಸವಗೀತಾ ತಾಯಿ, ನೀಲಲೋಚನಾ ತಾಯಿ, ಲಕ್ಷಿ$್ಮ ಆರಿಬೆಂಚಿ, ರವಿ ಯಡಹಳ್ಳಿ ಇತರರಿದ್ದರು. 
ರಾಜ್ಯ

ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಗುರುಬಸವ ಮಠ ಶ್ರಮ

ವಿಜಯವಾಣಿ ಸುದ್ದಿಜಾಲ ರಾಮದುರ್ಗ
ಬಸವಾದಿ ಪ್ರಮಥರ ಆಶಯದಂತೆ ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂಬ ಸಂಕಲ್ಪಕ್ಕೆ ನಾಗನೂರ ಗುರುಬಸವ ಮಠ ಶ್ರಮಿಸುತ್ತಿರುವುದು ಶ್ಲಾನೀಯ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ತಾಲೂಕಿನ ನಾಗನೂರ ಗ್ರಾಮದ ಬಸವಾಶ್ರಮದಲ್ಲಿ ಏರ್ಪಡಿಸಿದ್ದ ಬಸವಧರ್ಮ ಉತ್ಸವ ಹಾಗೂ ಅಲ್ಲಮಪ್ರಭುಗಳ ಜಯಂತ್ಯುತ್ಸವ ಕಾರ್ಯಕ್ರಮ ಸಮಾರೋಪದ ಅಧ್ಯತೆ ವಹಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಪ್ರತಿ ವರ್ಷ ಬಸವ ತತ್ತ$$$್ವದನ್ವಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಿರುವುದು ಹೆಮ್ಮೆಯ ಸಂಗತಿ. ಬಸವ ಪ್ರಚಾರ ಕಾರ್ಯಕ್ರಮ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು. ಇಳಕಲ್ಲ ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಇಂದಿಗೂ ಸಮಾನತೆ, ಮೌಢ್ಯ ನಿವಾರಣೆಗೆ ನಿರಂತರ ಹೋರಾಡಬೇಕಿದೆ ಎಂದು ಕಳವಳ ವ್ಯಕ್ತಪಡಿಸಿದರು. ಗುರುಬಸವ ಮಠದ ಬಸವಪ್ರಕಾಶ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವಾಶ್ರಮದ ಬಸವಗೀತಾ ತಾಯಿ, ಹೊಸಕೇರಿ ಲಹಾರೇಶ್ವರ ಮಠದ ನೀಲಲೋಚನಾ ತಾಯಿ ಆಶೀರ್ವಚನ ನೀಡಿದರು. ಲಕ್ಷಿ$್ಮ ಆರಿಬೆಂಚಿ, ರವಿ ಯಡಹಳ್ಳಿ, ಮಹಾನಂದಾ ಪಾಟೀಲ, ರಾಜೇಶ್ವರಿ ಯಾದವಾಡ, ಅನ್ನಪೂರ್ಣಾ ಲಂಬುನವರ, ಸದಾಶಿವ ಗಾಯಕವಾಡ, ಶಿವಪ್ಪ ನಿರಾಕಾರಿ, ಅಶೋಕ ಕುಲಗೋಡ, ಜೆ.ಎಲ್​.ಎಂ. ತಾಲೂಕು ಮಹಿಳಾ ಟಕದ ಅಧ್ಯೆ ಗೀತಾ ಆರಿಬೆಂಚಿ ಇತರರಿದ್ದರು.
ಈ ಸಂದರ್ಭದಲ್ಲಿ ವಿವಿಧ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ ಕಾತರಕಿಯ ಬಸವರಾಜ ಗೌಡರ, ಏಷಿಯನ್​ ಟೇಕ್ವಾಂಡೋ ಚಾಂಪಿಯನ್​ ಶಿಪ್​ನಲ್ಲಿ ಕಂಚಿನ ಪದಕ ಪಡೆದ ಮೂಡಲಗಿಯ ಲಕ್ಷಿ$್ಮ ರಡರಟ್ಟಿ ಅವರನ್ನು ಸನ್ಮಾನಿಸಲಾಯಿತು. ಈರಣ್ಣ ಗದಗಿನ ಮತ್ತು ಪಾಂಡುರಂಗ ಬಡಿಗೇರ ಪ್ರಾರ್ಥಿಸಿದರು. ನಿವೇದಿತಾ ಡಿ.ಪಿ. ನಿರೂಪಿಸಿದರು.