Drought declaration by the end of August
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮಳೆಯ ಅಭಾವವನ್ನಾಧಾರಿಸಿ ಆಗಸ್ಟ್ ಅಂತ್ಯಕ್ಕೆ ಬರಪೀಡಿತ ಪ್ರದೇಶಗಳ ಪಟ್ಟಿ ಘೋಷಿಸಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ರೈನ್ ಶ್ಯಾಡೋ ಏರಿಯಾ ಗುರುತು
ಕರಾವಾಳಿ, ಮಲೆನಾಡು ಪ್ರದೇಶದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಉಳಿದ ಕಡೆಗೆ ತೀವ್ರ ಅಭಾವ ಇದೆ. ಹೊಸದುರ್ಗದಿಂದ ಅನಂತರಪುರ ಜಿಲ್ಲೆವರೆಗೆ ರೈನ್ ಶ್ಯಾಡೋ ಏರಿಯಾ ಎಂದು ಗುರುತಿಸಲಾಗಿದೆ. ಜಲಾಶಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನೀರಿಲ್ಲ. ಇರುವುದನ್ನು ಕುಡಿಯುವ ನೀರಿನ ಸಲುವಾಗಿ ಮೀಸಲಿರಿಸಲಾಗಿದೆ. ಬೆಳೆಗಳಿಗಾಗಿ ಹರಿಸಲಾಗುವುದಿಲ್ಲ ಎಂದು ಸಚಿವರು ಹೇಳಿದರು.
ಜಿಲ್ಲಾಡಳಿತದಲ್ಲಿ ಹಮ್ಮಿಕೊಂಡಿದ್ದ ಬರ ನಿರ್ವಹಣೆ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
150 ವರ್ಷದ ಹಿಂದೆ ಭೀಕರ ಬರ ಕಾಡಿತ್ತು. ಈಗ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಇದೆ. ಭಯಾನಕ ಚಿತ್ರಣ ಗೋಚರವಾಗುತ್ತಿದೆ. ಮಳೆಯ ಅಭಾವದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶೇ.40ಕ್ಕಿಂತ ಕಡಿಮೆ ಬಿತ್ತನೆಯಾಗಿದ್ದು ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾದರೂ ಒಳ್ಳೆಯ ಬೆಳೆ ಸಿಗುವ ನಿರೀೆ ಇಲ್ಲ. ಕೃಷಿ ಚಟುವಟಿಕೆಯಲ್ಲಿ ಭಾರಿ ಹಿನ್ನಡೆಯಾಗಿದೆ ಎಂದರು.
ಆರ್.ಅಶೋಕ್ಗೆ ತಿರುಗೇಟು
ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದಿರುವ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಡಿಸಿಎಂ ತಿರುಗೇಟು ನೀಡಿದರು. ಅವರಿಗೆ ಮಾಹಿತಿ ಕೊರತೆ ಇದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ನಾನು ಬರ ಪರಿಸ್ಥಿತಿಯ ಕುರಿತು ಎಷ್ಟು ಸಭೆಗಳನ್ನು ನಡೆಸಿದ್ದೇವೆ ಎಂಬುದರ ಲೆಕ್ಕ ಕೊಡುತ್ತೇವೆ. ರಾಜ್ಯದಲ್ಲಿ ಬರ ಇರುವುದರಿಂದ ಮುಖ್ಯಮಂತ್ರಿಗಳು ಪ್ರವಾಸ ಕೈಗೊಂಡು, ಕಲಬುರಗಿ, ಬೆಳಗಾವಿ ಕಂದಾಯ ವಿಭಾಗದ ವ್ಯಾಪ್ತಿಯ ಸಭೆಗಳನ್ನು ನಡೆಸಿದ್ದಾರೆ. ಈ ಬಗ್ಗೆ ಆರ್.ಅಶೋಕ್ ಮಾಹಿತಿ ಪಡೆದು ಮಾತನಾಡಬೇಕು ಎಂದು ಸಚಿವ ಪರಮೇಶ್ವರ ಗುಡುಗಿದರು.
