ಕಲಬುರಗಿ ವಿಟಿಯು ಪಿಜಿ ಸೆಂಟರ್ನಲ್ಲಿ ಮಂಗಳವಾರ ಆಯೋಜಿಸಿದ್ದ ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ಬ್ರಹ್ಮಕುಮಾರ ಪಿಯೂಷ್ ಚಾಲನೆ ನೀಡಿದರು. ಡಾ.ಶುಭಾಂಗಿ ಡಿಸಿ, ಸವಿತಾ ಬೆಹೆಂಜಿ, ಸಂಜಯ ಪಟ್ಟಣಶೆಟ್ಟಿ ಇತರರಿದ್ದರು.
- ವಿಟಿಯು ಕಲಬುರಗಿ ಪಿಜಿ ಸೆಂಟರ್
ಕಲಬುರಗಿ: ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರ (ವಿ.ಟಿ.ಯು ಸಿಪಿಜಿಎಸ್) ವತಿಯಿಂದ ದೇಶವ್ಯಾಪಿ ನಶಾ ಮುಕ್ತ ಭಾರತ ಅಭಿಯಾನದ ಅಂಗವಾಗಿ ಜಾಗೃತಿ ಕಾರ್ಯಕ್ರಮ ಮಂಗಳವಾರ ಆಯೋಜಿಸಲಾಗಿತ್ತು.
ಮಾದಕ ವಸ್ತುಗಳ ಮುಕ್ತ ಹಾಗೂ ಸಾಮಾಜಿಕವಾಗಿ ಜವಾಬ್ದಾರಿಯುತ ಸಮಾಜ ನಿರ್ಮಾಣದ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನವದೆಹಲಿ ಲೋದಿರಸ್ತೆಯ ಬ್ರಹ್ಮಕುಮಾರಿ ಇಂಜಿನಿಯರ್ಗಳು ಮತ್ತು ವಾಸ್ತುಶಿಲ್ಪಿಗಳ (ಎಸ್ಇಎ) ವಿಭಾಗದ ವಲಯ ಸಂಯೋಜಕ ಬ್ರಹ್ಮಕುಮಾರ ಪಿಯೂಷ್ ಮುಖ್ಯ ಅತಿಥಿಯಾಗಿದ್ದರು. ಗೌರವ ಅತಿಥಿಯಾಗಿ ಸವಿತಾ ಬೆಹೆಂಜಿ ಉಪಸ್ಥಿತರಿದ್ದರು. ಎನ್ಎಸ್ಎಸ್ ಸಂಯೋಜಕ ಸಂಜಯ ಪಟ್ಟಣಶೆಟ್ಟಿ ಸ್ವಾಗತಿಸಿದರು.
ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬ್ರಹ್ಮಕುಮಾರ ಪಿಯೂಷ್ ಮಾತನಾಡಿ, ಯುವಜನರಲ್ಲಿ ಮಾದಕ ವಸ್ತುಗಳ ದುರುಪಯೋಗ ತಡೆಯಲು ಆತ್ಮಶಾಸನ, ಆಧ್ಯಾತ್ಮಿಕ ಜಾಗೃತಿ ಮತ್ತು ಮೌಲ್ಯಾಧಾರಿತ ಜೀವನ ಶೈಲಿಯ ಅಗತ್ಯ ಒತ್ತಿ ಹೇಳಿ, ಶಿಣ ಸಂಸ್ಥೆಗಳು ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ನಿರ್ದೇಶಕಿ ಡಾ.ಶುಭಾಂಗಿ ಡಿ.ಸಿ. ಮಾತನಾಡಿ, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಜಾಗೃತಿ ಮೂಡಿಸುವಲ್ಲಿ ಮುಂದಾಗಬೇಕು. ಸಾಮಾಜಿಕ ಕಲ್ಯಾಣ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ಅಭಿಯಾನಗಳಿಗೆ ಸಂಸ್ಥೆ ಬದ್ಧವಾಗಿದೆ ಎಂದರು.
ನಶಾ ಮುಕ್ತ ಭಾರತ ಪ್ರತಿೆ ಸ್ವೀಕರಿಸಲಾಯಿತು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಎನ್ಎಸ್ಎಸ್ ಸ್ವಯಂಸೇವಕರು ಮಾದಕ ವಸ್ತುಗಳ ಮುಕ್ತ ಭಾರತ ನಿರ್ಮಾಣಕ್ಕೆ ತಮ್ಮ ಕೈಜೋಡಿಸುವುದಾಗಿ ಸಂಕಲ್ಪ ಮಾಡಿದರು.