ಬರ ಘೋಷಣೆಯ ನಿಯಮಗಳ ಸಡಿಲಿಕೆ, ದೇಶದಲ್ಲಿನ ಪ್ರಾಕೃತಿಕ ವಿಕೋಪ ವಾತಾವರಣ ನಿರ್ಮಾಣವನ್ನಾಧಾರಿಸಿ ರಾಷ್ಟ್ರೀಯ ವಿಪತ್ತು ೂಷಣೆ ಹಾಗೂ ಎನ್ಡಿಆರ್ಎಫ್ ಹಣ ಶ್ರೀ ಬಿಡುಗಡೆಯ ಅತ್ಯಗತ್ಯತೆ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆಯಲಾಗಿದೆ ಎಂದು ಡಾ.ಜಿ.ಪರಮೇಶ್ವರ ಹೇಳಿದರು.
ಏನ್ ಸಮಸ್ಯೆ ವೆಂಕಟೇಶಪ್ಪ!
ಏನ್ ವೆಂಕಟೇಶಪ್ಪ, ಹೆಂಗಿದ್ದೀಯಾ? ನಿಮ್ಮ ಪರಿಸ್ಥಿತಿ ಹೇಗಿದೆ?. ಮಳೆ ಬೀಳದೆ ದೊಡ್ಡ ಸಮಸ್ಯೆಯಾಗಿದೆಯಲ್ಲ!.ಚಿಕ್ಕಬಳ್ಳಾಪುರ ತಾಲೂಕಿನ ಗಿಡ್ನಹಳ್ಳಿ ಸಮೀಪದ ರೈತ ಜಮೀನಿಗೆ ತೆರಳಿ, ಸಮಸ್ಯೆಯ ಬಗ್ಗೆ ಡಿಸಿಎಂ ಮಾಹಿತಿ ಪಡೆದುಕೊಂಡಿದ್ದು ಹೀಗೆ!. ರೈತನೊಂದಿಗೆ ಓಡಾಡಿ ಸಚಿವರು ಏಳೆಂಟು ನಿಮಿಷ ಚರ್ಚಿಸಿದರು.
ಕೇಂದ್ರ ಸರ್ಕಾರವು ಬರ ಘೋಷಿಸಲು ಕೆಲ ನಿಯಮಗಳನ್ನು ರೂಪಿಸಿದೆ. ಇದರ ಮಾನದಂಡಗಳನ್ನು ಪಾಲಿಸಿದಾಗ ಅನುದಾನ ಬಿಡುಗಡೆಯಾಗುತ್ತದೆ. ಆದರೆ, ರಾಜ್ಯಗಳಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ ಕಾಲಕ್ಕೆ ಅನುಗುಣವಾಗಿ ನೀತಿಗಳನ್ನು ಪರಿಷ್ಕರಿಸಬೇಕಾಗಿದೆ ಎಂದರು.
ಈ ಬಾರಿ ಸರಿಯಾಗಿ ಮಳೆ ಬಿದ್ದಿಲ್ಲ. ಬರದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರವು ಸದಾ ರೈತರ ಪರ ಇರುತ್ತದೆ. ಪರಿಹಾರ ಕೆಲಸಗಳ ವಿಚಾರವಾಗಿ ಚರ್ಚಿಸಿದ್ದು ಸಂಕಷ್ಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುವುದು ಎಂದರು. ಭೂಮಿ ಹದ ಮಾಡಿಕೊಂಡು ಮಳೆಗಾಗಿ ಎದುರು ನೋಡುತ್ತಿದ್ದ ರೈತ 3 ಎಕರೆ ಜಮೀನನ್ನು ಹಾಗೆಯೇ ಬಿಟ್ಟಿದ್ದರು. ಇದನ್ನು ಡಿಸಿಎಂಗೆ ತೋರಿಸುವುದರ ಜತೆಯಲ್ಲಿಯೇ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಬೇಕು. ಇಲ್ಲದಿದ್ದಲ್ಲಿ ಕೃಷಿಕರು ತುಂಬಾ ನೋವು ಅನುಭವಿಸಬೇಕಾಗುತ್ತದೆ ಎಂದು ರೈತ ವೆಂಕಟೇಶಪ್ಪ ಅಳಲು ತೋಡಿಕೊಂಡರು.